Breaking News
Home / Breaking News / ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ವೀರ ಸನ್ಯಾಸಿಯ ಜಯಂತಿ ಉತ್ಸವ

ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ವೀರ ಸನ್ಯಾಸಿಯ ಜಯಂತಿ ಉತ್ಸವ

ಬೆಳಗಾವಿ-ದೇಶ ಕಂಡ ಮಹಾನ್ ಸನ್ಯಾಸಿ ಯುವಕರ ಸ್ಪೂರ್ತಿಯ ಸೆಲೆ ಸಹೋದರ ಸಹೋದರರಿಯರೇ ಎಂಬ ಎರಡೇ ಎರಡು ಅಕ್ಷರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮದ ಸಂಸ್ಕೃತಿಯ ಝಲಕ್ ತೋರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು

ಬೆಳಗಾವಿಯ ವಿವೇಕ್ ಮಾರ್ಗದಲ್ಲಿರುವ ಆಶ್ರಮದಿಂದ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಮೆರವಣಿಗೆಗೆ ಸಂಸದ ಸುರೇಶ ಅಂಗಡಿ ಸೇರಿದಂತೆ ಜಿಲ್ಲೆಯ ಗಣ್ಯರು ಹಾಗು ಅಧಿಕಾರಿಗಳು ಚಾಲನೆ ನೀಡಿದರು

ಇದೇ ಸಂಧರ್ಭದಲ್ಲಿ ಆಶ್ರಮದಲ್ಲಿ ತೆರೆಯಲಾದ ಮ್ಯುಸಿಯಂ ಸೇರಿದಂತೆ ನವೀಕೃತಗೊಂಡ ಆಶ್ರಮದ ಕಟ್ಟಡವನ್ನು ಉದ್ಘಾಟಿಸಲಾಯಿತು

ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಮೆರವಣಿಗೆಯಲ್ಲಿ ನಗರದ ಸಾವಿರಾರು ಜನ ವಿಧ್ಯಾರ್ಥಿಗಳು ಹಾಗು ಯುವಕರು ಪಾಲ್ಗೊಂಡಿದ್ದರು

ಇದಾದ ಬಳಿಕ ಶನಿವಾರ ಖೂಟದಲ್ಲಿ ಬೆಳಗಾವಿ ಉತ್ತರ ಬಿಜೆಪಿ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಸಂಸದ ಸುರೇಶ ಅಂಗಡಿ ಹಾಗು ಕಿರಣ ಜಾಧವ ಅವರು ಪುಷ್ಪ ಸಮರ್ಪಿಸಿದರು

ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯ ನೆಲೆಯಾಗಿದೆ ದೇಶಕ್ಕೆ ಪ್ರೇರಣಾ ಶಕ್ತಿಯಾಗಿದ್ದರು ಅವರ ಸಂದೇಶಗಳು ಇಂದಿಗೂ ಭಾರತೀಯರಿಗೆ ದಾರಿ ದೀಪವಾಗಿವೆ ಅವರ ಸಂದೇಶ ಮತ್ತು ತತ್ವಗಳನ್ನು ಅನುಸರಿಸಿ ಸದೃಡ ಭಾರತದದ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *