Breaking News

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!!

ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!!

ಬೆಳಗಾವಿ- ರಾಜ್ಯದ ಗೃಹ ಮಂಡಳಿಯ ಆಧೀನದಲ್ಲಿದ್ದ ,ಬೆಳಗಾವಿಯ ದೇವರಾಜ ಅರಸು ಕಾಲೋನಿಯನ್ನು ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು

ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ,ಇಂದು ರಾಜ್ಯ ಗೃಹಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಾಲಿಕೆ ಆಯುಕ್ತ ರಿಗೆ ಹಸ್ತಾಂತರ ಪತ್ರವನ್ನು ಹಸ್ತಾಂತರ ಮಾಡಿದರು .

ದೇವರಾಜ ಅರಸು ಕಾಲೋನಿಯ ಅಭಿವೃದ್ಧಿಗೆ ಸರ್ಕಾರದಿಂದ 6 ಕೋಟಿ ರೂ ಮಂಜೂರು ಮಾಡಿಸಿರುವ ಶಾಸಕ ಬೆನಕೆ ಇಂದು ಅನುದಾನ ಸಮೇತ ಕಾಲೋನಿಯನ್ನು ಪಾಲಿಕೆಗೆ ಹಸ್ತಾಂತರ ಮಾಡಿದರು
ಈ ಸಂಧರ್ಭದಲ್ಲಿ ಮಾತನಾಡಿದ ಅವರು ದೇವರಾಜು ಅರಸು ಕಾಲೋನಿಯ ನಿವಾಸಿಗಳು ಕಾಲೋನಿಯನ್ನು ಪಾಲಿಕೆಗೆ ಹಸ್ತಾಂತರ ಮಾಡುವಂತೆ ವಿನಂತಿಸಿಕೊಂಡ ಹಿನ್ನಲೆಯಲ್ಲಿ ಸರ್ಕಾರದ ಗಮನ ಸೆಳೆದು ಹಲವಾರು ರೀತಿಯ ತೊಡಕುಗಳನ್ನು ನಿವಾರಿಸಿ ಆರು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಈ ಕಾಲೋನಿ ಅಭಿವೃದ್ಧಿಯಾಗಲಿದೆ ಎಂದರು

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *