ಬೆಳಗಾವಿ-ಸಮಾನತೆಯ ಸಂದೇಶ ಸಾರಿ, ವಿಶ್ವರತ್ನ ಎಂದೇ ಖ್ಯಾತಿ ಪಡೆದಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನ ಬೆಳಗಾವಿಯಲ್ಲಿ ಸಮಾನತೆಯ ಸಂದೇಶ ಸಾರುವ ಅಪರೂಪದ ಪ್ರಸಂಗ ನಡೆಯಿತು.
ಬೆಳಗಾವಿಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇವತ್ತು ಬೆಳಗ್ಗೆ ಯಿಂದ ಗಣ್ಯಾತಿ ಗಣ್ಯರು ಆಗಮಿಸಿ ಬಾಬಾಸಾಹೇಬರಿಗೆ ಗೌರವ ಸಮರ್ಪಿಸುವ ಕಾರ್ಯ ನಡೆದಿತ್ತು.ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರೂ ಸಹ ಇಲ್ಲಿಗೆ ಆಗಮಿಸಿದ್ದರು. ಅನೀಲ ಬೆನಕೆ ಬಾಬಾಸಾಹೇಬರಿಗೆ ಗೌರವ ಸಮರ್ಪಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡುತ್ತಿರುವಾಗ ಮಾಜಿ ಶಾಸಕ ಫಿರೋಜ್ ಸೇಠ,ಹಾಗೂ ರಾಜುಸೇಠ ಇಬ್ಬರೂ ಸಹೋದರರು ಅನೀಲ ಬೆನಕೆ ಅವರ ಪಕ್ಕಕ್ಕೆ ನಿಂತು ಎಲ್ಲರ ಗಮನ ಸೆಳೆದ್ರು
ಈ ಅಪರೂಪದ ಕ್ಷಣ ನೋಡಿ ಅಲ್ಲಿದ್ದವರು ಕೆಲಕಾಲ ಭಾವುಕರಾದ್ರು, ಫಿರೋಜ್ ಸೇಠ್ ಅವರು ಅನೀಲ ಬೆನಕೆ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದಾಗ ಅಲ್ಲಿದ್ದವರು ದಂಗಾದ್ರು!
ಇದು ಬಾಬಾಸಾಹೇಬ್ರ ಭಾರತ,ಇದು ಸಮಾನತೆಯ ಭಾರತ,ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ,ಎಂದು ಸಂದೇಶ ಸಾರುವ ಪ್ರಸಂಗ ಬೆಳಗಾವಿಯಲ್ಲಿ ನಡೆದಿದ್ದು,ಬಿಜೆಪಿ ಟಿಕೆಟ್ ಕೈತಪ್ಪಿರುವದರಿಂದ ನೊಂದಿರುವ ಅನೀಲ ಬೆನಕೆ ಹೆಗಲ ಮೇಲೆ ಫಿರೋಜ್ ಸೇಠ ಕೈ ಹಾಕಿ ಮಾತನಾಡಿಸಿದ್ದು ನಿಜವಾಗಿಯೂ ರಾಜಕಾರಣವೇ ಬೇರೆ ಅಂತಃಕರಣ ವೇ ಬೇರೆ ಅನ್ನೋದು ಸಾಭೀತಾಯಿತು.