Breaking News
Home / Breaking News / ಕಾವೇರಿಯ ರಕ್ಚಣೆಗೆ ಧಾವಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ದಳ

ಕಾವೇರಿಯ ರಕ್ಚಣೆಗೆ ಧಾವಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ದಳ

ಬೆಳಗಾವಿ- ಅಪ್ಪ ಅಮ್ಮ ಅಟ್ಟಿಗೆ ಆರಿಸುತ್ತಿರುವಾಗ ಗದ್ದೆ ಯಲ್ಲಿ ಆಡುತ್ತ ಆಡುತ್ತ ತೆರೆದ ಕೊಳವೆ ಬಾವಿಗೆ ಜಾರಿದ ಕಂದಮ್ಮ ಕಾವೇರಿಯ ರಕ್ಷಣೆಗೆ ಅಥಣಿಯ ಝುಂಜುರವಾಡ ಗ್ರಾಮಕ್ಕೆ ಪೂನಾದಿಂದ ರಾಷ್ಟೀಯ ವಿಪತ್ತು ರಕ್ಷಣಾ ದಳದ ತಂಡ ಆಗಮಿಸಿದೆ

ಜಿಲ್ಲಾಧಿಕಾರಿ ಎನ್ ಜಯರಾಂ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಝುಂಜುರವಾಡ ಗ್ರಾಮದಲ್ಲಿ ಠಿಖಾನಿ ಹೂಡಿದ್ದು ತೆರೆದ ಬಾವಿಯ ಇಪ್ಪತ್ತು ಅಡಿ ಆಳದಲ್ಲಿ ಕಾವೇರಿಯ ಬಟ್ಟೆ ಕಾಣಿಸಿಕೊಂಡಿದ್ದು ಕಾವೇರಿಯನ್ನು ರಕ್ಷಿಸಲು ಅಹೋರಾತ್ರಿಯಿಂದ ಕಾರ್ಯಾಚರಣೆ ಮುಂದುವರೆದಿದೆ

ರಾಷ್ಟ್ರೀಯ ವಿಪತ್ತು ರಕ್ಷಣಾ ದಳದ ತಂಡ ಕಾರ್ಯಾಚರಣೆ ಆರಂಭಿಸಿದ್ದು ಆರು ವರ್ಷದ ಬಾಲಕಿ ಕಾವೇರಿಯ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಒಂದು ಕಡೆ ಜೆಸಿಬಿಯಿಂದ ಕಾರ್ಯಾಚರಣೆ ನಡೆದಿದ್ದು ಜಿಲ್ಲಾಧಿಕಾರಿ ಎನ್ ಜಯರಾಂ ಕಾರ್ಯಾಚರಣೆಯ ಮೇಲೆ ನಿರಂತರವಾಗಿ ನಿಗಾ ವಹಿಸಿದ್ದಾರೆ

ಕಾವೇರಿ ಬಿದ್ದಿರುವ ತೆರೆದ ಕೊಳವೆ ಬಾವಿ 400 ಅಡಿ ಆಳವಿದೆ ಆದರೆ 20 ಅಡಿ ಆಳದಲ್ಲಿ ಕಾವೇರಿಯ ಬಟ್ಟೆ ಕಂಡಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಠಪಡಿಸಿದ್ದಾರೆ ಕಾವೇರಿ ಕೊಳವೆ ಬಾವಿಗೆ ಬಿದ್ದಿರುವ ಸುದ್ಧಿ ತಿಳಿದು ಸ್ಥಳೀಯರು ಇಣುಕಿ ನೋಡಲು ಹೋಗಿ 20 ಅಡಿ ಆಳದವರೆಗೆ ಮಣ್ಣು ಬಿದ್ದಿದೆ

ಸ್ಥಳದಲ್ಲಿ ಬಾಲಕಿ ಕಾವೇರಿಯ ಪಾಲಕರ ಆಕ್ರಂದನ ಇನ್ನೊಂದು ಕಡೆ ಕಾರ್ಯಾಚರಣೆ ಇದನ್ನೆಲ್ಲ ನೋಡಲು ಜನ ತಂಡೋಪ ತಂಡವಾಗಿ ಅಲ್ಲಿಗೆ ಬರುತ್ತಿದ್ದು ಜನದಟ್ಟನೆಯನ್ನು ನಿಯಂತ್ರಿಸಲು ಪೋಲೀಸರು ಹರಸಹಾಸಪಡುತ್ತಿದ್ದಾರೆ

Check Also

ಲಕ್ಷ್ಮಣ ಸವದಿ ಕ್ಷೇತ್ರದಿಂದಲೇ ಪ್ರಿಯಾಂಕಾ ಪ್ರಚಾರ ಆರಂಭ…

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆ ಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. …

Leave a Reply

Your email address will not be published. Required fields are marked *