Breaking News

ಕಾಂಟೋನ್ಮೆಂಟ ಪ್ರದೇಶದಲ್ಲಿ,ಭಾರೀ ವಾಹನಗಳ ಸಂಚಾರ ನಿಷೇಧ

ಬೆಳಗಾವಿ-ಕಾಂಟೋನ್ಮೆಂಟ ಪ್ರದೇಶದಲ್ಲಿ ಶಾಲೆ ಕಾಲೇಜು ಗಳ ಸಂಖ್ಯೆ ಹೆಚ್ಚಿದೆ ಭಾರೀ ವಾನಗಳ ಓಡಾಟದಿಂದ ಶಾಲಾ ಮಕ್ಕಳು ಅಪಘಾತಕ್ಕೀಡಾಗುತ್ತಿರುವದನ್ನು ಗಮನಿಸಿ ಸೇಂಟ್ ಪಾಲ್, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜುಗಳು ಇರುವ ಪ್ರದೇಶದಲ್ಲಿ ಭಾರೀ ವಾನಗಳ ಸಂಚಾರವನ್ನು ನಿಷೇಧಿಸುವ ಮಹತ್ವದ ನಿರ್ಣಯ ವನ್ನು ಕಾಂಟೋನ್ಮೆಂಟ ಸಭೆಯಲ್ಲಿ ಕೈಗೊಳ್ಳಲಾಯಿತು

ಕಾಂಟೋನ್ಮೆಂಟ ಸಿಇಓ ಹರ್ಷ ಮಾತನಾಡಿ ಸದಸ್ಯರು ಭಾರೀ ವಾಹನಗಳ ಓಡಾಟದ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡರು

ಸಭೆಯಲ್ಲಿ ಕಡ್ಟಡ ಪರವಾಣಿಗೆಯ ಪರಿಷ್ಕೃತ ನಿಯಮಾವಳಿಗಳನ್ನು ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದಾಗ ಅದಕ್ಕೆ ಸದಸ್ಯರು ತೀವ್ರ ವಿರೋಧ ವ್ಯೆಕ್ತ ಪಡಿಸಿದರು ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸುವಾಗ ಕಾಂಟೋನ್ಮೆಂಟ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಈ ವಿಷಯದಲ್ಲಿ ಸದಸ್ಯರ ಅಭಿಪ್ರಾಯ ಆಲಿಸಿಲ್ಲ ಅಧಿಕಾರಿಗಳು ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯೆಕ್ತ ಪಡಿಸಿದರು

ಮೊದಲು ಸದಸ್ಯರ ಅಭಿಪ್ರಾಯ ಆಲಿಸಿ ಮುಂದಿನ ಸಭೆಯಲ್ಲಿ  ಕಟ್ಟಡ ಪರವಾಣಿಗೆಯ ಪರಿಷ್ಕೃತ ನಿಯಮಾವಳಿಗಳನ್ನು ಮಂಡಿಸುವಂತೆ ಸದಸ್ಯರು ನೀಡಿದ ಸಲಹೆಗೆ ಅಧಿಕಾರಿಗಳು ಒಪ್ಪಿಕೊಂಡರು

ಲೀಜ್ ಅವಧಿ ಮುಗಿದ ಅಂಗಡಿಗಳ ಲೀಜ್ ಅವಧಿಯನ್ನು ವಿಸ್ತರಿಸಿ,ವಾರಸಾ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡುವಂತೆ ಜೊತೆಗೆ ಕಾಂಟೋನ್ಮೆಂಟ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವದರ ಜೊತೆಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು

ಉಪಾಧ್ಯಕ್ಷ ಆಲೇದ್ಧಿನ್ ಕಿಲ್ಲೇದಾರ ಹಾಗು ಸದಸ್ಯರು ಮತ್ತು ದಂಡು ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.