ಬೆಳಗಾವಿ -ಅಥಣಿ ತಾಲೂಕಿನ ಝುಂಜುರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕಿ ಕಾವೇರಿಯ ರಕ್ಷಣೆಗೆ NDRF ರಾಷ್ಟ್ರೀಯ ವಿಪತ್ತು ರಕ್ಷಣಾ ದಳದ ತಂಡ ಕಾರ್ಯಾಚರಣೆ ಆರಂಭಿಸಿದ್ದು 20 ಅಡಿ ಆಳದಲ್ಲಿ ಕಾವೇರಿಯ ಕೈ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
ಕೊಳವೆ ಬಾವಿಯ ಸುತ್ತಲು ಜೆಸಿಬಿ ಯಿಂದ ಕಾರ್ಯಾಚರಣೆ ಮುಂದುವರೆದಿದೆ ಸುಮಾರು ಹತ್ತು ಅಡಿ ಆಳ ಜೆಸಿಬಿಯಿಂದ ಮಣ್ಣು ತೆಗೆಯಲಾಗಿದೆ ಈಗ ಬಂಡೆಗಲ್ಲು ಹತ್ತಿರುವದರಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ
ಕೊಳವೆ ಬಾವಿಗೆ ಬಿದ್ದಿರುವ ಕಾವೇರಿಯ ಕೈ ಕಾಣಿಸಿಕೊಂಡಿದ್ದು ಹುಕ್ ಹಾಕಿ ನೇರವಾಗಿ ಬೋರವೆಲ್ ನಿಂದ ಮೇಲಕ್ಕೆತ್ತಲು NDRF ತಂಡ ತನ್ನ ಪ್ರಯತ್ನ ಮುಂದುವರೆಸಿದೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೋಕಾಕಿನಿಂದ ಝುಂಜುರವಾಡ ಗ್ರಾಮದ ಕಡೆಗೆ ಧಾವಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ