ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ ಅಂತಾ ಜನ ನಂಬಿದ್ದರು,ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬಹುದೆಂಬ ಅತೀವ ಆತ್ಮವಿಶ್ವಾಸ ಜನರಿಗೆ ಇತ್ತು ಆದ್ರೆ ಸುವರ್ಣಸೌಧ ನಿರ್ಮಿಸಿದ ಉದ್ದೇಶ ಇನ್ನುವರೆಗೆ ಈಡೇರಿಲ್ಲ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ, ಅಧಿವೇಶನ ನಡೆಸುತ್ತಿಲ್ಲ,ಈ ಸುವರ್ಣಸೌಧದಲ್ಲಿ ಲೈಟ್ ಹಚ್ಚೋರು ಗತಿ ಇಲ್ಲ,ಸುವರ್ಣಸೌಧ ಉತ್ತರ ಕರ್ನಾಟಕ ಆಡಳಿತಾತ್ಮಕ ಶಕ್ತಿ ಕೇಂದ್ರ ಆಗುವ ಕನಸು ಭಗ್ನವಾಗಿದೆ. ಸರ್ಕಾರ ಸುವರ್ಣಸೌಧಕ್ಕೆ ಶಕ್ತಿ ತುಂಬುವ ಕೆಲಸ ಮಾಡದಿದ್ದರೆ,ಉತ್ತರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಮಾಡದಿದ್ದರೆ,ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಚಳುವಳಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತದೆ ಎಂದು ಅಶೋಕ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಹದಿನೈದು ದಿನಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಸಂಘಟನೆಗಳ ಸಭೆ ಕರೆಯುತ್ತೇವೆ.ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟದ ರೂಪರೇಷೆಗಳನ್ನು ತೀರ್ಮಾಣಿಸುತ್ತೇವೆ.ಎಂದು ಅಶೋಕ ಪೂಜಾರಿ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಮಾಡಬೇಕೆಂದು ಮಠಾಧೀಶರ ನೇತ್ರತ್ವದಲ್ಲಿ ಧರಣೆ ಮಾಡಿದ ಸಂಧರ್ಭದಲ್ಲಿ, ಬಿ.ಎಸ್ ಯಡಿಯೂರಪ್ಪ ಅವರು ಈ ಧರಣಿಯಲ್ಲಿ ಪಾಲ್ಗೊಂಡು,ನಾನು ಮುಖ್ಯಮಂತ್ರಿ ಆದ್ರೆ, ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು,ಆದ್ರೆ ಬಿ.ಎಸ್ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ.ಎಂದು ಅಶೋಕ ಪೂಜಾರಿ ಆರೋಪಿಸಿದರು.
ಗೋಕಾಕ್ ಕ್ಷೇತ್ರದಲ್ಲಿ ದಬ್ಬಾಳಿಕೆ ,ಅನ್ಯಾಯ,ಗುಂಡಾಗಿರಿ ಮುಂದುವರೆದಿದೆ. ಅಂಕಲಗಿಯಲ್ಲಿ ನಡೆದ ಘಟನೆಯ ಕುರಿತು,ಪೋಲೀಸರು ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಅಹಿತಕರ ಘಟನೆಗಳು ನಡೆದ ಸಂಧರ್ಭದಲ್ಲಿ ಆರೋಪಿಗಳನ್ನು ಮನೆಗೆ ಕರೆಯಿಸಿ ಮಾತಾಡುತ್ತೇನೆ ಎಂದು ಹೇಳುವ ಮೂಲಕ ಪೋಲೀಸರ ತನಿಖಾ ವ್ಯೆವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.ಈ ಹಿಂದೆ ಗೋಕಾಕಿನ ಡಾಕ್ಟರ್ ಹೊಸಮನಿ ಅವರ ಆಸ್ಪತ್ರೆಯಲ್ಲಿ ದಾಂಧಲೆ ಮಾಡಿದ ಆರೋಪಿಗೆ ,ಕ್ಲೀನ್ ಚೀಟ್ ಕೊಟ್ಟಿದ್ದರು.ಈ ದಾಧಲೆಯಲ್ಲಿ ಭಾಗಬಹಿಸಿದ ಆರೋಪಿ ಘಟನೆಯಲ್ಲಿ ಭಾಗವಹಿಸಿಲ್ಲ ಎಂದು ಸಚಿವರಾದ ರಮೇಶ್ ಜಾರಕಿಹೊಳಿ ಕ್ಲೀನ್ ಚೀಟ್ ಕೊಟ್ಟಿದ್ದು ಸರಿಯಲ್ಲ.ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರಾಗಿದ್ದು ಇಂತಹ ವಿಚಾರಗಳಲ್ಲಿ ಸಂವಿಧಾನಾತ್ಮಕವಾಗಿ ಮಾತನಾಡಬೇಕು ಎಂದು ಅಶೋಕ ಪೂಜಾರಿ ಹೇಳಿದರು.