ಬೆಳಗಾವಿ- ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿ,ಎಂಬಿಬಿಎಸ್ ಕಲಿತು,ಐಪಿಎಸ್ ಅಧಿಕಾರಿಯ ಸಂಗಾತಿಯಾಗಿ,ಈಗ ಎಂ ಎಲ್ ಎ ಆಗಿರುವ ಆ ಹೆಣ್ಣಿಗೆ ಸೊಕ್ಕು ಅನ್ನೋದೆ ಇಲ್ಲ,ಖಾನಾಪೂರ ಕ್ಷೇತ್ರದಲ್ಲಿ ಎಲ್ಲರ ಜೊತೆ ಬೆರೆತು,ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದಲ್ಲಿ ಅಂಜಲಿತಾಯಿಯ ಸ್ಥಾನ ಪಡೆದುಕೊಂಡಿದ್ದಾರೆ.
ಖಾನಾಪೂರ ಕ್ಷೇತ್ರದಲ್ಲಿ ಕೊರೋನಾ ಸೊಂಕಿತರು ಪತ್ತೆಯಾಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ ಕೊರೋನಾ ಮಹಾಮಾರಿಯ ವಿರುದ್ಧ ಸಮರ ಸಾರಿರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಜನರಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ಒಂದು ವಾರದಿಂದ ಖಾನಾಪೂರ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿ,ಸಾರ್ವಜನಿಕರಿಗೆ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಮಾಸ್ಕ ಧರಿಸುವದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವದು,ಸೋಪಿನಿಂದ ಪದೇ ಪದೇ ಕೈ ತೊಳೆದುಕೊಳ್ಳುವದು ಸೇರಿದಂತೆ ಕೊರೋನಾ ಹರಡದಂತೆ ಸಾರ್ವ ಜನಿಕರು ಯಾವ ರೀತಿಯ ಮುಂಜಾಗೃತೆ ವಹಿಸಬೇಕು ಎನ್ನುವದರ ಬಗ್ಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ನಡೆಸಿದ್ದಾರೆ.
MBBS ಪದವಿ ಪಡೆದಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಕೊರೋನಾ ಗೆ ಹೆದರಬೇಕಾಗಿಲ್ಲ,ಮುಂಜಾಗೃತೆ ವಹಿಸಬೇಕು ಎಂದು ಕ್ಷೇತ್ರದ ಜನರಲ್ಲಿ ಧೈರ್ಯ ತುಂಬುತ್ತಿರುವ ಅವರು ಗುರುವಾರ ಪಾದಯಾತ್ರೆ ನಡೆಸುತ್ತಿರುವಾಗ ರೈತ ಮಹಿಳೆಯರು ಗದ್ದೆಯಲ್ಲಿ ಬತ್ತದ ನಾಟಿ ಮಾಡುತ್ತಿರುವದನ್ನು ಗಮನಿಸಿ ಸ್ವತಃ ಗದ್ದೆಗೆ ಇಳಿದು ರೈತ ಮಹಿಳೆಯರ ಜೊತೆ ಬತ್ತದ ನಾಟಿ ಮಾಡುವ ಮೂಲಕ ಶಾಸಕಿ ಅಂಜಲಿ ತಾಯಿ ಖುಷಿ ಪಟ್ಟರು.
ಗಂಟೆಗಳ ಕಾಲ ಬತ್ತದ ನಾಟಿ ಮಾಡಿ ರೈತ ಮಹಿಳೆಯರ ಜೊತೆ ಹರಟೆ ಹೊಡೆದು ಆರೋಗ್ಯದ ಕುರಿತು ಮಹಿಳೆಯರಿಗೆ ಅಗತ್ಯ ಸಲಹೆಗಳನ್ನು ನೀಡಿದ ಬಳಿಕ ಅಂಜಲಿತಾಯಿಯ ಪಾದಯಾತ್ರೆ ಮುಂದಕ್ಕೆ ಸಾಗಿತು.