ಬೆಳಗಾವಿ- ಬೆಳಗಾವಿಯ ಮಾಸ್ಟರ್ ಮೈಂಡ್ ಈಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದಂತೆ ಕಾಣುತ್ತಿದೆ.ಲೋಕಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಅಶೋಕ ಪೂಜಾರಿಯನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ ಎನ್ನುವ ಸುದ್ಧಿ ಈಗ ಸದ್ದಿಲ್ಲದೇ ಹರಿದಾಡುತ್ತಿದೆ.
ಬಿಜೆಪಿಗೆ ಟಕ್ಕರ್ ಕೊಡಲು,ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಗೋಕಾಕಿನ ಅಶೋಕ ಪೂಜಾರಿ ಅವರನ್ನುಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಶೋಕ ಪೂಜಾರಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ,ಅವರೇ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಸುದ್ಧಿ ಗೋಕಾಕಿನಲ್ಲಿ ಸದ್ದು ಮಾಡಿದೆ.
ಅಶೋಕ ಪೂಜಾರಿ ಇತ್ತೀಚಿಗೆ ಗೋಕಾಕಿನಲ್ಲಿ ನಡೆದ ಸತೀಶ್ ಜಾರಕಿಹೊಳಿ ಅವರು ಆಯೋಜಿಸಿದ ಮೌಢ್ಯ ವಿರೋಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರುಆವಾಗಲೇ ಅನೇಕ ಅನುಮಾನಗಳು ಎದುರಾಗಿದ್ದವು,ಈಗ ಅಶೋಕ ಪೂಜಾರಿ ಕಾಂಗ್ರೆಸ್ ಸೇರ್ತಾರೆ ಎನ್ನುವ ಸುದ್ಧಿ ಹರಿದಾಡುತ್ತಿದ್ದು,ಕಾಂಗ್ರೆಸ್ ಮೂಲಗಳ ಇದು ಸತ್ಯ ಎನ್ನುವ ಮಾಹಿತಿ ಸಿಕ್ಕಿದೆ.
ಅಶೋಕ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು, ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಡುವದು ಡಿ.ಕೆ ಶಿವಕುಮಾರ್ ಅವರ ಪ್ಲಾನ್ ಆಗಿದೆ ಅಂತಾ ವಿಶ್ಲೇಷಣೆ ಮಾಡಲಾಗುತ್ತಿದ್ದು,ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ವಲಯದಲ್ಲಿ ಅಶೋಕ ಪೂಜಾರಿ ಅವರ ಹೆಸರು ತೇಲಾಡುತ್ತಿದ್ದು,ಅಶೋಕ ಪೂಜಾರಿ ಅವರ ನಡೆ ಸದ್ಯಕ್ಕೆ ನಿಗೂಢವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಮೀತಿಯ ಅದ್ಯಕ್ಷ ಎಂ.ಬಿ ಪಾಟೀಲ ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರು,ನಿನ್ನೆಯಷ್ಟೇ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ನಡೆಯುತ್ತದೆ ಎಂದು ಹೇಳಿದ್ದು,ಅವರು ಹೇಳಿದ ಅಚ್ಚರಿಯ ಅಭ್ಯರ್ಥಿ ಅಶೋಕ ಪೂಜಾರಿಯೇ….????
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಸ್ವಲ್ಪ ಕಾಯಲೇಬೇಕಾಗಿದೆ.