Home / Breaking News / ಪಾದಯಾತ್ರಿಗಳು ವಾಪಸು ಬರುವಂತೆ ಶ್ರೀಶೈಲ ಸ್ವಾಮೀಜಿ ಮನವಿ

ಪಾದಯಾತ್ರಿಗಳು ವಾಪಸು ಬರುವಂತೆ ಶ್ರೀಶೈಲ ಸ್ವಾಮೀಜಿ ಮನವಿ

 

ಬೆಳಗಾವಿ-ದೇಶದಲ್ಲಿ ಭೀಕರವಾದ ಮಾರಕ‌ ರೋಗ ಕೊರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮಯಾತ್ರೆಯನ್ನು ಕೈಗೊಂಡಿರುವುದನ್ನು ಸ್ಥಗೀತಗೊಳಿಸಬೇಕೆಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಹೇಳಿದರು.

ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರನ್ನು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು ಸೀನಿದರೆ ಅಥವಾ ಕೆಮ್ಮಿದರೆ ಅವನಿಂದ ಇನ್ನೊಬ್ಬರಿಗೆ, ಅವನಿಂದ ಮತ್ತೊಬ್ಬನಿಗೆ ಹೀಗೆ ಕ್ರಮೇಣ ಆ ಸಾವಿರ ಜನರಿಗೂ ತಗಲುವ ಸಾಧ್ಯತೆ ಇದೆ. ಈ ಸೋಂಕು ತಗುಲಿದ ನಂತರ ಇದನ್ನು ತಡೆಗಟ್ಟಲು ಯಾವುದೇ ಔಷಧ ಇಲ್ಲದ ಕಾರಣ ಇದು ಎಲ್ಲಿಯೂ ಹರಡದಂತೆ ಇತರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ದೇವಸ್ಥಾನಗಳು ಭಾರತದ ಮನುಕುಲದ ಕಲ್ಯಾಣ ಕೇಂದ್ರಗಳಾಗಿದ್ದು, ಇವು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಬಾರದು. ಆದ್ದರಿಂದ ಭಾವಾವೇಶಕ್ಕೆ ಒಳಗಾಗಿ ಪ್ರಾಸ್ತಾವಿಕ ಪರಿಸ್ಥಿತಿಯನ್ನು ಅಲಕ್ಷಿಸಿ ಭಕ್ತಿಯ ಹೆಸರಿನಲ್ಲಿ ಹುಚ್ಚು ದೈರ್ಯವನ್ನು ಪ್ರದರ್ಶಿಸದೆ ಭಕ್ತಾದಿಗಳು
ಕರ್ನಾಟಕ‌ ಸರಕಾರ ಶ್ರೀಶೈಲ ಪಾದಯಾತ್ರೆ ಹಮ್ಮಿಕೊಂಡವರಿಗೆ ವಿಶೇಷ ತಂಡ ರಚಿಸಿ ಭಕ್ತಾದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ‌ ಅವರಿಗೆ ಜಾಗೃತಿ ‌ಮೂಡಿಸಿ ಅಗತ್ಯ ಸಾಮಗ್ರಿಗಳನ್ನು ಕಳೆಸಿಕೊಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.

ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಶಿ ಯಾತ್ರೆ ಮಹಾ ಶಿವರಾತ್ರಿಯಂದು ಮುಗಿದಿದೆ. ಆದರೂ ಕಾಶಿಗೆ ಜನರು ನಿರಂತರವಾಗಿ ಬರುತ್ತಾರೆ. ಹೊರಗಡೆ ಆಹಾರ ಸೇವನೆ ನಿಲ್ಲಿಸಬೇಕು. ಕಾಶಿಗೆ ಹೋದ ಎಲ್ಲ ಭಕ್ತಾಧಿಗಳಿಗೆ ಕಾಶಿವಾಡಿಯಲ್ಲಿ ಭಕ್ತರಿಗೆ ಸಕಲ ಸೌಲಭ್ಯ ಮಾಡಿದೆ. ಕೊರೋನಾ ವೈರಸ್ ಬಂದ ಹಿನ್ನೆಲೆಯಲ್ಲಿ ಭಕ್ತರು ಒಂದು ತಿಂಗಳ ವರೆಗೆ ಯಾವುದೇ ಪಾದಯಾತ್ರೆ ಹಮ್ಮಿಕೊಳ್ಳದಂತೆ ಭಕ್ತರಿಗೆ ಮನವಿ ಮಾಡಿದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *