ಬೆಳಗಾವಿ: ನಮ್ಮೊಳಗಿರುವ ಕೌಶಲಗಳು ಹೊರಬರಬೇಕಾದರೆ ಅಭ್ಯಾಸ, ಪ್ರಯತ್ನ ಬೇಕು ಎಂದು ಜಿಪಂ ಸಿಇಒ ಆರ್.ರಾಮಚಂದ್ರನ್ ಹೇಳಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ತತಿಭೆಯನ್ನು ಹೊರಹಾಕಲು ಸ್ಪರ್ಧಾತ್ಮಕ ಚಟುವಟಿಕೆಗಳು ನಡೇಯಬೇಕು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಮಕ್ಕಳು ಉತ್ತಮ ಭವಿಷ್ಯ ರೂಪುಸಿಕೊಳ್ಳಲು ಸಾಧ್ಯವಿದೆ ಎಂದರು
ಬಾಲಭವನದ ಅಧ್ಯಕ್ಷೆ ಅಂಜಲಿ ನಿಂಬಾಳ್ಕರ್, ಮಕ್ಕಳ ಪ್ರತಿಭೆ ಹೊರತರಲು ಈ ಸ್ಪರ್ಧೆ ಆಯೋಜಿಸಲಾಗಿದ್ದು ಫೆ.16ರಂದು.ಮಕ್ಕಳನ್ನು ಭೀಮಗಡ ವನ್ಯಧಾಮಕ್ಕೆ ಕರೆದೊಯ್ಯಲಾಗುವುದು ಎಂದರು.
ನಿಗಮದ ಸದಸ್ಯರಾದ ಗೋಪಾಲ.ನಾಯಕ
ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ.ಬಸವರಾಜ ವರವಟ್ಟಿ ಮತ್ತಿತರರು ಇದ್ದರು.