ಬೆಳಗಾವಿಯಲ್ಲಿ ಭಾವುಕರಾದ ಅಪ್ಪು ಅಭಿಮಾನಿಗಳು

ಬೆಳಗಾವಿ-ಇಂದು ವಿಶ್ವದಾದ್ಯಂತ ಪವರ್‌ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಯಾಗುತ್ತಿದೆ.ಅಪ್ಪು ಅಗಲಿಕೆಯ ನಂತರ ಗಂಧದ ಗುಡಿ ಬಿಡುಗಡೆಯಾಗುವ ಸಂಧರ್ಭದಲ್ಲಿ ಅಪ್ಪು ಅಭಿಮಾನಿಗಳು ಭಾವುಕರಾದರು.

ಕುಂದಾನಗರಿ ಬೆಳಗಾವಿಯಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ಆಗುತ್ತಿದೆ.ಸ್ವರೂಪ – ನರ್ತಕಿ, ಕಾರ್ನಿವಲ್, ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10:45ಕ್ಕೆ ಮೊದಲ ಶೋ ನಡೆಯಿತು‌

ನವವಧುವಿನಂತೆ ಚಿತ್ರಮಂದಿರಗಳನ್ನು ಸಿಂಗರಿಸಿರುವ ಅಪ್ಪು ಅಭಿಮಾನಿಗಳು,ಚಿತ್ರಮಂದಿರ ಎದುರು ಕನ್ನಡದ ಬಾವುಟ, ಹಳದಿ ಕೆಂಪು ಬಂಟಿಂಗ್ ಹಚ್ಚಿ ಸಂಭ್ರಮಿಸಿದ್ದಾರೆ.ಗಂಧದ ಗುಡಿ ಚಿತ್ರವೀಕ್ಷಿಸಲು ಆಗಮಿಸುತ್ತಿರುವ ಅಪ್ಪು ಫ್ಯಾನ್ಸ್ ಅಪ್ಪು ಪೋಸ್ಟರ್ ಗೆ ಕೈಮುಗಿದು ಚಿತ್ರಮಂದಿರದ ಒಳಗೆ ಹೋಗುತ್ತಿದ್ದಾರೆ.

ಮಧ್ಯಾಹ್ನ 12.30ಕ್ಕೆ ಅಪ್ಪು ಅಭಿಮಾನಿಗಳಿಂದ ಸಸಿ ನೀಡುವ ಕಾರ್ಯಕ್ರಮ ನಡೆಯಲಿದೆ.ಚಿತ್ರ ವೀಕ್ಷಿಸಲು ಆಗಮಿಸುವವರಿಗೆ ಸಸಿ ನೀಡಲಿರುವ ಅಪ್ಪು ಅಭಿಮಾನಿಗಳು ವಿನೂತನವಾಗಿ ಚಿತ್ರ ಬಿಡುಗಡೆಯ ಸಂಭ್ರಮ ಹಂಚಿಕೊಳ್ಳಲಿದ್ದಾರೆ.ಅಪ್ಪು ಅವರ ಗಂಧದಗುಡಿ ಚಿತ್ರ ನೋಡುವ ಕಾತರ, ಕೊನೆಯ ಚಿತ್ರ ಎಂಬ ಕೊರಗು ಅಪ್ಪು ಅಭಿಮಾನಿಗಳಲ್ಲಿ ಇದೆ.

ಎಮೋಷನಲ್ ಆಗಿರುವ ಬೆಳಗಾವಿಯ ಪುನೀತ್ ರಾಜಕುಮಾರ ಅಭಿಮಾನಿಗಳು ಒಂದು ಕಡೆ ಚಿತ್ರ ಬಿಡುಗಡೆಯ ಸಂಭ್ರಮ ದಲ್ಲಿದ್ದರೆ ಇನ್ನೊಂದು ಕಡೆ ಅಪ್ಪು ನಮ್ಮ ಜೊತೆಗಿಲ್ಲ ಎನ್ನುವ ದುಖ ಅಪ್ಪು ಅಭಿಮಾನಿಗಳಲ್ಲಿ ಕಂಡು ಬರುತ್ತಿದೆ.

ಸ್ವರೂಪ-ನರ್ತಕಿ ಚಿತ್ರ ಮಂದಿರದಲ್ಲಿ ಗಂಧದ ಗುಡಿ ಮೊದಲ ಶೋ ಹೌಸ್ ಫುಲ್ ಆಗಿತ್ತು.ಚಿತ್ರ ಮಂದಿರದ ವತಿಯಿಂದ ಥೇಟರ್ ಮುಂದೆ ಅಪ್ಪು ಭಾವಚಿತ್ರ ಇಟ್ಟು ಪೂಜೆ ನೆರವೇರಿಸಿದ ಅಭಿಮಾನಿಗಳುಅಪ್ಪು ಪರ ಘೋಷಣೆ ಕೂಗುತ್ತ ಪೂಜೆಯಲ್ಲಿ ಪಾಲ್ಗೊಂಡರು.ಪೂಜೆ ಬಳಿಕ ಗೊಂಬೆ ಹೇಳುತೈತೆ ಎಂದು ಹಾಡು ಹಾಡಿದ ಅಪ್ಪು ಫ್ಯಾನ್ಸ್,ಅಪ್ಪು ಭಾವಚಿತ್ರ ಇರುವ ಟೀಶರ್ಟ್ ಧರಿಸಿಕೊಂಡು ಬಂದ ಬಾಲಕರಿಂದ ಅಪ್ಪು ಫೋಟೊಗೆ ನಮನ ಸಲ್ಲಿಸಲಾಯಿತು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *