ಬೆಳಗಾವಿ- ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರ ವಿರುದ್ಧ ಖಾಸಗಿ ದೂರು ದಾಖಲಿಸದ ಅಥಣಿ ತಾಲೂಕಿನ ಮೊಳೆ ಗ್ರಾಮದ ಬಡ ಕುಟುಂಬಕ್ಕೆ ಅಥಣಿ ಠಾಣೆಯ ಪೋಲೀಸ್ ಅಧಿಕಾರಿಗಳು ಈ ಕುಟುಂಬಕ್ಕೆ ಕಿರುಕಳ ನೀಡುತ್ತಿರುವದಕ್ಕೆ ಈ ಬಡ ಕುಟುಂಬ ಕಳೆದ ಒಂದು ತಿಂಗಳಿನಿಂದ ಮನೆ ಉರು ಬಿಟ್ಟು ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ
ಅಥಣಿ ತಾಲೂಕಿನ ಮೊಳೆ ಗ್ರಾಮದ ಸುಜಾತಾ ಸಂಜಯ ಹಿಪ್ಪಲಕರ ಎಂಬ ಮಹಿಳೆ ತನ್ನ ಎರಡು ಗಂಡು ಮಕ್ಕಳು ಹಾಗು ತಾಯಿಯೊಂದಿಗೆ ಪೋಲಿಸರ ಕಿರುಕಳಕ್ಕೆ ಬೇಸತ್ತು ತಿಂಗಳಿನಿಂದ ಮನೆ ಬಿಟ್ಟು ಅಲೆದಾಡುತ್ತಿದ್ದಾರೆ
ಸುಜಾತಾಳ ಗಂಡ ಸಂಜಯ ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಜೈಲಿನಲ್ಲಿದ್ದಾನೆ ನನ್ನ ಗಂಡ ನಿರಪರಾಧಿ ಆತನ ವಿರುದ್ಧ ಪೋಲೀಸರು ಸುಳ್ಳು ಕೇಸು ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಸುಜಾತಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾಳೆ
ಪೋಲೀಸರ ವಿರುದ್ದ ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಅಥಣಿ ಪೋಲೀಸರು ಕಿರುಕಳ ನೀಡುತ್ತಿದ್ದಾರೆ ಎನ್ನುವದು ಮಹಿಳೆಯ ಆರೋಪವಾಗಿದೆ
ಪೋಲೀಸರ ಹೆದರಿಕೆಯಿಂದ ಮೊಳೆ ಗ್ರಾಮದ ಬಡ ಕುಟುಂಬ ಹಾಸ್ಟೇಲ್ ನಲ್ಲಿದ್ದ ಎರಡು ಮಕ್ಕಳನ್ನು ಕರೆದು ಕೊಂಡು ತನಗೆ ರಕ್ಷಣೆ ನೀಡುವಂತೆ ಜಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾಳೆ