ಬೆಳಗಾವಿ- ತಮ್ಮ ಬೇಡಿಕೆ ಹೇಳಲು ಬಾಯಿಲ್ಲದೇ ಇದ್ರು.. ಶಿಳ್ಳೆ ಮೂಲಕವೇ ಪ್ರತಿಭಟನೆ ನಡೆಸಿ ಬೆಳಗಾವಿಯಲ್ಲಿ ಇಂದು ಕಿವುಡ, ಮೂಕ ಸಂಘದ ನೂರಾರು ಜನರು ಗಮನ ಸೆಳೆದರು. ಕೇವಲ ಘೋಷಣೆ ಇಲ್ಲದೇ ಭಾವನೆ ಮೂಲಕವೆ ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಜನ ಕಿವುಡರು ಮತ್ತು ಮೂಕರು ಸೀಟಿ ಊದಿ ತಮ್ಮ ವೇದನೆಯನ್ನು ಹೊರ ಹಾಕಿದರು
ರಾಜ್ಯದಲ್ಲಿ ಎಲ್ಲಾ ವಿಕಲಾಂಗ ಚೇತನರಿಗೆ ಸರ್ಕಾರ ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಅದರಂತೆ ಸರ್ಕಾರಿ ಉದ್ಯೋಗಸಲ್ಲಿ ಕಿವುಡು, ಮೂಕಿಕರಿಗೆ ಮೀಸಲಾತಿಯನ್ನು ಸರ್ಕಾರ ನೀಡುತ್ತಿಲ್ಲ. ಪ್ರತಿ ಭಾರಿ ಬಜೆಟ್ ಸಂದರ್ಭದಲ್ಲಿ ಹೋರಾಟ ಮಾಡಿದ್ರ ಸರ್ಕಾರ ಗಮನ ಹರಿಸಿಲ್ಲ. ತಕ್ಷಣ ನಮಗು ಮೀಸಲಾತಿ ನೀಡಬೇಕು. ಜತೆಗೆ ಪ್ರತ್ಯೇಕ ವಿವಿಧ ಸೌಲಭ್ಯ ಕಲ್ಪಿಸಲು ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ರು. ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ರ಼್ಯಾಲಿ ನಡೆಸಿದರು.
ಇನ್ನೂ ಪ್ರತಿಭಟನೆ ರ಼್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅನಿಲ್ ಪೋತದಾರ್, ಈಗಾಗಲೇ ನಮ್ಮ ತಾಯಿ ಹೆಸರಲ್ಲಿ ಟ್ರಸ್ಟ್ ಮೂಲಕ ಕಿವುಡ ಹಾಗೂ ಮೂಕರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೇ ರಾಜ್ಯದಲ್ಲಿ ಸಾಕಷ್ಟು ಜನ ಕಿವುಡ ಹಾಗೂ ಮೂಕರಿದ್ಸು ಸರ್ಕಾರ ಅವರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ರು.