ಬೆಳಗಾವಿ-ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ, ನಾಲ್ಕು ಮಾತುಗಳನ್ನು, ಮಾತಾಡಬೇಕಾಗುತ್ತದೆ.ಅಧಿಕಾರಿಗಳ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಮಾಡುವದು ಸರಿಯಲ್ಲ, ಅಧಿಕಾರಿಗಳು ಫೋಸ್ಟೆಡ್ ಬೆಳಗಾವಿ ಪಾಲಿಕೆ ಆಯುಕ್ತರು ಗುಡ್ ಆಫೀಸರ್ ಕೋರ್ಟ ನಿರ್ದೇಶನಗಳನ್ನು ಪಾಲಿಸಿದ್ದಾರೆ ಎಂದು ಹೈಕೋರ್ಟ್ ಪಾಲಿಕೆ ಆಯುಕ್ತರ ನ್ಯಾಯ ಪಾಲನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ.
ಸ್ಮಾರ್ಟ್ ಸಿಟಿಯೋಜನೆಯಡಿ ಅಕ್ರಮವಾಗಿ ರಸ್ತೆ ನಿರ್ಮಿಸಿದ ಪ್ರಕರಣ ಸಂಬಂಧ ಕೋರ್ಟ್ ಆದೇಶ ಪಾಲನೆ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಹೈಕೋರ್ಟ್ ಧಾರವಾಡ ಪೀಠ ಗುಡ್ ಆಫೀಸರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.. ವ್ಯಕ್ತಪಡಿಸಿದೆ. ಬೆಳಗಾವಿಯ ಹಳೆಯ ಪಿ.ಬಿ ರಸ್ತೆಯಿಂದ ಬ್ಯಾಂಕ್ ಆಫ್ ಇಂಡಿಯಾ ವರೆಗಿನ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು ಭೂಸ್ವಾಧೀನ ಮಾಡಿಕೊಳ್ಳದೇ ಬಾಳಾಸಾಹೇಬ ಪಾಟೀಲ ಅವರಿಗೆ ಸೇರಿದ ಖಾಸಗಿ ಜಾಗೆಯಲ್ಲಿ ಆಕ್ರಮವಾಗಿ ರಸ್ತೆ ನಿರ್ಮಿಸಲಾಗಿತ್ತು ಪರಿಹಾರ ನೀಡುವಂತೆ ಬಾಳಾಸಾಹೇಬ್ ಪಾಟೀಲ ಹೈಕೋರ್ಟ್ ಮೊರೆ ಹೋಗಿದ್ದರು ಇವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇದೊಂದು ಲ್ಯಾಂಡ್ ರಾಬರಿ ಎಂದು ಆಕ್ರೋಶ ವ್ಯಕ್ತಪಡಿಸಿತ್ತು ಪರಿಹಾರ ಅಥವಾ ಜಮೀನು ವಾಪಸ್ ನೀಡುವಂತೆ ಮಾನ್ಯ ಹೈಕೋರ್ಟ್ ಬೆಳಗಾವಿ ಪಾಲಿಕೆಗೆ ಸೋಮವಾರದವರೆಗೆ ಗಡುವು ನೀಡಿತ್ತು.
ನಿನ್ನೆ ಸೋಮವಾರ ಬೆಳಗಾವಿ ಪಾಲಿಕೆ ಆಯುಕ್ತರು ಜಾಗೆಯನ್ನು ಜಮೀನು ಮಾಲೀಕರಿಗೆ ವಾಪಸ್ ನೀಡಿರುವ ಬಗ್ಗೆ ಹೈಕೋರ್ಟಿನಲ್ಲಿ ದಾಖಲೆಗಳನ್ನು ಸಲ್ಲಿಸಿದ ಸಂಧರ್ಭದಲ್ಲಿ ಮಾನ್ಯ ಹೈಕೋರ್ಟ್ ಪಾಲಿಕೆ ಆಯುಕ್ತರ ನ್ಯಾಯ ಪಾಲನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ
ಅಧಿಕಾರಿಗಳು ಕೆಲವೊಂದು ಸಂಧರ್ಭದಲ್ಲಿ ಮೌಖಿಕ ಆದೇಶಗಳನ್ನು ಪಾಲಿಸುತ್ತಾರೆ.ರಸ್ತೆ ಕಾಮಗಾರಿಯ ನಷ್ಟವನ್ನು ಅಧಿಕಾರಿಗಳೇ ಭರಿಸಬೇಕು ಎನ್ನುವದು ಸರಿಯಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಿದ್ದಾರೆ. ನ್ಯಾಯಾಂಗ ನಿಂಧನೆಬ ಪ್ರಕರಣವನ್ನು ಇಲ್ಲಿಗೆ ಮುಚ್ಚುತ್ತೇವೆ. ಎಂದು ನ್ಯಾಯಾಲಯ ಹೇಳಿತು.
ನಷ್ಟವನ್ನು ಯಾರಿ ಭರಿಸಬೇಕು ಎನ್ಬುವದರ ಬಗ್ಗೆ ಪಾಲಿಕೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ.ಪಾಲಿಕೆಯಲ್ಲಿ ಬಾಡಿ ಇದೆ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೈಕೋರ್ಟ್ ಹೇಳಿತು.