ಬೆಳಗಾವಿ – ಕಳೆದ ವಿಧಾನಸಭೆ ಚುನಾವಣೆ,ಲೋಕಸಭೆ ಚುನಾವಣೆ ಹಾಗೂ ಇಂದು ನಡೆದ ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಗಮನಿಸಿದರೆ, ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪ್ರಭಾವಶಾಲಿಗಳಾಗಿದ್ದಾರೆ. ಗೋಕಾಕ್ ಜೊತೆಗೆ ಜಿಲ್ಲೆ ಯಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಹೋದರರಾದ ಬಾಲಚಂದ್ರ,ರಮೇಶ್ ಹಾಗೂ ಸತೀಶ್ ಅವರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರು ಒಪ್ಪುವ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ತಮ್ಮ ಕುಟುಂಬದ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ಅವರು ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನದಲ್ಲಿ ಅಣ್ಣಾಸಾಹೇಬ್ ಜೊಲ್ಲೆ ಅಧ್ಯಕ್ಷರಾಗಬಹುದು ಎನ್ನುವದು ಜನಸಾನ್ಯರ ಲೆಕ್ಕಾಚಾರವಿತ್ತು ಆದ್ರೆ ಬೆಳಗಾವಿ ಜಿಲ್ಲೆಯ ರಾಜಕಾರಣದ ಅಂಡರ್ ಕರೆಂಟ್ ಶಾಕ್ ಕೊಟ್ಟಿದ್ದು, ಅದಲ್ ಬದಲ್ ಕೈಂಚಿ ಕದಲ್ ಎಂಬಂತೆ ಅಣ್ಣಾಸಾಹೇಬ್ ಜೊಲ್ಲೆ ಬದಲಿಗೆ ಅಪ್ಪಾಸಾಹೇಬ್ ವಿರಾಜಮಾನರಾಗಿದ್ದಾರೆ.
ಅಪ್ಪಾಸಾಹೇಬ್ ಕುಲಗೋಡೆ ಅವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದು ಜಾರಕಿಹೊಳಿ ಬ್ರದರ್ಸ್ ನಿರ್ಣಯ ಎಂದು ಮಧ್ಯಾಹ್ನದವರೆಗೆ ಎಲ್ಲರೂ ತಿಳಿದುಕೊಂಡಿದ್ದರು, ಆದ್ರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಅ್ಣಾಸಾಹೇಬ್ ಜೊಲ್ಲೆ, ಮಹಾಂತೇಶ್ ದೊಡ್ಡಗೌಡ್ರ,ಅರವಿಂದ್ ಪಾಟೀಲ ಎಲ್ಲರೂ ಒಟ್ಟಾಗಿ ಬಂದು ನೂತನ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ ಅವರನ್ನು ಸನ್ಮಾನಿಸಿ ಆಶಿರ್ವದಿಸಿದ ಬಳಿಕ ಅಪ್ಪಾಸಾಹೇಬ್ ಅದ್ಯಕ್ಷರಾಗಿದ್ದು ಎಲ್ಲರ ಒಪ್ಪಿಗೆಯಿಂದ ಎಲ್ಲರ ಅಪ್ಪುಗೆಯಿಂದ ಅಪ್ಪಾಸಾಹೇಬ್ ಅವರಿಗೆ ಬಹು ವರ್ಷಗಳ ನಂತರ ಅಧಿಕಾರ ಸಿಕ್ಕಿದೆ ಎನ್ನುವ ಸಂದೇಶ ರವಾನೆಯಾಯಿತು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರೀಯಾಂಕಾ ಜಾರಕಿಹೊಳಿ ಅವರು ವಿಜಯ ಸಾಧಿಸಿ ಈಗ ರಾಯಬಾಗ ತಾಲ್ಲೂಕಿನ ಪ್ರಭಾವಿ ನಾಯಕ ಅಪ್ಪಾಸಾಹೇಬರನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಚಿಕ್ಕೋಡಿ ಜಿಲ್ಲೆಯಾಗುವದು ಖಾತ್ರಿಯಾಗಿದೆ. ಇದು ಬೆಳಗಾವಿ ಸುದ್ದಿ ಡಾಟ್ ಕಾಮ್ ವಿಶ್ಲೇಷಣೆ.