SSLC ವಿಧ್ಯಾರ್ಥಿಗಳಿಗೆ ಕಿಟ್ ಕೊಟ್ಟು ಶುಭ ಕೋರಲಿರುವ ಅಂಜಲಿತಾಯಿ
ಬೆಳಗಾವಿ-ಕ್ಷೇತ್ರದ ಮಕ್ಕಳು ಆರೋಗ್ಯಕರವಾಗಿ ಇರಬೇಕು, ಕೊರೋನಾ ಸೊಂಕಿನಿಂದ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಏಕೈಕ ಉದ್ದೇಶದಿಂದ ಸಾವಿರಾರು ಹೆಲ್ತ್ ಕಿಟ್ ಗಳನ್ನು ಸ್ವತಹ ತಾವೇ ಸಿದ್ಧಪಡಿಸಿರುವ ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ನಾಳೆ ಕ್ಷೇತ್ರದ ಎಲ್ಲ SSLC ಪರೀಕ್ಷಾ ಕೇಂದ್ರಗಳಲ್ಲಿ ಕಿಟ್ ಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಶುಭ ಕೋರಲಿದ್ದಾರೆ.
MBBS ಪದವೀಧರೆ ಆಗಿರುವ ಡಾಕ್ಟರ್ ಅಂಜಲಿ ತಾಯಿ ಕೊರೋನಾ ಸೊಂಕಿನ ಕುರಿತು ಕ್ಷೇತ್ರದಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ,ಕ್ಷೇತ್ರದ ಜನರಿಗೆ ಉಚಿತವಾಗಿ ಮಾಸ್ಕ ಹಂಚಿಕೆ ಮಾಡಿದ್ದರು.
ಮುನ್ನಾಭಾಯಿ ಎಂಬಿಬಿಎಸ್ ಚಿತ್ರ ಸಾಕಷ್ಟು ಹೆಸರು ಮಾಡಿತ್ತು ಈ ಚಿತ್ರದಲ್ಲಿ ಆರೋಗ್ಯದ ಕುರಿತು ಸಂದೇಶವಿತ್ತು.ಆದರೆ ಅಂಜಲಿತಾಯಿ ಕ್ಷೇತ್ರದಲ್ಲಿ ಮಾಡುತ್ತಿರುವ ಹೆಲ್ತ್ ಕೇರ್ ಕಾರ್ಯಕ್ರಮಗಳಿಂದಾಗಿ ಕ್ಷೇತ್ರದ ಜನ ಅವರನ್ನು ಅಂಜಲಿತಾಯಿ MBBS ಎಂದೇ ಕರೆಯಲು ಶುರು ಮಾಡಿದ್ದಾರೆ.
ಡಾ ಅಂಜಲಿತಾಯಿ ಫೌಂಡೇಶನ್ ವತಿಯಿಂದ. 18,000 – ಸಾಬೂನುಗಳು..9,000 – ಮಾಸ್ಕ್ ಗಳು..
4,500 – ಸ್ಯಾನಿಟೈಜರ್ ಗಳು..4,500 – ಕಂಪಾಸ್ಸ್ ಬಾಕ್ಸ್ ಗಳು..ಹೊಂದಿರುವ 4500 ಹೆಲ್ತ್ ಕಿಟ್ ಗಳು ನಾಳೆ ಖಾನಾಪೂರ ಕ್ಷೇತ್ರದ SSLC ಪರೀಕ್ಷಾ ಕೇಂದ್ರಗಳಲ್ಲಿ ಬಟವಡೆಯಾಗಲಿವೆ.
ವಿದ್ಯಾರ್ಥಿಗಳಿಗೆ ಕಿಟ್ ಗಳನ್ನು ಪರೀಕ್ಷೆ ದಿನದಂದು ಪರೀಕ್ಷಾ ಕೇಂದ್ರದ ಹೊರಗಡೆ ಡಾ ಅಂಜಲಿತಾಯಿ ಫೌಂಡೇಶನ್ ಕಾರ್ಯಕರ್ತರು ಪರೀಕ್ಷೆ ಬರೆಯುವ ಎಲ್ಲ ವಿಧ್ಯಾರ್ಥಿಗಳಿಗೆ ಕೊಡುತ್ತಾರೆ,ಎಲ್ಲ ವಿದ್ಯಾರ್ಥಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಶುಭಕೋರಿದ್ದಾರೆ.