Breaking News

ಬೆಳಗಾವಿ ಜಿಲ್ಲೆಯಲ್ಲಿ SSLC ಪರೀಕ್ಷೆ, ಎಲ್ಲೆಲ್ಲಿ ..? ಏನೇನು ?

ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರದ ಬದಲಾವಣೆ

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು ದಿಢೀರ್ ಪರೀಕ್ಷಾ ಕೇಂದ್ರವೇ ಬದಲಾವಣೆ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರ ಆಯ್ಕೆಗೂ ಮುನ್ನ ಪರಿಸ್ಥಿತಿ ಅವಲೋಕಿಸದೇ ಬೆಳಗಾವಿ ಶಿಕ್ಷಣ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.

ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂಬ ಕಾರಣಕ್ಕೆ ಬೆಳಗಾವಿಯ ಶಹಾಪುರ್‌ನಲ್ಲಿರುವ ಸರಸ್ವತಿ ಬಾಲಕಿಯರ ಪ್ರೌಢ ಶಾಲೆಯಲ್ಲಿದ್ದ ಪರೀಕ್ಷಾ ಕೇಂದ್ರವನ್ನು ಜ್ಞಾನ ಮಂದಿರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶಿಫ್ಟ್ ಮಾಡಿದ್ದಾರೆ. ಬೆಳಗಾವಿಯ 12 ಶಾಲೆಗಳ 315 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷಾ ಹಾಲ್ ಟಿಕೆಟ್ ನಲ್ಲಿ ಸರಸ್ವತಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರ ಎಂದು ಈಗಾಗಲೇ ನಮೂದಾಗಿದೆ. ಮಳೆಗಾಲದಲ್ಲಿ ಕಟ್ಟಡ ಸೋರುತ್ತೆ ಎಂಬ ಕಾರಣಕ್ಕೆ ಕಟ್ಟಡ ಬದಲಾವಣೆ ಮಾಡಲಾಗಿದ್ದು ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಕುರಿತು ಮಾಹಿತಿ ರವಾನಿಸಲಾಗುತ್ತಿದೆ. ನಿನ್ನೆಯಿಂದ ಪರೀಕ್ಷಾ ಕೇಂದ್ರ ಬದಲಾವಣೆ ಆಗಿದೆ ಎಂದು ಪಾಲಕರಿಗೆ ಪೋನ್ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ.

ಶಾಸಕಿ ಅಂಜಲಿ ನಿಂಬಾಳ್ಜರ್ ವತಿಯಿಂದ ಕಿಟ್ ವಿತರಣೆ

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ
ತನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಸಾಮಗ್ರಿ ನೀಡಲು ಅಂಜಲಿ ನಿಂಬಾಳ್ಕರ್ ನಿರ್ಧರಿಸಿದ್ದಾರೆ.ಅಂಜಲಿ ನಿಂಬಾಳ್ಕರ್, ಬೆಳಗಾವಿ ಜಿಲ್ಲೆ ಖಾನಾಪುರ ಕಾಂಗ್ರೆಸ್ ಶಾಸಕಿಯಾಗಿದ್ದು, ಎರಡು ಮಾಸ್ಕ್, ಸ್ಯಾನಿಟೈಸರ್, ಕಂಪಾಸ್ ಬಾಕ್ಸ್, 4 ಸೋಪುಗಳಿರುವ ಕಿಟ್ ವಿತರಣೆಗೆ ನಿರ್ಧಾರ ಮಾಡಿದ್ದಾರೆ‌.

ಡಾ.ಅಂಜಲಿತಾಯಿ ಫೌಂಡೇಶನ್ ವತಿಯಿಂದ SSLC ವಿದ್ಯಾರ್ಥಿಗಳಿಗೆ ಉಚಿತ ಕಿಟ್ ನೀಡಲಾಗುತ್ತಿದೆ‌ ಖಾನಾಪುರ ತಾಲೂಕಿನ 4500 SSLC ವಿದ್ಯಾರ್ಥಿಗಳಿಗೆ ಉಚಿತ ಕಿಟ್ ತಲುಪಲಿದೆ.ಕುಟುಂಬಸ್ಥರೊಂದಿಗೆ ಸ್ವತಃ ಉಚಿತ ಕಿಟ್ ಪ್ಯಾಕ್ ಮಾಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ನಾಳೆ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಕಿಟ್ ವಿತರಣೆ ಮಾಡಲಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಸಚಿವ ಅಂಗಡಿ ಭೇಟಿ

ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಸಚಿವ ಸುರೇಶ್ ಅಂಗಡಿ ಭೇಟಿ ನೀಡಿ,ಸಿದ್ಧತೆಗಳನ್ನು ಪರಶೀಲನೆ ಮಾಡಿದರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ, ಇನ್ಮುಂದೆ ನಾವು ಕೊರೊನಾ ಜೊತೆಯೇ ಬದುಕಬೇಕಾಗಿದೆ.

ಜನರನ್ನು ಹೆದರಿಸಲಿಕ್ಕೆ ಕೊರೊನಾ ಮಾಡಿದ್ದಾರೆ.ಕೊರೊನಾ ದೇಶದಲ್ಲಿ ಬಿಟ್ಟು ಗಡಿಯಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು
ಪರೋಕ್ಷವಾಗಿ ಚೀನಾ ವಿರುದ್ಧ ಸುರೇಶ್ ಅಂಗಡಿ ವಾಗ್ದಾಳಿ ಮಾಡಿದರು. ಇಂತಹ ಕೊರೊನಾ, ಪ್ಲೇಗ್, ಸ್ವೈನ್ ಫ್ಲ್ಯೂನಂತ ರೋಗಗಳು ನಮ್ಮ ದೇಶಕ್ಕೆ ಬಹಳ ಸಾರಿ ಬಂದು ಹೋಗಿವೆ.
ಕೊರೊನಾ ಇಟ್ಕೊಂಡೇ ಇನ್ಮುಂದೆ ನಾವು ಜೀವನ ಸಾಗಿಸಬೇಕಾಗಿದೆ’ ಕೊರೊನಾ ಗುಣಮುಖ ಆಗದಂತಹ ರೋಗ ಏನೂ ಅಲ್ಲ. ಸರಿಯಾದ ಔಷಧಿ ಪಡೆದು ಮುಂಜಾಗ್ರತೆ ವಹಿಸಿದರೆ ಗುಣಮುಖ ಆಗ್ತಾರೆ. ಯಾರೂ ಹೆದರಬೇಕಾಗಿಲ್ಲ, ಕೊರೊನಾ ಜೊತೆ ನಾವು ಜೀವನ ಸಾಗಿಸಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ಕೈಗೊಳ್ಳಬೇಕೆಂದು ಸುರೇಶ ಅಂಗಡಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

N- 95 ಮಾಸ್ಕ ವಿತರಣೆ

ಕಂಟೈನ್‌ಮೆಂಟ್ ಝೋನ್‌ಗಳಿಂದ ಬರುವ ವಿದ್ಯಾರ್ಥಿಗಳಿಗೆ N-95 ಮಾಸ್ಕ್ ವಿತರಿಸಲಾಗುತ್ತಿದೆ.ಎಂದು
ಬೆಳಗಾವಿ ತಾಲೂಕು ಬಿಇಒ ಆರ್.ಪಿ.ಝುಟ್ಟನವರ್ ತಿಳಿಸಿದ್ದಾರೆ.

ಕಂಟೈನ್‌ಮೆಂಟ್ ಝೋನ್‌ಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕಂಟೈನ್‌ಮೆಂಟ್ ಝೋನ್‌ಗಳಿಂದ ಬರುವ 30 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯೆವಸ್ಥೆ ಮಾಡಲಾಗಿದೆ.

ಪ್ರತ್ಯೇಕ ಕೊಠಡಿಗಳಲ್ಲಿ ಒಂದೂವರೆ ಮೀಟರ್ ಅಂತರದಲ್ಲಿ ಡೆಸ್ಕ್‌ ಇಟ್ಟು ವ್ಯವಸ್ಥೆ ಮಾಡಲಾಗಿದ್ದು ಕಂಟೈನ್‌ಮೆಂಟ್ ಝೋನ್‌ನಲ್ಲಿರೋ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮಹಾರಾಷ್ಟ್ರ ಗಡಿ ದಾಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಕುದ್ರೇಮನಿ ಗ್ರಾಮದ 65 ವಿದ್ಯಾರ್ಥಿಗಳಿಗೂ‌ ಬಸ್ ವ್ಯವಸ್ಥೆ ಮಾಡಲಾಗಿದೆ.ಕುದ್ರೇಮನಿ ಬೆಳಗಾವಿಯಲ್ಲಿದ್ದರೂ ಉಚಗಾಂವಗೆ ಬರಲು ಮಹಾರಾಷ್ಟ್ರ ಚೆಕ್‌ಪೋಸ್ಟ್ ದಾಟಿ ಬರಬೇಕು ಹೀಗಾಗಿ ಮಹಾರಾಷ್ಟ್ರದ ಕೊಲ್ಲಾಪುರ ಡಿಸಿ ಜೊತೆ ಮಾತನಾಡಿ ಪಾಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ BEO ತಿಳಿಸಿದ್ದಾರೆ.

ಮಹಾರಾಷ್ಟ್ರದ ಶಿನೋಳಿ ಚೆಕ್‌ಪೋಸ್ಟ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಮತಿ ಸಿಕ್ಕಿದೆ ಎಂದು ಬೆಳಗಾವಿ ತಾಲೂಕು ಬಿಇಒ ಆರ್.ಪಿ‌.ಝುಟ್ಟನವರ್ ಹೇಳಿದ್ದಾರೆ.

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *