ಖಾನಾಪೂರದಲ್ಲಿ ಹೈವೇ,ಹವಾ,ಶಾಸಕಿ ಅಂಜಲಿ ಕಾಳಜಿ ವ್ಹಾ..ರೇ..ವ್ಹಾ…!!!

*ಲೋಂಡಾ-ರಾಮನಗರ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ದುರಸ್ತಿ ಹಾಗೂ ಖಾನಾಪೂರ ಪಟ್ಟಣದ ಮುಖ್ಯ ರಸ್ತೆಯನ್ನು ಸಿ ಸಿ ರಸ್ತೆ ಮಾಡಬೇಕೆಂದು ಹಾಗೂ ಸೇತುವೆಯ ಎತ್ತರವನ್ನು ಹೆಚ್ಚಿಸುವ ಸಲುವಾಗಿ ಖಾನಾಪೂರದ ಕಾರ್ಯಸಾಮ್ರಾಜ್ಞಿ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನೀತಿನ್ ಗಡ್ಕರಿ ರವರನ್ನು ಭೇಟಿಯಾದರು.*

ಇಂದು ಸಂಜೆ 5 ಗಂಟೆಗೆ ದೆಹಲಿಯಲ್ಲಿ ಮಾನ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಶಾಸಕಿ ಡಾ ಅಂಜಲಿತಾಯಿ ಅವರು ಖಾನಾಪೂರ-ರಾಮನಗರ ರಸ್ತೆಯ ದುಃಸ್ಥಿತಿ ಎಷ್ಟರ ಮಟ್ಟಿಗೆ ಎಂದರೆ 40 ಹಳ್ಳಿಗಳು ರಸ್ತೆ ಸಂಪರ್ಕ ಇಲ್ಲದೇ ನರಳುತ್ತಿವೆ ಎಂದು ಮನವರಿಕೆ ಮಾಡಿಕೊಟ್ಟರು.

ಲೋಂಡಾ-ರಾಮನಗರ ರಸ್ತೆ ಹಾಗೂ ಸೇತುವೆ ಎಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಎಂಬುದನ್ನ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಚಿವರಿಗೆ ತೋರಿಸಿ ಮುಖಾಂತರ ಪ್ರಸ್ತುತ ವಾಸ್ತು ‌ಸ್ಥಿತಿಯನ್ನು ಮನವರಿಸಿದರು. ಮಾನ್ಯ ಶಾಸಕರ ಮನವಿಗೆ ಸ್ಪಂದಿಸಿ, ಪ್ರಸ್ತುತ ವಾಸ್ತವವನ್ನು ಮನಗಂಡ ಮಾನ್ಯ ಸಚಿವರು ತಕ್ಷಣವೇ ಎನ್ಎಚ್ಎಐನ ಕರ್ನಾಟಕ ಮುಖ್ಯಸ್ಥರಿಗೆ ಕರೆ ಮಾಡಿ ತಕ್ಷಣವೇ ರಸ್ತೆ ದುರಸ್ತಿ ಮಾಡಿ ಹೊಸ ಟೆಂಡರ್ ಕರೆಯುವಂತೆ ಹೇಳಿದರು.

ಖಾನಾಪೂರ ಪಟ್ಟಣದ ಮುಖ್ಯ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ನಿರ್ಮಿಸಲು ಮತ್ತು ಪಟ್ಟಣದ ಮಲಪ್ರಭಾ ನದಿ ಸೇತುವೆಯನ್ನು ಹೊಸ ಎತ್ತರದ ಸೇತುವೆಯನ್ನಾಗಿ ನಿರ್ಮಿಸಲು ಮಾನ್ಯ ಸಚಿವರು ಶ್ರೀ ನೀತಿನ್ ಗಡ್ಕರಿ ಅವರು ಖಾನಾಪೂರ ಕಾರ್ಯ ಸಾಮ್ರಾಜ್ಞಿ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಮಾನ್ಯ ಶಾಸಕರಾದ ಡಾ ಅಂಜಲಿತಾಯಿ ರವರು ಕೇವಲ ಪ್ರತಿಭಟನೆ ಮಾಡುತ್ತಿಲ್ಲ, ಅವರು ಕೇವಲ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ನೀಡುತ್ತಿಲ್ಲ, ಕೆಲಸ ಮುಗಿಯುವವರೆಗೂ ಅವರು ಕಾಮಗಾರಿಗಳನ್ನು ನಿರಂತರವಾಗಿ ಫಾಲೋ ಆಫ್ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಪ್ರಸ್ತುತವಾಗಿ ಖಾನಾಪೂರ ತಾಲೂಕಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ ಖಾನಾಪೂರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

ಕೆಲಸ ಮಾಡುವುದು ಮುಖ್ಯ ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾನ್ಯ  ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ಅವರು ಮಾಡುತ್ತಿದ್ದಾರೆ, ಅವರು ಯಶಸ್ವಿ ಕೂಡಾ ಆಗುತ್ತಾರೆ! ಯಾರಿಗೂ ಈ ಮಾತಿನಲ್ಲಿ ಸಂಶಯ ಬೇಡಾ..

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.