Home / Breaking News / ಕರ್ನಾಟಕದಲ್ಲಿ ಮಹಾದಾಯಿಗಾಗಿ ಬಂದ್ ಗೋವಾದಲ್ಲಿ ಬಚಾವ್ ಯಾತ್ರೆ..

ಕರ್ನಾಟಕದಲ್ಲಿ ಮಹಾದಾಯಿಗಾಗಿ ಬಂದ್ ಗೋವಾದಲ್ಲಿ ಬಚಾವ್ ಯಾತ್ರೆ..

ಬೆಳಗಾವಿ- ಮಹಾದಾಯಿ ಬಚಾವ್ ಆಂದೋಲನವನ್ನು ಗೋವಾ ರಾಜ್ಯದ ಪರಿಸರವಾದಿಗಳು ಆರಂಭಿಸಿದ್ದಾರೆ ಮಹಾದಾಯಿ ನದಿ ನೀರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ನಾಳೆ ಬಂದ್​ ಆಚರಿಸಲಾಗುತ್ತಿದೆ. ಅತ್ತ ಗೋವಾದಲ್ಲಿ ಮಹಾದಾಯಿ ನದಿ ನೀರು ಉಳಿಸಿಕೊಳ್ಳಲು ಮಹದಾಯಿ ಬಚಾವ್ ಆಂದೋಲನವೊಂದು ಇಂದೇ ಪ್ರಾರಂಭವಾಗಿದೆ.

ಗೋವಾ ಸುರಕ್ಷಾ ಮಂಚ್ ಮುಖಂಡ ಆನಂದ್ ಶಿರೋಡ್ಕರ್ ನೇತೃತ್ವದಲ್ಲಿ ಇಂದಿನಿಂದ 7 ದಿನಗಳ ಕಾಲ ಗೋವಾದ್ಯಂತ ಮಹದಾಯಿ ಬಚಾವ್ ಯಾತ್ರೆ ನಡೆಯಲಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಸೂರಲ್​ನ ಐತಿಹಾಸಿಕ ಸಾತೇರಿ ಕೇಳಬಾವಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಪೂಜೆಗೋಸ್ಕರ ಕರ್ನಾಟಕದಲ್ಲಿರುವ ಕಳಸಾ ನಾಲೆ ಸೇರಿದಂತೆ ಮಹದಾಯಿಯ 10 ಉಪನದಿಗಳಿಂದ ನೀರು ಸಂಗ್ರಹಿಸಿ ಕುಂಬದಲ್ಲಿ ತುಂಬಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *