Breaking News

ಸರ್ ಬಜೆಟ್ ನಲ್ಲಿ ಬೆಳಗಾವಿಗೆ ಇವೆಲ್ಲಾ ಕೆಲ್ಸಾ ಆಗಬೇಕ್ರೀ…!!!

ಬೆಳಗಾವಿ:ಬೆಳಗಾವಿ ಜಿಲ್ಲಾ
ಮಟ್ಟದ ಕಚೇರಿಗಳನ್ನು ಒಂದೇ
ಕಟ್ಟಡದಲ್ಲಿ ಸ್ಥಾಪಿಸಲು ಅನುಕೂಲವಾಗಲು
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ
ಆವರಣದಲ್ಲಿಯೇ ಬಹುಮಹಡಿ
ಕಟ್ಟಡವನ್ನು ನಿರ್ಮಿಸಬೇಕು.ಬೆಳಗಾವಿ
ಮಹಾನಗರದ ಸಂಚಾರ ದಟ್ಟಣೆಗೆ
ಪರಿಹಾರೋಪಯವಾಗಿ ರಸ್ತೆ
ಮೇಲ್ಸೇತುವೆಯನ್ನು ನಿರ್ಮಿಸಬೇಕು
ಎಂದು ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿಯ
ಮತ್ತು ಹಿರಿಯ ಸಾಹಿತಿಗಳನ್ನೊಳಗೊಂಡ
ನಿಯೋಗವು ಇಂದು ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿ
ಅವರನ್ನು ಆಗ್ರಹಿಸಿತು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ನಿಯೋಗವು ಖ್ಯಾತ ರಂಗಭೂಮಿ
ಕಲಾವಿದ ದಿ.ಏಣಗಿ ಬಾಳಪ್ಪ,ಖ್ಯಾತ
ಕಾದಂಬರಿಕಾರ ದಿ.ಕೃಷ್ಣಮೂರ್ತಿ
ಪುರಾಣಿಕ,ಖ್ಯಾತ ಹಿಂದೂಸ್ತಾನಿ
ಗಾಯಕ ದಿ.ಕುಮಾರ ಗಂಧರ್ವ,ಖ್ಯಾತ
ಕವಿಗಳಾದ ದಿ.ಡಿ.ಎಸ್.ಕರ್ಕಿ,ದಿ.ಎಸ್.ಡಿ.
ಇಂಚಲ ಅವರ ಹೆಸರಿನಲ್ಲಿ ಟ್ರಸ್ಟಗಳನ್ನು
ಸ್ಥಾಪಿಸಬೇಕು ಎಂದು ಒತ್ತಾಯಿಸಿತು.
ಜಿಲ್ಲೆಯ ರಾಮದುರ್ಗ ಬಳಿಯ
ಶಬರಿ ಕೊಳ್ಳವನ್ನು ಅಭಿವೃದ್ಧಿಪಡಿಸಬೇಕು
ಎಂಬ ಬೇಡಿಕೆಯನ್ನೂ ಸಹ
ಮನವಿಯಲ್ಲಿ ಸೇರಿಸಲಾಗಿದೆ.
ಬೆಳಗಾವಿಯ ಜಿಲ್ಲಾ ಮಟ್ಟದ
23 ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಮೂಲಕ ಜಿಲ್ಲಾಡಳಿತ ಬಹುದೊಡ್ಡ ಪ್ರಮಾದವೆಸಗಿದೆ.ರಾಜ್ಯ
ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ತಾವು ನಿರಂತರ
ಪ್ರಯತ್ನ ನಡೆಸಿದ್ದೀರಿ.ಸುವರ್ಣ ಸೌಧವು
ರಾಜ್ಯ ಸಚಿವಾಲಯವಾಗಬೇಕೇ ಹೊರತು
ಜಿಲ್ಲಾ ಮಟ್ಟದ ಆಡಳಿತ ಕೇಂದ್ರವಾಗಬಾರದು ಎಂದು ಕ್ರಿಯಾ
ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ
ಮುಖ್ಯಮಂತ್ರಿಗಳಿಗೆ ಹೇಳಿದರು.
2015 ರಲ್ಲಿ ಎರಡು ಕಿ.ಮೀ.ನಷ್ಟು
ರಸ್ತೆ ಮೇಲ್ಸೇತುವೆ ನಿರ್ಮಿಸಲು
ಹಿಂದಿನ ಸರಕಾರ 100 ಕೋ.ರೂಗಳ
ವಿಶೇಷ ಅನುದಾನ ಘೋಷಿಸಿತ್ತು.ಆದರೆ
ಅದನ್ನು ರದ್ದುಗೊಳಿಸಿ ರಸ್ತೆ ಮತ್ತು
ಚರಂಡಿಗಳಿಗಾಗಿ ವಿನಿಯೋಗಿಸಲಾಯಿತು ಎಂದು ನಿಯೋಗದ ಸದಸ್ಯರು
ಬೊಮ್ಮಾಯಿ ಅವರಿಗೆ ವಿವರಿಸಿದರು.
ಉತ್ತರದಲ್ಲಿ ಶ್ರೀರಾಮಚಂದ್ರನಿಗೆ
ಅಯೋಧ್ಯೆ ಹೇಗೆಯೊ ದಕ್ಷಿಣದಲ್ಲಿ ಶಬರಿಗಾಗಿ ಶಬರಿಕೊಳ್ಳವಿದೆ.ಈ ಕೊಳ್ಳವನ್ನು ಅಭಿವೃದ್ಧಿಪಡಿಸಿದರೆ ಒಂದು ಪ್ರಮುಖ
ಪ್ರವಾಸಿ ಕೇಂದ್ರವಾಗುವದೆಂದು
ಬೊಮ್ಮಾಯಿ ಅವರಿಗೆ ತಿಳಿಸಲಾಯಿತು.
ಇದೇ ಫೆಬ್ರುವರಿ 25 ರ ನಂತರ
ಬೆಂಗಳೂರಿಗೆ ಬರಲು ನಿಯೋಗಕ್ಕೆ
ಬೊಮ್ಮಾಯಿ ಅವರು ತಿಳಿಸಿದರು.
ಮುಂಬರುವ ಮುಂಗಡ ಪತ್ರದಲ್ಲಿ ಇಂದಿನ ಮನವಿಯಲ್ಲಿನ ಬೇಡಿಕೆಗಳನ್ನು
ಸೇರಿಸಲು ಬೊಮ್ಮಾಯಿ ಅವರು
ಸಕಾರಾತ್ಮಕವಾಗಿ ಸ್ಪಂದಿಸಿದರು.
ಹಿರಿಯ ಸಾಹಿತಿಗಳಾದ ಸರ್ವಶ್ರೀ ಬಿ.ಎಸ್.ಗವಿಮಠ,ಬಸವರಾಜ ಜಗಜಂಪಿ,
ರಾಮಕೃಷ್ಣ ಮರಾಠೆ,ಸುಭಾಷ ಏಣಗಿ
ಶಿರೀಷ ಜೋಷಿ,ಕನ್ನಡ ಹೋರಾಟಗಾರರಾದ ಮೈನೋದ್ದೀನ ಮಕಾನದಾರ,ಶಿವಪ್ಪ
ಶಮರಂತ,ಸಾಗರ ಬೋರಗಲ್ಲ
ಮುಂತಾದವರು ನಿಯೋಗದಲ್ಲಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *