ಬೆಳಗಾವಿ- ಚಿತ್ರ ನಿರ್ಮಾಪಕ ರಾಯಣ್ಣ ಸೊಸೈಟಿಯ ರೂವಾರಿ ಆನಂದ ಅಪ್ಪುಗೋಳ್ ಈಗ ಜೈಲು ಪಾಲಾಗಿದ್ದು ಸೊಸೈಟಿಯಲ್ಲಿ ಹಣ ಡಿಪಾಜಿಟ್ ಮಾಡಿದ ಗ್ರಾಹಕರು ಕಂಗಾಲಾಗಿದ್ದು ಹಣ ವಾಪಸ್ ಪಡೆಯಲು ಮುಂದಿನ ಹೋರಾಟದ ಸ್ಕೆಚ್ ಹಾಕಲು ಸಾವಿರಾರು ಗ್ರಾಹಕರು ಇಂದು ಬೆಳಗಾವಿಯ ಕ್ಯಾಂಪ್ ಪ್ರದೇಶದ ದೇವಸ್ಥಾನವೊಂದರಲ್ಲಿ ಸಮಾವೇಶಗೊಳ್ಳಲಿದ್ದಾರೆ
ರಾಯಣ್ಣ ಸೊಸೈಟಿ ದಿವಾಳಿಯಾಗಿದೆ ನೂರಾರು ಕೋಟಿ ಪಂಗನಾಮ ಹಾಕಿಸಿಕೊಂಡ ಸಾವಿರಾರು ಜನ ಗ್ರಾಹಕರು ಹಣ ವಾಪಸ್ ಪಡೆಯಲು ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದಾರೆ ಗ್ರಾಹಕರ ಹೋರಾಟಕ್ಕೆ ದಿಕ್ಕು ದಿಸೆ ಇಲ್ಲ ಇವರ ಹೋರಾಟಕ್ಕೆ ನಾಯಕತ್ವದ ಕೊರತೆಯಿಂದ ಗ್ರಾಹಕರ ಧ್ವನಿ ಜಿಲ್ಲಾಡಳಿತದ ಕಿವಿಗೆ ಬೀಳುತ್ತಿಲ್ಲ ಹೀಗಾಗಿ ಈ ಗ್ರಾಹಕರು ನ್ಯಾಯಕ್ಕಾಗಿ ನಿರಂತರವಾಗಿ ಪರದಾಡುತ್ತಲೇ ಇದ್ದಾರೆ
ಬೆಳಗಾವಿಯ ಸಿಸಿಬಿ ಪೋಲೀಸರು ಆನಂದ ಅಪ್ಪುಗೋಳ್ ಅವರನ್ನು ಮುಂಬಯಿ ಯಿಂದ ಹಿಡಿದು ತಂದಿದ್ದಾರೆ ಅಪ್ಪುಗೋಳ್ ಜೈಲು ಪಾಲಾಗಿದ್ದು ಇನ್ನು ಮುಂದೆ ನಮ್ಮ ಗತಿ ಏನು ನಮಗೆ ಹಣ ವಾಪಸ್ ಕೊಡಿಸೋರು ಯಾರು? ನಮ್ಮ ಹಣ ನಮಗೆ ಸಿಗಬಹುದೇ ಮುಂದೆ ಏನಾಗಬಹುದು ? ನ್ಯಾಯಲಯ ರಾಯಣ್ಣ ಸೊಸೈಟಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಡಿಪಾಜಿಟ್ ಮಾಡಿದ ಹಣ ವಾಪಸ್ ಸಿಗಬಹುದೇ ಎನ್ನುವ ಹಲವಾರು ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಿವೆ
ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ರಾಯಣ್ಣ ಸೊಸೈಟಿಯ ಎಲ್ಲ ಶಾಖೆಗಳ ಗ್ರಾಹಕರು ಕ್ಯಾಂಪ್ ಪ್ರದೇಶದಲ್ಲಿ ಸೇರುತ್ತಿದ್ದಾರೆ ಇನ್ನೊಂದು ಕಡೆ ಆನಂದ ಅಪ್ಪುಗೋಳ್ ಪೋಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ