Breaking News

ಅಂಬೋಲಿ ಪಾಲ್ಸ್ ಹತ್ತಿರ ಉರಳಿದ ಬಂಡೆಕಲ್ಲು…

 

ಬೆಳಗಾವಿ-ಪಕ್ಕದ ಮಹಾರಾಷ್ಟ್ರ,ಗೋವಾ,ಮತ್ತು ಬೆಳಗಾವಿಯ ಗಡಿಯಲ್ಲಿ ವಿಪರೀತ ಮಳೆ ಸುರಿಯುತ್ತಿದೆ.ಬೆಳಗಾವಿಯ ಗಡಿಯಲ್ಲಿರುವ ಮಹಾರಾಷ್ಟ್ರದ ಸಾವಂತವಾಡಿ ರಸ್ತೆಯಲ್ಲಿ ಇರುವ ಅಂಬೋಲಿ ಫಾಲ್ಸ್ ಬಳಿ ದೊಡ್ಡ ಬಂಡೆ ಕಲ್ಲು ಉರಳಿ ಬಿದ್ದಿದೆ.

ಬೆಳಗಾವಿ- ಸಾವಂತವಾಡಿ ರಸ್ತೆಯಲ್ಲಿ ಬೆಳಗಾವಿ ಗಡಿ ದಾಟಿದ ತಕ್ಷಣ ಪ್ರಸಿದ್ದ ಅಂಬೋಲಿ ಫಾಲ್ಸ್ ಬರುತ್ತದೆ.ಈ ಫಾಲ್ಸ್ ನೋಡಲು,ಬೆಳಗಾವಿ,ಗೋವಾ,ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಜನ ಬರ್ತಾರೆ ಆದ್ರೆ ಏಕಾಏಕಿ ದೊಡ್ಡ ಗಾತ್ರದ ಬಂಡೆ ಕಲ್ಲು ಇದೇ ಫಾಲ್ಸ್ ಬಳಿ ರಸ್ತೆಯ ಮೇಲೆ ಬಂಡೆ ಕಲ್ಲು ಉರಳಿ ಬಿದ್ದಿದೆ.

ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು ಜೆಸಿಬಿ ಸಹಾಯದಿಂದ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆಯ ಸಿಬ್ಬಂಧಿಗಳು ಮತ್ತು ಕಾರ್ಮಿಕರು ಸೇರಿ ಬಂಡೆ ಕಲ್ಲನ್ನು ಪಕ್ಕಕ್ಕೆ ಸರಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ.

ಬಂಡೆಕಲ್ಲು ಉರಳಿ ಈ ಭಾಗದಲ್ಲಿ ಆತಂಕದ ಸೃಷ್ಟಿಯಾಗಿದ್ದು ಇಲ್ಲಿ ಹೋಗುವ ಪ್ರವಾಸಿಗರು ಮುನ್ನಚ್ಚರಿಕೆ ವಹಿಸುವದು ಅಗತ್ಯವಾಗಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *