Breaking News

ಕಲಿತ ಶಾಲೆಯ ಅಭಿವೃದ್ಧಿಗೂ ಸೈ…..ಶತಮಾನೋತ್ಸದ ಸಂಬ್ರಮ ಹೆಚ್ಚಿಸಲೂ ಜೈ…..!

ಕಲಿತ ಶಾಲೆಗೆ ಶಾಸಕನ ಕೊಡುಗೆ,ಶತಮಾನೋತ್ಸವಕ್ಕೂ ವಿಶೇಷ ದೇಣಿಗೆ….!

ಬೆಳಗಾವಿ- ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸಿಸುವವರು ಸಿಗೋದು ಬಹಳ ವಿರಳ,ಆದರೆ ಶಾಸಕ ಅಭಯ ಪಾಟೀಲ ಕೆಲ ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದರು ಈಗ ಅವರು ಕಲಿತ ಶಾಲೆ ಈ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಇದಕ್ಕೂ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ.

ಬೆಳಗಾವಿಯ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ ಶಾಲೆಯಲ್ಲಿ ಶಾಲೆಯಲ್ಲಿ ಶಾಸಕ ಅಭಯ ಪಾಟೀಲರು ಕಲಿತಿದ್ದಾರೆ,ಕಲಿತ ಶಾಲೆಯನ್ನು ಮರೆಯದೇ ಈ ಶಾಲೆಯ ಅಭಿವೃದ್ಧಿಗೆ ಎರಡುವರೆ ಕೋಟಿ ಅನುದಾನ ಖರ್ಚು ಮಾಡಿದ್ದು ಈ ಶಾಲೆ ಇದೇ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಲು ಶಾಸಕ ಅಭಯ ಪಾಟೀಲ ಕೈಜೋಡಿಸಿದ್ದಾರೆ.

ಇಂದು ಶಾಲೆಗೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಶಾಲೆಯ ಗುರುಗಳ ಜೊತೆ ಶತಮಾನೋತ್ಸವದ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಿ, ಶತಮಾನೋತ್ಸವದ ಅಂಗವಾಗಿ ಶಾಲೆಯ ಸಭಾಗೃಹದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರು ಈ ಕಾಮಗಾರಿ 1.25 ಕೋಟಿ ರೂ ಅನುದಾನದಲ್ಲಿ ಸಭಾಗೃಹದ ನೂತನಿಕರಣ ಕಾಮಗಾರಿಗೆ ಶಾಸಕ, ಅಭಯ ಪಾಟೀಲ ಚಾಲನೆ ನೀಡಿದರು.

ಚಿಂತಾಮಣರಾವ ಶಾಲೆ ಸರ್ಕಾರಿ ಶಾಲೆಯಾಗಿದ್ದು 1920 ರಲ್ಲಿ ಸ್ಥಾಪಿತವಾಗಿತ್ತು ಈ ಶಾಲೆಯ ಸಭಾಗೃಹ ಕ್ಕೆ ಹೆಚ್.ಹೆಚ್ ರಾಜಲಜ್ಷ್ಮೀ ರಾಜೆ,ವಿಜಯಸಿಂಹ ರಾಜೆ,ಪಟವರ್ದನ್ ಸಭಾಗೃಹ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.

Check Also

ಬೆಳಗಾವಿಯಲ್ಲಿ ಸಭೆ ನಡೆಸಿದ ರಾಹುಲ್ ವಾರ್ನಿಂಗ್ ಮಾಡಿದ್ದೇನು ಗೊತ್ತಾ..??

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ ಬೆಳಗಾವಿ, – ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ …

Leave a Reply

Your email address will not be published. Required fields are marked *