ಕನ್ನಡ ನಗರ ಸೇವಕರ ಒಗ್ಗಟ್ಟಿಗೆ ಕರವೇ ಒತ್ತಾಯ
ಬೆಳಗಾವಿ- ಮಾರ್ಚ 1 ರಂದು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಕನ್ನಡ ನಗರ ಸೇವಕರು ಮತ್ತು ಜನ ಪ್ರತಿನಿಧಿಗಳು ಒಂದಾಗಿ ಕನ್ನಡಿಗರನ್ನು ಆಯ್ಕೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ
ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕನ್ನಡದ ನಗರ ಸೇವಕರು ಒಗ್ಗಟ್ಟಾಗಬೇಕೆಂದು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಮೇಯರ್ ಚುನಾವಣೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದೆ ಕನ್ನಡ ಗುಂಪಿನ ನಗರ ಸೇವಕರು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಬೇಕು ಜಿಲ್ಲಾ ಮಂತ್ರಿಗಳು ಸಾರಥ್ಯ ವಹಿಸಬೇಕು ಶಾಸಕರು ಸಂಸದರು ಮತದಾನದಲ್ಲಿ ಪಾಲ್ಗೊಂಡು ಕನ್ನಡದ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು
ಪಾಲಿಕೆಯಲ್ಲಿ ಕನ್ನಡಿಗರಿಗೆ ಅವಮಾನವಾದರೆ ಸಹಿಸುವದಿಲ್ಲ ಎಂದು ಮಹಾದೇವ ತಳವಾರ ಎಚ್ಚರಿಕೆ ನೀಡಿದರು
ದೀಪಕ ಗುಡಗನಟ್ಟಿ ಗಣೇಶ ರೋಕಡೆ,ದಿನೇಶ ನಾಶಿಪುಡಿ,ರಾಮಾ ವಣ್ಣೂರ,ಸುರೇಶ ಗವಣ್ಣವರ ಸೇರಿದಂತೆ ನೂರಾರು ಜನ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …