ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಎಲ್ಲ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದು ಎನ್ನುವ ಲೆಕ್ಕಾಚಾರ ಬುಡಮೇಲಾಗಿದೆ ಇಂದು ಗುರುವಾರ 11-00 ಗಂಟೆಗೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಲಿದ್ದಾರೆ.
ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಹೊಡೆದಿರುವ ಅವರು ಖಾನಾಪೂರ ತಾಲ್ಲೂಕಿನಿಂದ ಕೃಷಿಪತ್ತಿನ ಸಹಕಾರಿ ಸಂಘ ಕ್ಷೇತ್ರದ ಪ್ರತಿನಿಧಿಯಾಗಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಎಂಟ್ರಿ ಹೊಡೆದಿದ್ದರಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯ ದಿಕ್ಕು ದಿಸೆ ಬದಲಾಗಿದೆ.
ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಚಿಕ್ಕೋಡಿ ತಾಲ್ಲೂಕಿನಿಂದ ಗಣೇಶ ಹುಕ್ಕೇರಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ .
ಇಂದು ಕೊನೆಯ ದಿನವಾಗಿದ್ದರಿಂದ ಬಹುತೇಕ ಜಿಲ್ಲೆಯ ಹತ್ತೂ ತಾಲ್ಲೂಕುಗಳಿಂದ ಹಲವಾರು ಜನ ನಾಮಪತ್ರ ಸಲ್ಲಿಸುವ ಸಾದ್ಯತೆ ಹೆಚ್ಚಾಗಿದೆ.
ನಾಳೆಯಿಂದ ನಾಮಪತ್ರ ಹಿಂದಕ್ಕೆ ಪಡೆಯುವ ಕಸರತ್ತು ನಡೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ