ಬೆಳಗಾವಿ-ಸಚಿವ ರಮೇಶ್ ಜಾರಕಿಹೊಳಿ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿದ್ದು ಕೂಡಲೇ ಸಿಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ,ಈ ಸಿಡಿ ನಿಜವಾಗಿಯೂ ಫೇಕ್ ಅಂತಾ ವರದಿ ಬಂದ್ರೆ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಿಡಿ ನಕಲಿ ಆಗಿದ್ರೆ ಯಾರೂ ಅದಕ್ಕೆ ಬಲಿಪಶು ಆಗುವದು ಬೇಡ ,ರಾಜಕಾರಣ ಬೇರೆ ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರ ಸಿಡಿ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದರು. ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಿಲೀಸ್ ಆದಾಗ ರಾಜೀನಾಮೆಗೆ ಆಗ್ರಹ ಮಾಡಿದ್ದೇವು, ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದಿದ್ವಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದು ನಕಲಿ ಸಿಡಿ ಅಂತಾ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹೇಳುತ್ತಿದ್ದಾರೆ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅಶೋಕ ಪೂಜಾರಿ ಹೇಳಿದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಉನ್ನತಮಟ್ಟದ ತನಿಖೆಗೆ ನಾನೂ ಸಹ ಒತ್ತಾಯ ಮಾಡ್ತೇನೆ.ಅಧಿಕೃತವಾಗಿ ವಿಧಿವಿಜ್ಞಾನ ಇಲಾಖೆಯಿಂದ ಸಿಡಿ ನಕಲಿ ಅಂತಾ ವರದಿ ಬರಬೇಕು,ರಾಸಲೀಲೆ ಸಿಡಿಯನ್ನು ಎಫ್‌ಎಸ್‌ಎಲ್‌ಗೆ ಕಳಿಸಿ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು.ಫೇಕ್ ಸಿಡಿ ಅಂತಾ ವರದಿ ಬಂದ್ರೆ ತತ್‌ಕ್ಷಣ ರಮೇಶ್ ರನ್ನು ಸಂಪುಟಕ್ಕೆ ಸೇರ್ಪಡಿಸಿಕೊಳ್ಳಿ ಎಂದು ಅಶೋಕ ಪೂಜಾರಿ ಹೇಳಿದರು
ಸುವರ್ಣಸೌಧಕ್ಕೆ ರಾಜ್ಯ ಮಟ್ಟದ ಕಚೇರಿ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ಮಾಡಲು ನಿರ್ಧಾರ ಕೈಗೊಂಡಿದ್ದೇವೆ.ಎಂಟು ದಿನಗೊಳಗಾಗಿ ಈ ಬಗ್ಗೆ ನಿರ್ಣಯ ಕೈಗೊಳ್ಳದಿದ್ರೆ ಉಗ್ರ ಹೋರಾಟ ಮಾಡುತ್ತೇವೆ. ಮಾರ್ಚ್ 22ರಂದು ಸುವರ್ಣಸೌಧ ಎದುರು ಧರಣಿ ನಡೆಸುತ್ತೇವೆ.ಎಂದು ಅಶೋಕ ಪೂಜಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಬೆಳಗಾವಿಯ ಸುವರ್ಣಸೌಧದ ಎದುರು ಧರಣಿ ಸತ್ಯಾಗ್ರಹ ಮಾಡುತ್ತೇವೆ.ಬೆಳಗಾವಿಯ ಸುವರ್ಣಸೌಧ ಆಡಳಿತಾತ್ಮಕ ಶಕ್ತಿಕೇಂದ್ರ ಆಗಬೇಕು ಅದಕ್ಕಾಗಿ ಧರಣಿ ಮಾಡುತ್ತಿದ್ದೇವೆ.ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳು ಸುವರ್ಣಸೌಧಕ್ಕೆ ಬರಬೇಕೆಂದು ಆಗ್ರಹಿಸಿದ್ದೆವು,ಇದಕ್ಕೆ ಪೂರಕವಾಗಿ ಒಂದು ಸಣ್ಣ ಹೇಳಿಕೆ ಸರ್ಕಾರದಿಂದ ಬರ್ತಿಲ್ಲ ಎಂದು ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತ ಪಡಿಸಿದರು.ಉತ್ತರ ಕರ್ನಾಟಕ ಜನರ ಭಾವನೆಗಳ ಜೊತೆ ಆಟವಾಡೋ ಪರಿಸ್ಥಿತಿ ಬರಬಾರದು,ಪೂರಕ ಬಜೆಟ್‌ನಲ್ಲಿ ಕಚೇರಿಗಳ ಸ್ಥಳಾಂತರಕ್ಕೆ ಹಣ ಮೀಸಲಿಡಬೇಕು,
ರಾಜ್ಯಸರ್ಕಾರಕ್ಕೆ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರೈತಮುಖಂಡ ಕಲ್ಯಾಣರಾವ ಮುಚಳಂಬಿ ಉಪಸ್ಥಿತರಿದ್ದರು.