ಮಹಿಳೆಯರ ಮೇಲೆ ದೌರ್ಜನ್ಯ…!
ಒಂದು ಕಡೆ ದಲಿತ ಮಹಿಳೆ ಸ್ಛಚ್ಛತೆಯ ಬಗ್ಗೆ ಪ್ರಶ್ನಿಸಿದಕ್ಕೆ ಸವರ್ಣೀಯರಿಂದ ದೌರ್ಜನ್ಯ. ಮತ್ತೊಂದು ಕಡೆ ಚರಂಡಿ ಕಾಮಗಾರಿ ಪರಿಶೀಲನೆಗೆ ತರಳಿದೆ ಗ್ರಾಪಂ ಸದಸ್ಯೆಯ ಮೇಲೆ ಹಲ್ಲೆ. ಕ್ಷುಲಕ ವಿಚಾರಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಹೀಗೆ ಬೆಡ್ ಮೇಲೆ ನರಳುತ್ತಿರುವ ಮಹಿಳೆ. ತಾಯಿ ಸ್ಥಿತಿ ಕಂಡು ಕಣ್ಣಿರುತ್ತಿರುವ ಮಗಳು. ಅಲ್ಲೇ ಪಕ್ಕದ ಬೆಡ್ ನಲ್ಲಿಸರ್ವಣಿಯರ ದೌರ್ಜನ್ಯದಿಂದ ತಲುಗಿರುವ ಮಹಿಳೆ. ಈ ದೃಶ್ಯಗಳು ಇಂದು ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಕಂಡು ಬಂದವು. ಪ್ರತ್ಯೇಕ ಪ್ರಕಣದಲ್ಲಿ ಇಬ್ಬರ ಮಹಿಳೆಯ ಮೇಲೆ ಜಿಲ್ಲೆಯಲ್ಲಿ ದೌರ್ಜನ್ಯ ನಡೆದಿದೆ. ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದ ದಲಿತ ಈ ಮಹಿಳೆ ಸುಶೀಲಾ ಸಣ್ಣಕ್ಕಿ ಇದೇ ಗ್ರಾಮದ ಪಂಚಾಯತಿಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಾರೆ. ಹೀಗೆ ಇತ್ತೀಚಿಗೆ ಗ್ರಾಮದ ತಾಳೇಶ್ವರ ದೇವಸ್ಥಾನದ ಮುಂದೆ ಸವರ್ಣಿಯರು ಜಾನುವಾರು ಕಟ್ಟಿ ಶುಚಿತ್ವ ಹಾಳು ಮಾಡಿದ್ದರು. ಇದನ್ನು ಗ್ರಾಮದ ಹಿರಿಯರ ಗಮನಕ್ಕೆ ಸುಶೀಲಾ ಸಣ್ಣಕ್ಕಿ ತಂದಿದ್ದಾರೆ. ಅಷ್ಟೇ ಅಲ್ಲ ದೇವಸ್ಥಾನದ ವಾತಾರಣ ಹಾಳಾಗದಂತೆ ತಡೆಯಲು ಸಣ್ಣ ಗೋಡೆ ನಿರ್ಮಿಸಿದ್ದಾರೆ. ಇದರಿಂದ ಕೆರಳಿದ ದೇವಸ್ಥಾನದ ಪಕ್ಕದ ಮನೆಯ ಯಲ್ಲಪ್ಪ ಹಾಗೂ ಕುಟುಂಬಸ್ಥರು ಸುಶೀಲಾ ಮೇಲೆ ಹಲ್ಲೆ ಮಾಡಿದ್ದಾರೆ. ದಲಿತ ಮಹಿಳೆ ನೀನು ನಮಗೆ ಹೇಗೆ ಪ್ರಶ್ನಿಸಿದೆ ಎಂದು ಈ ಹಲ್ಲೆ. ಹಲ್ಲೆಯಿಂದ ಗಾಯಗೊಂಡ ಸುಶೀಲ್ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಜತೆಗೆ ಯಲ್ಲಪ್ಪ ಸೇರಿ ನಾಲ್ಕು ಜನರ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಸಿದ್ದಾರೆ. ಪೊಲೀಸರು ಯಲ್ಲಪ್ಪ ನನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನೂಳಿದ ಮೂರು ಜನ ಆರೋಪಿಗಳು ಪರಾರಿಯಾಗಿದ್ದಾರೆ.
ಇನ್ನೂ ಮತ್ತೊಂದು ಪ್ರಕರಣದ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಪಂ ಸದಸ್ಯೆ ಶಮಶಾದ್ ಮುಲ್ಲಾ ಮೇಲೆ ಇದೇ ಗ್ರಾಮದ ಕೆಲವರು ಹಲ್ಲೆ ಮಾಡಿದ್ದಾರೆ. ಇಂದು ಮುಂಜಾನೆ ಶಮಶಾದ್ ಮುಲ್ಲಾ ಗ್ರಾಮದಲ್ಲಿ ನಡೆಯುತ್ತಿದ್ದ ಚರಂಡಿ ಕಾಮಗಾರಿ ಪರಿಶೀಲನೆ ಹೋಗಿದ್ದರು. ಈ ವೇಳೆ ಇದೇ ಗ್ರಾಮದ ಅಬ್ದುಲ್ ವಾಹಬ್ ಶೇಕ್, ರಜಿಯಾ ಶೇಕ್ ಹಲ್ಲೆ ಮಾಡಿದ್ದಾರೆ ಎಂದು ಶಮಶಾದ್ ಮುಲ್ಲಾ ಮಗಳು ಶಾಜೀಯಾ ಮುಲ್ಲಾ ಆರೋಪಿಸಿದ್ದಾರೆ. ಇದೀಗ ಗಾಯಾಳು ಶಮಶಾದ್ ಮುಲ್ಲಾಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ.