Breaking News

ಬೆಳಗಾವಿಯಲ್ಲಿ ಪನ್ನಿಯ ಅಮಲು ಇಳಿಸಿದ ಪೋಲೀಸರು…

ಬೆಳಗಾವಿ- ನಗರದ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಪನ್ನಿ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಬೆಳಗಾವಿ ಪೋಲೀಸರು ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ

ಬೆಳಗಾವಿಯಲ್ಲಿ ಪನ್ನಿ ಮುಂಬೈಯಲ್ಲಿ ಗಜನಿ ಎಂದು ಕರೆಯಲ್ಪಡುವ ಅಮಲು ಪದಾರ್ಥನ್ನು ಮುಂಬೈಯಿಂದ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲೀಸರು ಎರಡೂವರೆ ಲಕ್ಷ ರೂ ಮೌಲ್ಯದ ಪನ್ನಿ ವಶಪಡಿಸಿಕೊಂಡ ಪೋಲೀಸರು ಬೆಳಗಾವಿಯ ಹದಿಮೂರು ಜನ ಯುವಕರನ್ನು ಬಂದಿಸಿ ಮುಂಬೈಯಿಂದ ಬೆಳಗಾವಿಗೆ ಈ ಅಮಲು ಪದಾರ್ಥನ್ನು ಸಪ್ಲಾಯ್ ಮಾಡುತ್ತಿದ್ದ ಓರ್ವ ಮಹಿಳೆಯನ್ನು ಪೋಲೀಸರು ಬಂಧಿಸಿದ್ದಾರೆ

ಬೆಳಗಾವಿಯಲ್ಲಿ ಕಳೆದ ಆರು ವರ್ಷಗಳಿಂದ ಬೆಳಗಾಯಲ್ಲಿ ಮುಂಬೈಯಲ್ಲಿ ಇದ್ದುಕೊಂಡೇ ಡ್ರಗ್ಸ್ ದಂಧೆ ಮಾಡುತ್ತಿದ್ದ ಸುಶೀಲಾ ಪೊನ್ನಸ್ವಾಮಿ ಎಂಬ ಮಹಿಳೆಯನ್ನು ಮುಂಬೈಯಲ್ಲಿ ಬಂಧಿಸಿ ಬೆಳಗಾವಿಗೆ ಕರೆತರಲಾಗಿದೆ

ಈ ಖತರ್ ನಾಕ್ ಗ್ಯಾಂಗ್ ಬೆಳಗಾವಿಯ ಯುವಕರಿಗೆ ಈ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದರು ಕಾಲೇಜು ವಿಧ್ಯಾರ್ಥಿ ಗಳು ಈ ಅಮಲು ಪದಾರ್ಥಿನ ದಾಸರಾಗಿದ್ದರು ಮಾದ್ಯಮಗಳ ಸಾರ್ವಜನಿಕರ ಮಾಹಿತಿಯ ಮೇರೆಗೆ ಈ ಜಾಲ ಪತ್ತೆಯಾಗಿದೆ ನಗರದಲ್ಲಿ ಅಮಲು ಪದಾರ್ಥಗಳ ಮಾರಾಟಕ್ಕೆ ಸಂಪೂರ್ಣವಾಗಿ ದಮನ ಮಾಡಲು ವಿಶೇಷ ಗಮನ ಹರಿಸುವದಾಗಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ಹೇಳಿದರು

ಬೆಳಗಾವಿ ನಗರದಲ್ಲಿ ನಶೆಯ ದಂಧೆಯಲ್ಲಿ ತೊಡಗಿದ್ದ ಬೆಳಗಾವಿ ಆಝಾಧ ನಗರದ 24 ವರ್ಷದ ಯಾಶೀನ ಹಸನ ಶಾಪೂರಿ ಸದಾಶಿವನಗರದ ಸೂರಜ ಶಿವಾಜಿ ಶಿಂಧೆ,ಘೀ ಗಲ್ಲಿಯ ತಬ್ರೇಜ್ ಇಮ್ರಾನ್ ಅಂಡೆವಾಲೆ,ಉಜ್ವಲ ನಗರದ ಶಾಕೀರ ಫಯಾಜ ನಿಜಾಮಿ,ಸದಾಶಿವ ನಗರದ ಸಲೀಂ ಸಯ್ಯದ ಮಕಾನದಾರ,

ಕಂಗ್ರಾಳ ಗಲ್ಲಿಯ ಯುವರಾಜ ಸುನೀಲ ಶರಣೋಬತ್ತ, ಚಿರಾಗ ಖಡ್ಡಾ ಸೈಬಾಜ್ ಲತೀಫ್ ಬಾಳೆಕುಂದ್ರಿ, ಉಜ್ವಲ ನಗರದ ಐಜಾಜ್ ಶಫಿ ಮುಲ್ಲಾ ಶಾಹು ನಗರದ ವಾಸೀಮ ಹಸನ ದಳವಾಯಿ ಸೇರಿದಂತೆ ಒಟ್ಟು ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಸುಮಾರು ಎಂಟು ನೂರು ಪನ್ನಿ ಪ್ಯಾಕೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಇತರ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು

ಹೆಲ್ಮೆಟ್ ಕಡ್ಡಾಯಕ್ಕೆ ವಾರದ ಗಡುವು

ಬೆಳಗಾವಿ ನಗರದಲ್ಲಿ ಹೆಲ್ಮೇಟ್ ಕಡ್ಡಾಯಕ್ಕೆ ವಾರದ ಗಡುವು ನೀಡಿ ವಾರದ ನಂತರ ನಗರದಲ್ಲಿ ಹೆಲ್ಮೇಟ್ ಕಡ್ಡಾಯಕ್ಕೆ ನಿರಂತರ ಕಾರ್ಯಾಚರಣೆ ನಡೆಸಲಾಗುವದು ಜೊತೆಗೆ ಐಎಸ್ ಐ ಮಾರ್ಕಿನ ಹೆಲ್ಮೇಟ್ ಬಳಗೆ ಕ್ರಮ ಕೈಗೊಳ್ಳುವದಾಗಿ ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ ತಿಳಿಸಿದ್ದಾರೆ

Check Also

ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!

ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.