ಬೆಳಗಾವಿ-ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಆದ್ರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಸುರೇಶ ಅಂಗಡಿ ಕುಟಬದವರಿಗೆ ಟಿಕೆಟ್ ಕೊಡಿ ಎಂದು ಒನ್ ಲೈನ್ ಸ್ಟೇಟಮೆಂಟ್ ಕೊಟ್ಟು ಸುಮ್ಮನಾಗಿದ್ದಾರೆ.ಆದ್ರೆ ಪರದೆಯ ಹಿಂದಿನ ಆಟ ಬೇರೆಯೇ ಆಗಿದೆ.
ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಬಳಿಕ ಬೆಳಗಾವಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದ್ದು ಕಳೆದ ಒಂದು ವಾರದಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ VVIP ಹೆಸರೊಂದು ಹರಿದಾಡುತ್ತಿದೆ. ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ,ಮಾಜಿ ರಾಜ್ಯಸಭಾ ಸದಸ್ಯ,ವೀರಶೈವ ಲಿಂಗಾಯತ ಸಂಘಟನೆಯ ಉಪಾಧ್ಯಕ್ಷ ,ಕೆ ಎಲ್ ಇ ಸಂಸ್ಥೆಯ ಅಷ್ಠ ಋಷಿ ಎಂದೇ ಕರೆಯಲ್ಪಡುವ ಪ್ರಭಾಕರ ಕೋರೆ ಅವರ ಪುತ್ರ ಅಮೀತ ಕೋರೆ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಕೆನ್ನುವ ಕೂಗು ಕೇಳಿಬರುತ್ತಿದೆ.
ಪ್ರಭಾಕರ ಕೋರೆ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದು ಇತ್ತ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿ ಹೈಕಮಾಂಡ್ ಅಮೀತ ಕೋರೆ ಅವರಿಗೆ ಬಿಜೆಪಿ ಟಿಕೆಟ್ ಕೊಡದಿದ್ದರೆ,ಪ್ರಭಾಕರ ಕೋರೆ ಅವರ ಮುಂದಿನ ನಡೆ ಏನಾಗಬಹುದು ಎಂಬುದು ನಿಗೂಢವಾಗಿದ್ದು,ಪ್ರಭಾಕರ ಕೋರೆ ಮತ್ತು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರ ನಡುವೆ ಅತ್ಯುತ್ತಮ ಬಾಂಧವ್ಯವಿದೆ.ಈ ಸ್ನೇಹ ಲೋಕಸಭೆ ಉಪ ಚುನಾವಣೆ ಯಲ್ಲಿ ವರ್ಕೌಟ್ ಆದರೂ ಅಚ್ಚರಿ ಪಡಬೇಕಿಲ್ಲ..
ಬೆಳಗಾವಿ ಲೋಕಸಭೆ ಉಪ ಚುನಾವಣೆ ಬೆಳಗಾವಿ ಜಿಲ್ಲಾ ರಾಜಕಾರಣವನ್ನೇ ಅದಲು ಬದಲು ಮಾಡುವದರಲ್ಲಿ ಸಂಶಯವೇ ಇಲ್ಲ…