Breaking News

ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ…ಉತ್ತರದಲ್ಲಿ ಬಿಜೆಪಿ ಗೆಲ್ಲೋದು ಖಚಿತ- ಹೆಗಡೆ

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಉಸ್ತುವಾರಿ ಹಾಗು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬೆಳಗಾವಿ ಉತ್ತರ ಮತಕ್ಷೇತ್ರದ ಬೂತ್ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷದ ಸಶಕ್ತಿಕರಣದ ಕುರಿತು ಪ್ರಗತಿ ಪರಶೀಲನೆ ನಡೆಸಿದರು

ಬೆಳಗಾವಿ ಜಿಲ್ಲೆಯ ಖಾನಾಪೂರ ಗೋಕಾಕ ಮತ್ತು ಬೆಳಗಾವಿ ಉತ್ತರ ಮತಕ್ಷೆತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿಕೊಂಡಿರುವ ಅನಂತ ಕುಮಾರ್ ಹೆಗಡೆ ಈ ಮೂರು ಕ್ಷೇತ್ರಗಳಲ್ಲಿ ಈಗಿನಿಂದಲೇ ಗ್ರೌಂಡ್ ವರ್ಕ್ ಆರಂಭಿಸಿದ್ದು ಸೋಮವಾರ ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಮುಖಂಡರ ಸಭೆಯನ್ನು ಕನ್ನಡ ಸಾಹಿತ್ಯ ಭವನದಲ್ಲಿ ನಡೆಸಿದರು

ಸಭೆಯಲ್ಲಿ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಹರಕುಣಿ ಅನೀಲ ಬೆನಕೆ, ಕಿರಣ ಜಾಧವ ಮತ್ತು ದೀಪಕ ಜಮಖಂಡಿ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು

ಬೆಳಗಾವಿ ಉತ್ತರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿಸಿ ಹಿಂದುತ್ವದ ಆಧಾರದ ಮೇಲೆ ವ್ಯಾಪಕ ಪ್ರಚಾರ ಮಾಡಿ ಹಿಂದುತ್ವದ ಮತಗಳು ವಿಭಜನೆ ಆಗದಂತೆ ತಡೆಯುವದು ಅನಂತಕುಮಾರ ಹೆಗಡೆ ಅವರ ಹಿಡನ್ ಅಜೇಂಡಾ ಆಗಿದ್ದು ಉತ್ತರದಲ್ಲಿ ಹಿಂದುತ್ವ್ ದ ಝೇಂಡಾ ಹಾರಿಸಲು ಅನಂತಕುಮಾರ್ ಹೆಗಡೆ ಸದ್ದಿಲ್ಲದೇ ಪ್ರಚಾರ ನಡೆಸಿದ್ದಾರೆ
ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಮುಗಿಸಿದ ಬಳಿಕ ಕಾದ್ಯಮಗಳ ಜತೆ ಮಾತನಾಡಿದ ಅನಂತಕುಮಾರ್ ಹೆಗಡೆ ರಾಜ್ಯದಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ ಉತ್ತರದಲ್ಲಿ ಗೆಲ್ಲೋದು ಖಚಿತ ಎಂದು ಹೇಳಿ ಬರ್ರನೇ ಕಾರು ಹತ್ತಿ ಮುಂದಿನ ಪ್ರಯಾಣ ಬೆಳೆಸಿದ್ರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *