ಬೆಳಗಾವಿ- ಗಣರಾಜ್ಯೋತ್ಸವದ ನಿಮಿತ್ಯ ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಏಕತೆಗಾಗಿ ಬಿಜೆಪಿ ಮುಖಂಡ ಅನೀಲ ಬೆನಕೆ ಅವರ ನೇತ್ರತ್ವದಲ್ಲಿ ಭಾರತ ಮಾತಾ ಬೈಕ್ ರ್ಯಾಲಿ ಆಯೋಜಿಸಲಾಗಿದೆ
ಗಣರಾಜ್ಯೋತ್ಸವದ ದಿನದಂದು ಬೆಳಿಗ್ಗೆ 10 ಘಂಟೆಗೆ ನಗರದ ಸಂಬಾಜಿ ಉದ್ಯಾನವನದಲ್ಲಿ ಭಾರತ ಮಾತೆಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಗೆ ಚಾಲನೆ ನೀಡಲಾಗುವದು ಮೆರವಣಿಗೆ ಐದು ಅಶ್ವಗಳ ಸಾರಥ್ಯ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ರಾಷ್ಟ್ರಾಭಿಮಾನ ರಾಷ್ಟ್ರಪ್ರಜ್ಞೆ ಮೂಡಿಸುವ ಜೊತೆಗೆ ಬೆಳಗಾವಿಯಲ್ಲಿ ಶಾಂತಿ ಮತ್ತು ಏಕತೆಯ ಸಂದೇಶ ಸಾರುವ ಉದ್ದೇಶ ಭಾರತ ಮಾತಾ ಬೈಕ್ ರ್ಯಾಲಿ ಹೊಂದಿದೆ ಎಂದು ಅನೀಲ ಬೆನಕೆ ತಿಳಿಸಿದ್ದಾರೆ
ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ವು ಬೈಕ್ ಗಳು ಪಾಲ್ಗೊಳ್ಳಲಿವೆ ಸಂಬಾಜಿ ಉದ್ಯಾನವನದಿಂದ ಆರಂಭವಾಗುವ ರ್ಯಾಲಿ ಕಪಿಲೇಶ್ವರ ರಸ್ತೆ,ಮುಜಾವರ ಗಲ್ಲಿ ಸರ್ಕಲ್ ರಾಮಲಿಂಗ ಖಿಂಡ ಗಲ್ಲಿ,ಕಾಲೇಜು ರಸ್ತೆ ಕ್ಲಬ್ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ದಾರ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ ಎಂದು ಅನೀಲ ಬೆನಕೆ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ