Breaking News

ಕಡೋಲಿ ಮತಗಟ್ಟೆಯಲ್ಲಿ ಗಲಾಟೆ ಜಿಪಂ ಉಪಾಧ್ಯಕ್ಷ ಕಟಾಂಬ್ಳೆಯಿಂದ ಗ್ರಾಪಂ ಸದಸ್ಯನಿಗೆ ಕಪಾಳ ಮೋಕ್ಷ

ಬೆಳಗಾವಿ- ಬೆಳಗಾವಿ ಸಮೀಪದ ಕಡೋಲಿ ಎಪಿಎಂಸಿ ಮತಗಟ್ಟೆಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಅವರು ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣಗೆ ಕಪಾಳ ಮೋಕ್ಷ ಮಾಡಿ ಮತಗಟ್ಟೆ ಆರಣದಲ್ಲಿಯೇ ಎಳೆದಾಡಿ ಗಲಾಟೆ ಮಾಡಿದ ಘಟನೆ ನಡೆದಿದೆ

ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣ ವೃದ್ದ ಮಹಿಳೆಯೊಬ್ಬಳನ್ನು ಮತಗಟ್ಟೆಗೆ ಕರೆತಂದಾಗ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಆತನ ಜೊತೆ ಜಗಳಕ್ಕಿಳಿದು ಆತನಿಗೆ ಎಳೆದಾಡಿ ಕಪಾಳ ಮೋಕ್ಷ ಮಾಡಿದ ಪ್ರಸಂಗ ಅಲ್ಲಿ ನಡೆದಿದೆ

ಪೋಲೀಸರು ಮದ್ಯಪ್ರವೇಶಿಸಿ ಇದು ಮತಗಟ್ಟೆ ಇಲ್ಲಿ ಜಗಳಾಡಬೇಡಿ ಎಂದು ಬುದ್ಧಿವಾದ ಹೇಳಿದಾಗ ಅರುಣ ಕಟಾಂಬ್ಳೆ ನಾನು ಜಿಪಂ ಉಪಾಧ್ಯಕ್ಷ ನನಗೆ ಬುದ್ದಿ ಹೇಳ್ತೀರಾ ಎಂದು ಪೋಲೀಸರಿಗೆ ಅವಾಜ್ ಹಾಕಿದರೆಂದು ತಿಳಿದು ಬಂದಿದೆ

ಕಾಕತಿ ಸಿಪಿಐ ರಮೇಶ ಗೋಕಾಕ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ

ಎಪಿಎಂಸಿ ಚುನಾವಣೆ ಬೆಳಗಾವಿ ತಾಲೂಕಿನಲ್ಲಿ ಬಿರುಸಿನ ಮತದಾನ ನಡೆದಿದೆ

ಇಂದು ಬೆಳಗಾವಿ ಜಿಲ್ಲೆಯ 10 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಸ್ಥಾನಕ್ಕೆ ಮತದಾನ.ನಡೆಯುತ್ತಿದೆ
ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ನಡೆಯಲಿರುವ ಮತದಾನ.ನಡೆಯಲಿದ್ದು ಬೆಳಿಗ್ಗೆ ಎಲ್ಲ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ
ಎಪಿಎಂಸಿಯ ಒಟ್ಟು 106 ಸ್ಥಾನಗಳಿಗೆ ಮತದಾನ ನಡೆಯತ್ತಿದೆ. ಕಣದಲ್ಲಿ 314 ಜನ ಅಭ್ಯರ್ಥಿಗಳು ಕಣದಲ್ಲಿ
ಜಿಲ್ಲೆಯಲ್ಲಿ ಒಟ್ಟು 1561 ಮತಗಟ್ಟೆ ಕೇಂದ್ರ ಗಳಲ್ಲಿ ಮತದಾನ ಆರಂಭವಾಗಿದೆ
ಚುನಾವಣೆಗಾಗಿ 6880 ಮತಗಟ್ಟೆ ಸಿಬ್ಬಂದಿಗಳ ನಿಯೋಜನೆ
ಎಪಿಎಂಸಿ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ
ಬೆಳಗಾವಿ ಜಿಲ್ಲಾ ಮತ್ತು ನಗರ ಪೋಲಿಸ್ ಇಲಾಖೆಯಿಂದ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *