Breaking News

ಅವರು ಹೇಳಿದ್ದನ್ನು ಇವರು ಅಚ್ಚುಕಟ್ಟಾಗಿ ಮಾಡಿದ್ರು…!!

ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಕಚೇರಿ ಗ್ರಂಥಾಲಯ…!!

ಬೆಳಗಾವಿ- ಸರ್ಕಾರಿ ಕಚೇರಿಗಳಿಗೆ ಹೋಗಿ ಸಾಹೇಬ್ರು ಯಾವಾಗ ಬರ್ತಾರೆ ಎಂದು ಕಾಯುವದು ಕಷ್ಟದ ಕೆಲಸ, ಯಾಕಂದ್ರೆ ಸಾಹೇಬ್ರು ಚೇಂಬರ್ ಗೆ ಬರೋವರೆಗೆ ಟೈಂ ಪಾಸ್ ಆಗಲ್ಲ.ಹತ್ತು ಸಲ ಗಡಿಯಾರ ನೋಡುವದೇ ಕೆಲಸ.ಈ ರಿತಿಯ ದೃಶ್ಯಗಳು ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ.

ಬೆಳಗಾವಿ ಜಿಲ್ಲಾಧಿಕಾರಿಗಳು ಇದಕ್ಕೊಂದು ಅರ್ಥಪೂರ್ಣವಾದ ಉಪಾಯ ಹುಡುಕಿದ್ದು ಈ ಉಪಾಯವನ್ನು ತಮ್ಮ ಕಚೇರಿಯಲ್ಲೇ ಅನುಷ್ಠಾನ ಮಾಡುವದರ ಜೊತೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ ಕಚೇರಿ,ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಗಳಲ್ಲೂ ಅನುಷ್ಠಾನ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಆಗುವಂತಹ ರಾಜ್ಯದ ಗಮನ ಸೆಳೆಯವ ಕಾರ್ಯವನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಡಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಚೇಂಬರ್ ಎದುರು ಸಾರ್ವಜನಿಕರಿಗಾಗಿ ಸುಸಜ್ಜಿತವಾದ ವೇಟೀಂಗ್ ಕ್ಯಾಂಪಸ್ ನಿರ್ಮಾಣ ಮಾಡಿ ಈ ಕ್ಯಾಂಪಸ್ ನಲ್ಲಿ ಆಕರ್ಷಕವಾದ ಗ್ರಂಥಾಲಯ ಮಾಡಿ ಈ ಗ್ರಂಥಾಲಯದಲ್ಲಿ ಬೆಳಗಾವಿ ಜಿಲ್ಲೆಯ ಇತಿಹಾಸ,ಸಂಸ್ಕೃತಿ ಇಲ್ಲಿಯ ಕಲೆ,ಪರಂಪರೆಯನ್ನು ಬಿಂಬಿಸುವ ಪುಸ್ತಕಗಳನ್ನು ಈ ಗ್ರಂಥಾಲಯದಲ್ಲಿ ಇಟ್ಟಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಬೆಳಗಾವಿ ಪಾಲಿಕೆಗೆ ಬಂದಾಗಿನಿಂದ ಬೆಳಗಾವಿ ಪಾಲಿಕೆಯ ಆಡಳಿತ ವ್ಯವಸ್ಥೆಯೇ ಬದಲಾಗಿದೆ.ಭಾಷಾ ವೈಷಮ್ಯದಲ್ಲೇ ಮುಳುಗಿದ್ದ ಪಾಲಿಕೆಯ ವ್ಯವಸ್ಥೆ ಈಗ ಜನಪರ ವಾಗುತ್ತಿದೆ.ಆಯುಕ್ತ ಅಶೋಕ ದುಡಗುಂಟಿ ಅವರು ಖುದ್ದಾಗಿ ಫೀಲ್ಟಗೆ ಇಳಿದಿದ್ದಾರೆ.ಕಸ ವಿಲೇವಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಸ್ವತಃ ಅವಲೋಕಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಸೂಚನೆಯಂತೆ ಅಶೋಕ ದುಡಗುಂಟಿ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಯಲ್ಲೂ ಸಾರ್ವಜನಿಕರ ಅನಕೂಲಕ್ಕಾಗಿ ಸುಸಜ್ಜಿತ ಆಸನದ ವ್ಯವಸ್ಥೆ ಇರುವ ಹೈಟೆಕ್ ವೇಟೀಂಗ್ ಕ್ಯಾಂಪಸ್ ನಿರ್ಮಿಸಿ,ಈ ಕ್ಯಾಂಪಸ್ ನಲ್ಲಿ ಗ್ರಂಥಾಲಯ ನಿರ್ಮಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *