ಬೆಳಗಾವಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಾಡದ ಕೆಲಸವನ್ನು ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು ಮಾಡಿದ್ದಾರೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬೆಳಗಾವಿ ಜಿಲ್ಲೆ ಯಾವತ್ತೂ ಬಂದಿಲ್ಲ,ಮುಂದೆ ಬರುವ ಲಜ್ಷಣಗಳೂ ಕಾಣಿಸುತ್ತಿಲ್ಲ ಅದರೆ ಚಂದರಗಿಯವರು ಬೆಳಗಾವಿಯಲ್ಲಿ ಮಾಡಿರುವ ಕನಡದ ಕಾಯಕ ನಿಜವಾಗಿಯೂ ಸ್ಪೂರ್ತಿದಾಯಕ,ಪ್ರೇರಣಾದಾಯಕವೂ ಹೌದು,ಕನ್ನಡದ ಕೀರ್ತಿ ಬೆಳಗಿದ ಕನ್ನಡದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿರುವದು ಪ್ರಶಂಸಾರ್ಹ ಸಂಗತಿಯಾಗಿದೆ.
ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡಕ್ಕೆ
125/125 ಅಂಕಗಳು! ಬೆಳಗಾವಿ
ಇಬ್ಬರು ವಿದ್ಯಾರ್ಥಿನಿಯರಿಗೆ
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿಯ ಸನ್ಮಾನ,ಬಹುಮಾನ
ಒಮ್ಮೊಮ್ಮೆ ನನಗೆ ಅಭಿಮಾನದ
ಜೊತೆಗೆ ಅಚ್ಚರಿಯೂ ಆಗುತ್ತದೆ!ಇದ್ದ ಬಿದ್ದ
ಅಂಕಗಳನ್ನು ಎರಡೂ ಕೈಗಳಿಂದ ಬಾಚಿಕೊಂಡು ಬಿಡುತ್ತಾರಲ್ಲ! ಹೇಗೆ ಓದಿರಬೇಕು? ಎಷ್ಟು ಓದಿರಬೇಕು?!!
ಈ ವರ್ಷದ ಕೊರೋನಾ ಆತಂಕ,ಭೀತಿಯ ಮಧ್ಯೆ ಈ ಹುಡುಗರು ಹೇಗಾದರೂ ಪರೀಕ್ಷೆ ಬರೆಯುತ್ತಾರೆ ಎಂಬ ಅಳುಕೂ ಇತ್ತು.ಆದರೂ ಬರೆದೇ ಬಿಟ್ಟರು!
ಬೆಳಗಾವಿಯ ಹೃದಯ ಭಾಗವಾದ ರವಿವಾರ ಪೇಟೆಗೆ ಹೊಂದಿಕೊಂಡಿರುವ ಜಿನ್ಹಾ ವೃತ್ತದ ಹತ್ತಿರದ ಅತ್ಯಂತ ಹಳೆಯದಾದ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಮಾಧ್ಯಮಿಕ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ.ಎಸ್.ಎಸ್.ಎಲ್.ಸಿ.ಪರೀಕ್ಷೆ
ಪರೀಕ್ಷೆಯಲ್ಲಿ ಇವರು 125 ಕ್ಕೆ 125 ಅಂಕ ಪಡೆದಿದ್ದಾರೆ!
ಕು.ಪೂರ್ವ ಮುತಗೇಕರ ಮಾತೃ ಭಾಷೆ ಮರಾಠಿ.ಬೆಳಗಾವಿಯ ಕೊನವಾಳಗಲ್ಲಿಯ ನಿವಾಸಿ.ತಂದೆ ಖಾಸಗಿ ಉದ್ಯೋಗದಲ್ಲಿದ್ದಾರೆ.ಇನ್ನೊಬ್ಬಳು ಕು.ಪೂಜಾ ಪಾಟೀಲ .ಧಾಮಣೆ ಗ್ರಾಮದ ನಿವಾಸಿ .ತಂದೆ ಕೃಷಿಕರು.ಇಬ್ಬರೂ ಮರಾಠಿ ಪರಿಸರದಲ್ಲೇ ಬೆಳೆದವರು.ಆದರೆ ರಾಜ್ಯ ಭಾಷೆಯ ಕಲಿಕೆಗೆ ಇಬ್ಬರಿಗೂ ಯಾವ ಅಡಚಣಿಯೂ ಬರಲಿಲ್ಲ.ಕನ್ನಡದಲ್ಲಿ ಕನ್ನಡಿಗರ ಮಕ್ಕಳೇ ಮಾಡಲಾಗದ ಸಾಧನೆ ಮಾಡಿದರು.ಬೆಳಗಾವಿಯೇ ಹೆಮ್ಮೆ ಪಡುವಂಥ ಸಾಧನೆಗೈದರು!
ಈ ಹೆಮ್ಮೆಯ ಕುವರಿಯರ ಸಾಧನೆಗೆ ಗೌರವ,ಸನ್ಮಾನ ಸಲ್ಲಿಸಲು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಇಂದು ಗುರುವಾರ ಮುಂಜಾನೆ ಶಾಲೆಗೆ ತೆರಳಿ ಶಾಲು ಹೊದಿಸಿ ಸನ್ಮಾನಿಸಿತು.ಒಂದು ಸಾವಿರ ರೂ.ಗಳ ನಗದು ಪ್ರೋತ್ಸಾಹಕರ ಬಹುಮಾನ ನೀಡಿತು.
ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ,ಪದಾಧಿಕಾರಿಗಳಾದ ಹರೀಶ ಕರಿಗೊಣ್ಣವರ,ವಿರೇಂದ್ರ ಗೋಬರಿ,ರಾಕೇಶ ಸಂಗಣ್ಣವರ,ಶಾಲೆಯ ಮುಖ್ಯಾಧ್ಯಾಪಕ ಎಮ್.ಕೆ.ಮಾದರ,ಶಿಕ್ಷಕಿಯರಾದ ಸರಸ್ವತಿ ದೇಸಾಯಿ,ವಿ ಜಿ.ಕುಲಕರ್ಣಿ,ಶ್ರೀದೇವಿ ಕುಲಕರ್ಣಿ,ವೈ.ಎಚ್.ಕಾಂಬಳೆ ಮುಂತಾದವರು ಹಾಜರಿದ್ದು ಸಾಧಕ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ವಿದ್ಯಾರ್ಥಿನಿಯರ ಪಾಲಕರಾದ
ಶ್ರೀಮತಿ ಸುಜಾತಾ ಮುತಗೇಕರ ಮತ್ತು
ಶ್ರೀಮತಿ ರಾಜಶ್ರೀ ಪಾಟೀಲ ಅವರೂ
ಉಪಸ್ಥಿತರಿದ್ದರು.