Breaking News

ಸಂವಿಧಾನ ಬದಲಾವಣೆ ಮಾಡಬೆಕೆಂದು ಹೇಳುವವರ ಆರೋಗ್ಯ ತಪಾಸಣೆಯಾಗಲಿ

ಬೆಳಗಾವಿ- ಭಾರತದ ಸಂವಿಧಾನದ ಆಶಯಗಳು ದೇಶದ ಏಕತೆ ಮತ್ತು ಐಕ್ಯತೆಗೆ ಪೂರಕವಾಗಿವೆ ಕಾಲಘಟ್ಟಕ್ಕೆ ತಕ್ಕಂತೆ ಆಗಾಗ ಸಂವಿಧಾನದ ತಿದ್ದುಪಡಿ ಆಗುತ್ತದೆ ಆದರೆ ಈಡೀ ಸಂವಿಧಾನವೇ ಬದಲಾಯಿಸುತ್ತೇನೆ ಎಂದು ಹೇಳುವವರ ಆರೋಗ್ಯ ತಪಾಸಣೆ ಮಾಡುವದು ಒಳ್ಳೆಯದು ಎಂದು ಅಣ್ಣಾ ಹಜಾರೆ ಬೆಳಗಾವಿಯಲ್ಲಿ ಅನಂತಕುಮಾರ ಹೆಗಡೆ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಭಾರತೀಯ ಸಂವಿಧಾನದ ಆಶಯಗಳು ವಿವಿಧತೆಯಲ್ಲಿ ಏಕತೆ ತಂದಿವೆ ಸಂವಿಧಾನವನ್ನೇ ಬದಲಾಯಿಸಿ ಬಿಡುತ್ತೇವೆ ಎನ್ನುವರನ್ನು ಆರೋಗ್ಯ ತಪಾಸಣೆ ಗೊಳಪಡಿಸುವದು ಅಗತ್ಯ ಎಂದು ಅಣ್ಣಾ ಹಜಾರೆ ಹೇಳಿದರು
ದೇಶ ಹಾಗು ರಾಜ್ಯದಲ್ಲಿರುವ ಸರ್ಕಾರಗಳು ಬಂಡವಾಳ ಶಾಹಿಗಳ ಸೊತ್ತಾಗಿವೆ ಉದ್ಯಮಿಗಳ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿಲ್ಲವೇಕೆ ? ಇವರಿಂದ ಅನ್ನದಾತರ ಕಲ್ಯಾಣ ಸಾದ್ಯವಿಲ್ಲ ಎಂದು ಅಣ್ಣಾ ಹಜಾರೆ ಬೇಸರ ವ್ಯೆಕ್ತಪಡಿಸಿದರು

ದೇಶದಲ್ಲಿ ಲೋಕಪಾಲ ಮಸೂದೆ ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಪ್ಪತ್ತಕ್ಕೂ ಹೆಚ್ಚು ಪತ್ರಗಳನ್ನು ಬರೆದು ಮನವಿ ಮಾಡಿಕೊಂಡೆ ಆದರೆ ಪ್ರಧಾನಿ ಮೋದಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಲೋಕಪಾಲ್ ಮಸೂದೆಗಾಗಿ ಮತ್ತೇ ಹೋರಾಟಕ್ಕೆ ಸಜ್ಕಾಗುತ್ತಿದ್ದೇವೆ ದೇಶದಲ್ಲಿ ಸಂಚರಿಸಿ ಈ ಬಗ್ಗೆ ಜನಜಾಗೃತಿ ಮೂಡಿಸುತ್ತದ್ದೇವೆ ಎಂದು ಅಣ್ಣಾ ಹಜಾರೆ ತಿಳಿಸಿದರು

ನದಿಗಳ ನೀರು ಕುಡಿಯಲಿಕ್ಕೆ ಮೊದಲು ಸಿಗಬೇಕು ನಂತರ ಕೃಷಿಗೆ ಉಪಯೋಗಿಸಬೇಕು ಆದರೆ ನದಿ ನೀರು ಕುಡಿಯಲಿಕ್ಕೆ ಉಪಯೋಗಿಸಲು ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ ಸರ್ಕಾರಗಳು ನದೀ ನೀರನ್ನು ಕೈಗಾರಿಕೆಗಳನ್ನು ನಡೆಸಲು ಅನಕೂಲ ಮಾಡಿಕೊಡುತ್ತಿವೆ ಆದರೆ ಜನರ ಉಪಯೋಗಕ್ಕೆ ದೊರೆಯುತ್ತಿಲ್ಲ ಎಂದು ಮಹಾದಾಯಿ ನದಿ ನೀರಿನ ಹಂಚಿಕೆ ಕುರಿತು ಈ ರೀತಿ ಅಣ್ಣಾ ಹಜಾರೆ ಅಸಮಾಧಾನ ವ್ಯೆಕ್ತ ಪಡಿಸಿದರು
ನಾನು ಯಾವುದೇ ರಾಜಕೀಯ ಅಧಿಕಾರಕ್ಕೆ ಆಸೆ ಪಟ್ಟವನಲ್ಲ ಮುಂದೆಯೂ ಇದು ನನಗೆ ಬೇಕಾಗಿಲ್ಲ ಅರವಿಂದ ಕೇಜ್ರಿವಾಲ್ ಮತ್ತು ಇತರರ ರಾಜಕೀಯ ಸೇರಿಕೊಂಡಿರುವದರಿಂದ ಅವರ ಬಗ್ಗೆ ನಾನು ಮಾತನಾಡುವದಿಲ್ಲ ಅವರ ಜೊತೆ ಸಂಪರ್ಕವನ್ನು ಇಟ್ಟುಕೊಂಡಿಲ್ಲ ಎಂದು ಅಣ್ಣಾ ಹಜಾರೆ ಹೇಳಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *