ಬೆಳಗಾವಿ-ಬೆಳಗಾವಿಯ ನ್ಯಾಯಾಲಯದ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು,ನ್ಯಾಯಾಲಯದ ಕಟ್ಟಡಗಳನ್ನು ನವೀಕರಿಸಲು ಸರ್ಕಾರ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು.
ಬೆಳಗಾವಿ ಬಾರ್ ಅಸೋಸಿಯೇಷನ್ ಹಾಗೂ ಕೋರ್ಟ್ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಕಟ್ಟಡಗಳನ್ನು ನವೀಕರಿಸಿ ಸುಸಜ್ಜಿತವಾಗಿ ನಿರ್ಮಿಸಲು ರೂ. 02.00 ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿ ಜಿಲ್ಲೆಯ ಶಾಸಕರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸಿಎಂ ಅದಕ್ಕೆ ಸ್ಪಂದಿಸಿದ್ದಾರೆ.
ಮುಖ್ಯಮಂತ್ರಿಗಳು ಸರ್ಕಾರವು ರಿಜಿಸ್ಟ್ರಾರ್( Infrastructure and maintenance), ಮಾನ್ಯ ಉಚ್ಛ ನ್ಯಾಯಾಲಯ ಬೆಂಗಳೂರು ಇವರಿಗೆ ಅನುದಾನ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಪ್ರಯುಕ್ತ ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಸಚಿವರಾದ ಶ್ರೀಯುತ. ಜೆ.ಸಿ. ಮಾಧುಸ್ವಾಮಿ ರವರಿಗೆ ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶಾಸಕರು ಹಾಗು ಬೆಳಗಾವಿ ಜಿಲ್ಲಾ ಮತ್ತು ತಾಲೂಕು ಸತ್ರ ನ್ಯಾಯಾಲಯದ ವಕೀಲರ ಸಂಘ ಕೃತಜ್ಞತೆ ಹೇಳಿದೆ.
ಈ ಸಂದರ್ಭದಲ್ಲಿ ಶಾಸಕ ಅನೀಲ ಬೆನಕೆ. ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯರು, ಹಾಗು ಅಭಯ ಪಾಟೀಲ ಬೆಳಗಾವಿ ದಕ್ಷಿಣ ಶಾಸಕರು ಹಾಗೂ ಮಹಾಂತೇಶ ದೊಡ್ಡಗೌಡರ ಕಿತ್ತೂರು ಶಾಸಕರು ಇವರು ಉಪಸ್ಥಿತರಿದ್ದರು