Breaking News
Home / Breaking News / ಇವರಿಬ್ಬರು ಮಾಡಿದ ಕಾರ್ಯ ರಾಜ್ಯದಲ್ಲೇ ಮೊದಲು, …!!

ಇವರಿಬ್ಬರು ಮಾಡಿದ ಕಾರ್ಯ ರಾಜ್ಯದಲ್ಲೇ ಮೊದಲು, …!!

*ಬೆಳಗಾವಿ ಪಿಯುಸಿ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶಾಸಕ ದ್ವಯರ ಹೊಸ ಪ್ರಯೋಗ*

ಬೆಳಗಾವಿ-ಅಭಿವೃದ್ಧಿಗೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಶಾಸಕ ಅನೀಲ ಬೆನಕೆ,ಅವರ ಜೋಡಿ, ಅಭಿವೃದ್ಧಿಪರ ಯಾವುದೇ ಯೋಜನೆ ಹಾಕಿಕೊಂಡರೆ ಅದು ಜನಪರ ಪ್ರಯೋಗಿಶೀಲವಾಗಿರುತ್ತದೆ. ಹೀಗಾಗಿ, ಅವರ ಅಭಿವೃದ್ಧಿ ಯೋಜನೆಗಳು ವಿಶೇಷ ಗಮನ ಸೆಳೆಯುತ್ತವೆ. ಈಗ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಜೊತೆಗಾರ ಅನಿಲ್ ಬೆನಕೆ ಅವರ ಕೈಹಿಡಿದುಕೊಂಡು ಇಬ್ಬರೂ ಸೇರಿ ಮಕ್ಕಳ ಶೈಕ್ಷಣಿಕ ಕಾಳಜಿಯತ್ತ ಹೊರಳಿದ್ದು, ಇನ್ನೊಂದು ವಿಶೇಷ ಪ್ರಯೋಗ ಕೈಗೊಂಡಿದ್ದಾರೆ.

ಅನೇಕ ಭಾಷೆಗಳ ಕೇಂದ್ರವಾದ ಬೆಳಗಾವಿ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡರೂ ಶೈಕ್ಷಣಿಕವಾಗಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಈ ಮೂರೂ ವಿಭಾಗಗಳಲ್ಲಿ ಮಕ್ಕಳು ವಿಶೇಷ ಮುತವರ್ಜಿಯಿಸಿ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಹಿನ್ನಡೆ ಸಾಧಿಸಿದರೂ ನೀಟ್ ಸಿಇಟಿಯಲ್ಲಿ ರ‍್ಯಾಂಕ್‌ನ ಮೊದಲನೇ ಸಾಲಿನಲ್ಲಿ ಬೆಳಗಾವಿ ವಿದ್ಯಾರ್ಥಿಗಳು ಇರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶವೂ ಹೆಚ್ಚಾಗಬೇಕು, ಸಾಮಾನ್ಯ ವಿದ್ಯಾರ್ಥಿಗಳೂ ಉತ್ತಮ ಫಲಿತಾಂಶ ಸಾಧಿಸಬೇಕು. ಅದಕ್ಕೆ ಪೂರಕವಾದ ಪಠ್ಯ ಆಧಾರಿತ ಸುಲಭವಾಗಿ ಅರ್ಥೈಯಿಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ವಿಶೇಷವಾಗಿ ತಯಾರಿಸಿದ ಗ್ರಂಥಗಳನ್ನು ಈ ಇಬ್ಬರೂ ಶಾಸಕರು ಮತವರ್ಜಿ ವಹಿಸಿ ಹೊರತಂದಿದ್ದಾರೆ. ಪಿಯುಸಿ ಮತ್ತು ಶೈಕ್ಷಣಿಕ ವಲಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ಪ್ರಾಧ್ಯಾಪಕ ಬಳಗ ಸಿದ್ಧಪಡಿಸಿದ ಪಠ್ಯ ಆಧಾರಿತ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ಪ್ರಮುಖ ವಿಷಯಗಳ ಇಂಗ್ಲಿಷ ಮಾಧ್ಯಮದ ಗ್ರಂಥಗಳನ್ನು ಬೆಳಗಾವಿ ನಗರದ ಎಲ್ಲ ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ತಲುಪಿಸುವ ಮಹತ್ವದ ಯೋಜನೆ ಹಾಕಿಕೊಂಡಿದ್ದಾರೆ. ಇಂದು ಮಿಲನ್ ಹೊಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಅಭಯ ಪಾಟೀಲ, ಅನಿಲ ಬೆನಕೆ ಅವರು ಉತ್ತಮ ಗುಣಮಟ್ಟದ ಗ್ರಂಥಗಳನ್ನು ಬಿಡುಗಡೆಗೊಳಿಸಿದರು.

ಈ ಪ್ರಯೋಗ ಆರಂಭಿಕ ಹಂತವಾಗಿದ್ದು, ಮುಂಬರುವ ದಿನಗಳಲ್ಲಿ ಕನ್ನಡ ಮಧ್ಯಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ಗ್ರಂಥಗಳನ್ನು ಪೂರೈಸಲಾಗುವುದು. ಭಾಷಾ ಅಧ್ಯಯನಕ್ಕೂ ಆಧ್ಯತೆ ನೀಡಿ ಭಾಷಾ ಗ್ರಂಥಗಳನ್ನು ನೀಡಲಾಗುವುದು. ಈ ಎಲ್ಲ ಗ್ರಂಥಗಳನ್ನು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಹಂಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ ಶಾಸಕ ಅಭಯ ಪಾಟೀಲ ಅವರು, ಗುಣಮಟ್ಟದ ಬೋಧನೆಯಲ್ಲಿ ಶಿಕ್ಷಕರೂ ತೊಡಗಿಸಿಕೊಳ್ಳುವಂತೆ  ತರಬೇತಿಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಅನಿಲ ಬೆನಕೆ ಅವರು, ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಮುಂದಿಟ್ಟುಕೊAಡು ಈ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪೂರ್ಣ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಈ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಠ್ಯ ಆಧಾರಿತ ಹೊಸ ಗ್ರಂಥಗಳ ರಚನೆಯಲ್ಲಿ ತೊಡಗಿಸಿಕೊಂಡ ಅಧ್ಯಾಪಕರಾದ ಮಾಲತೇಶ್ ಪಾಟೀಲ, ಮುರಗೇಶ್ ಎಚ್.ಎಂ., ಅಶಿತೋಷ ಡೇವಿಡ್ ಸೇರಿದಂತೆ ಇತರ ಪ್ರಾಧ್ಯಾಪಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಪ್ರಸ್ತುತ ಗ್ರಂಥಗಳು ಪಿಯುಸಿ ಪಠ್ಯ ಆಧಾರಸಿ ವಿದ್ಯಾರ್ಥಿಗಳಿಗೆ ವಿಷಯ ಅರ್ಥೈಯಿಸಿಕೊಳ್ಳಲು ಸರಳವಾಗುವ ರೀತಿಯಲ್ಲಿ ಸಿದ್ಧಪಡೆಸಲಾಗಿದೆ. ಗ್ರಂಥಗಳು ನೋಟ್ಸ್ ಅಥವಾ ಮಾರುಕಟ್ಟೆಯೊಳಗೆ ಲಭ್ಯವಿರುವ ಗೈಡ್ ಮಾದರಿಯನ್ನು ಹೋಲದೇ ಪಠ್ಯದ ಬಗ್ಗೆ ದೀರ್ಘಕಾಲ ಬೋಧನೆ ಮಾಡಿದ, ಅಧ್ಯಯನ ಮಾಡಿದ ಅಧ್ಯಾಪಕರಿಂದ ಭಿನ್ನವಾಗಿ ರಚಿಸಲಾಗಿದ್ದು, ವಿಷಯ ಅರ್ಥೈಯಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ. ಕಳೆದ ಹತ್ತು ವರ್ಷಗಳ ಪ್ರಶ್ನೆಪತ್ರಿಕೆಗಳನ್ನೂ ಮುಂದಿಟ್ಟುಕೊAಡು ರಚಿಸಲಾಗಿದ್ದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸುಲಭವಾಗಲಿದೆ. ಶಿಕ್ಷಕರ ಬೋಧನೆಗೂ ಹೆಚ್ಚು ಅನುಕೂಲವಾಗಲಿದೆ ಎಂದು ಸ್ಪಷ್ಟಪಡೆಸಿದ್ದಾರೆ.

ಈ ಮಧ್ಯ ಪತ್ರಕರ್ತರು ಈ ಪುಸ್ತಕಗಳನ್ನು ಹಂಚುವಲ್ಲಿ ರಾಜಕೀಯ ಪ್ರಚಾರವೂ ಅಡಗಿದೆಯಾ ಎಂದು ವಿಚಾರಿಸಲು ಪ್ರಯತ್ನಿಸಿದರು. ಏನೇಯಾದರೂ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿ ಗಮನದಲ್ಲಿರಿಸಿಕೊಂಡು ಉತ್ತಮ ಗುಣಮ್ಟದ ಉಚಿತವಾದ ಗ್ರಂಥಗಳನ್ನು ನೀಡುವುದು ಒಂದು ವಿಶೇಷ ಕಾಳಜಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಕ್ಕಳಿಗೆ ಸಾಮಾನ್ಯವಾಗಿ ಊಟದ ಡಬ್ಬಿ, ಬ್ಯಾಗಿನಂತ ಸಾಮಗ್ರಿಗಳನ್ನು ನೀಡುತ್ತಾರೆ. ಆದರೆ, ಚನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ, ಹೆಚ್ಚು ಅಂಕ ಪಡೆಯಿರಿ ಎಂದು ಗ್ರಂಥಗಳನ್ನು ಕಾಣಿಕೆ ನೀಡುವುದು ಶ್ಲಾಘನೀಯ ಕಾರ್ಯವೇ ಹೌದು. ಈ ಅವಕಾಶವನ್ನು ಮಕ್ಕಳು ಯಾವ ರೀತಿ ಸದುಪಯೋಗ ಪಡೆಸಿಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು.
****

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *