ಬೆಳಗಾವಿ- ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ಯಾಬಿನೆಟ್ ರಚನೆ ಆಗಲಿದೆ.ನನಗೆ ಕಾಲ್ ಬಂದಿಲ್ಲ.ಈ ಕುರಿತು ಬಿ ಎಸ್ ವೈ ಜೊತೆ ಮಾತನಾಡುವೆ,ಸಚಿವ ಸ್ಥಾನ ಸಿಗದಿದ್ದರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ಶಾಸಕ ಆನಂದ ಮಾಮನಿ ಹೇಳಿದ್ದಾರೆ.
ಹೊಸ ಮುಖ್ಯಮಂತ್ರಿಯ ಹೊಸ ಕ್ಯಾಬಿನೆಟ್ ಗೆ ಬೆಳಗಾವಿ ಜಿಲ್ಲೆಯಿಂದಲೇ ಬಂಡಾಯ ಶುರುವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರ ಪಟ್ಟಿಯೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು ಪತ್ರಿಕಾಗೋಷ್ಢಿ ನಡೆಸಿ,ಇಂದು ಪ್ರಮಾಣವಚನ ಸ್ವೀಕಾರ ಮಾಡಲಿರುವ ಸಚಿವರ ಹೆಸರುಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.ತದನಂತರ ಬಹಳಷ್ಟು ಜನ ಶಾಸಕರು ಬಂಡಾಯ ಏಳುವ ಸಾಧ್ಯತೆ ಇದೆ.
ವಿಧಾನಸಭೆಯ ಉಪ ಸಭಾಪತಿ ನನಗೆ ಕಾಲ್ ಬಂದಿಲ್ಲ ಎಂದು ಸಿಟ್ಟಾಗಿದ್ದಾರೆ.ಮಂತ್ರಿ ಸ್ಥಾನ ಸಿಗದಿದ್ದರೆ,ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿ,ಬೆಂಬಲಿಗರ ಜೊತೆ ಸಮಾಲೋಚನೆ ಮಾಡಿ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಆನಂದ ಮಾಮನಿ ಬಿಜೆಪಿ ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ