ಸಮವಸ್ತ್ರದೊಳಗೆ ಸುತ್ತು..ಬೆಳಗಾವಿಯಲ್ಲಿ ಶುರುವಾಯ್ತು ಖಡಕ್ ಗತ್ತು…ರೌಡಿಗಳಿಗೆ ಕಾದಿದೆ ಆಪತ್ತು…!!!

ಬೆಳಗಾವಿ- ಸಮವಸ್ತ್ರ ದೊಳಗೆ ಸುತ್ತು ಮುಗಿಸಿರುವ ಬೆಳಗಾವಿ ಪೋಲೀಸ್ ಕಮೀಷನರ್ ಕುಂದಾನಗರಿಯ ಸುತ್ತು ಆರಂಭಿಸಿದ್ದಾರೆ ಆರಂಭದಲ್ಲಿಯೇ ರೌಡಿಗಳ ಖಡಕ್ ಕ್ಲಾಸ್ ತೆಗೆದುಕೊಂಡಿರುವ ಅವರು ತಮ್ಮ ಕೆಲಸದ ಗತ್ತು ತೋರಿಸಿದ್ದಾರೆ
ಬೆಳಗಾವಿಗೆ ನೂತನ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ಎರಡನೇ ದಿನವೇ ಡಿ.ಸಿ. ರಾಜಪ್ಪ ಇಂದು ಬೆಳಂಬೆಳಿಗ್ಗೆ ಬೆಳಗಾವಿ ರೌಡಿಗಳಿಗೆ ಚಳಿ ಬಿಡಿಸಿದ್ದಾರೆ.

ಬೆಳಂಬೆಳಗ್ಗೆ ರೌಡಿ ಪರೇಡ್ ನಡೆಸಿದ ರಾಜಪ್ಪ ನಗರ ವ್ಯಾಪ್ತಿಯಲ್ಲಿ ಬರುವ ಅಪರಾಧಿಗಳು, ರೌಡಿಗಳು ಪರೇಡ್ ನಡೆಸಿ ಪ್ರತಿಯೊಬ್ಬನ ವಿಚಾರಣೆ ನಡೆಸಿ ಕಾನೂನು ವೆವಸ್ಥೆಗೆ ದಕ್ಕೆ ತಂದರೆ ಕಠಿಣ ಕ್ರಮ ಜರಗಿಸಲಾಗುವದು ಎಂದು ಎಚ್ಚರಿಕೆ ನಿಡಿದ್ದಾರೆ

ಇನ್ನು ಸರ ಕದಿಯುವ ಆರೋಪಿಗಳನ್ನು ಪ್ರತ್ಯೇಕ ಕರೆದು ಕೂಲಂಕೂಷ ವಿಚಾರ ಮಾಡುವುದಾಗಿ ತಿಳಿಸಿದ ಕಮಿಷ್ನರ್ ಪ್ರತಿ ಸ್ಟೇಷನ್ ನಿಂದ ಲಿಸ್ಟ್ ಮಾಡಲು ಸೂಚಿಸಿದರು. ಕಾಯ್ದೆ ಮುರಿದರೆ, ಕಾಲು ಮುರಿತೀವಿ ಅಂತ ರೌಡಿಗಳಿಗೆ ಎಚ್ಚರಿಕೆ ಸಹ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಿಸಿಪಿ ಸೀಮಾ ಲಾಟಕರ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಬರೋ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಿದ್ದರು

Check Also

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ …

Leave a Reply

Your email address will not be published. Required fields are marked *