ಬೆಳಗಾವಿ- ಜಾತಿಗಳನ್ನು ಮೀರಿಸಿ ಚುನಾವಣೆಗಳು ನಡೆಯಬೇಕು,ಸರ್ಕಾರ ಜಾತಿಗಳನ್ನು ಆಧರಿಸಿ ಚುನಾವಣೆ ಮಾಡುತ್ತಿದೆ.ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಿದೆ.ಮರಾಠಾ ಪ್ರಾಧಿಕಾರಕ್ಕೆ 50 ಕೋಟಿ ಕೊಡ್ತೇವಿ ಅಂತಾ ಸರ್ಕಾರ ಕೇವಲ ಘೋಷಣೆ ಮಾಡಿದೆ,ಇನ್ನೂ ಆರ್ಡರ್ ಆಗಿಲ್ಲ ಇದೊಂದು ಚುನಾವಣೆಗಾಗಿ ಮಾಡಿದ ಗಿಮಿಕ್ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ಘೋಷಣೆ ಮಾಡಿದೆ,ಆದ್ರೆ ಈ ಕುರಿತು ಇನ್ನುವರೆಗೆ ಸರ್ಕಾರ ಆದೇಶ ಹೊರಡಿಸಿಲ್ಲ,ಮರಾಠಾ ಸಮುದಾಯದ ಮೇಲೆ ನಿಜವಾಗಿಯೂ ಸರ್ಕಾರಕ್ಕೆ ಕಾಳಜಿ ಇದ್ದರೆ ಸರ್ಕಾರ ಮರಾಠಾ ಸಮುದಾಯವನ್ನು 2A ಗೆ ಸೇರಿಸಲಿ,ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಮರಾಠಾ ಸಮಾಜದ ಜನ ಇದ್ದಾರೆ,ಕೇವಲ 50 ಕೋಟಿ ಅನುದಾನದಿಂದ ಸಮಾಜಕ್ಕೆ ಯಾವುದೇ ಲಾಭ ಆಗೋದಿಲ್ಲ.ನಮಗೆ ಅನುದಾನದ ಬದಲು ಮೀಸಲಾತಿ ಬೇಕು.ಈ ವಿಚಾರದಲ್ಲಿ ಮರಾಠಾ ಸಮಾಜ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ ಎಂದು ಅಂಜಲಿ ನಿಂಬಾಳ್ಕರ್ ಹೇಳಿದ್ರು
ಈ ಹಿಂದೆ ಪ್ರವಾಹ ಬಂದಾಗ ಸರ್ಕಾರ ಖಾನಾಪೂರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಘೋಷಣೆ ಮಾಡಿತ್ತು.ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ಕೊಡ್ತೇವಿ ಅಂತಾ ಘೋಷಣೆ ಮಾಡಿದ್ರು ಆದ್ರೆ ಇನ್ನುವರೆಗೆ ಒಂದು ಪೈಸೆ ಕೂಡಾ ಬಂದಿಲ್ಲ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದರು.