Breaking News

BGAdmin

ಕಾರ್ಯಕಾರಿಣಿಯಲ್ಲಿ ಮಹದಾಯಿ ಕಾವೇರಿ ಕುರಿತು ಚರ್ಚೆ

ಬೆಳಗಾವಿ-ಬೆಳಗಾವಿಯಲ್ಲಿ ಮೂರನೇಯ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವೀರ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಮಾಲಾರ್ಪನೆ ಮಾಡಿ ಕಾರ್ಯಕಾರಿಣಿಗೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ ತಿಳಿಸಿದ್ದಾರೆ ಅಕ್ಟೋಬರ ಮೂರು ಹಾಗು ನಾಲ್ಕರಂದು ಎರಡು ದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ಕಾರ್ಯಕಾರಿಣಿ ನಡೆಯಲಿದ್ದು ಈ ಕುರಿತು ಮಾದ್ಯಮ ಕೇಂದ್ರ ಊದ್ಘಾಟಿಸಿ …

Read More »

ಮಹಾಲಯ ಅಮವಾಸ್ಯೆ ರಾತ್ರಿ ಗೊಂಬೆ..ನಿಂಬೆ.. ಕುಂಬಳಕ್ಕೆ ಕುಂಕುಮ.! ಕೋರ್ಟ ದ್ವಾರದಲ್ಲಿಯೂ ಬ್ಲ್ಯಾಕ್ ಮ್ಯಾಜಿಕ್

ಬೆಳಗಾವಿ – ಇಂದಿನ ಅಧುನಿಕ ಯುಗದಲ್ಲಿ ಅಂಧ ಶ್ರದ್ಧೆ ಎಷ್ಟೊಂದು ಹೆಚ್ಚಾಗಿದೆ ಅಂದರೆ ಜನ ನ್ಯಾಯಾಲಯದ ಆವರಣದಲ್ಲಿಯೂ ಮಾಟ ಮಂತ್ರ ಮಾಡಲು ಶುರು ಮಾಡಿದ್ದಾರೆ ಮಹಾಲಯ ಅಮವಾಸ್ಯೆಯ ಮದ್ಯರಾತ್ರಿ ಕೆಲವರು ಬೆಳಗಾವಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿರುವ ಜೆ ಎಂ ಎಫ್ ಸಿ ನ್ಯಾಯಾಲಯದ ಮುಖ್ಯದ್ವಾರದಲ್ಲಿ ಕುಂಬುಳಕಾಯಿ ಟೆಂಗಿನಕಾಯಿ, ಮಾಟ ಮಂತ್ರದ ಗೊಂಬೆ ನಿಂಬೆಹಣ್ಣಿಗೆ ಕುಂಕುಮ ಹಚ್ಚಿ ಎಸೆದು ಹೋಗಿದ್ದಾರೆ ನ್ಯಾಯಾಲಯದ ಆವರಣದಲ್ಲಿ ವಾಮಾಚಾರ ನಡೆದಿರುವದನ್ನು ನೊಡಿದ ಜನ ಕೆಲ …

Read More »

ಬೆಳಗಾವಿಯಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು…!

ಬೆಳಗಾವಿ:ಉತ್ತರ ಕರ್ನಾಟಕದ ಸಮಗ್ರ ಅಭಿವ್ರದ್ದಿಗೆ ಕೂಡಲೇ ರಾಜ್ಯ ಸರಕಾರ ಮುಂದಾಗಬೇಕು ಇಲ್ಲವೇ ಪ್ರತ್ಯೇಕ ರಾಜ್ಯ ಒಡೆದು ಕೊಡಬೇಕು ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಇಂದು ಪ್ರತಿಭಟನೆ ನಡೆಸಿತು. ಉತ್ತರದ ಜಿಲ್ಲೆಗಳಿಗೆ ಅಭಿವ್ರದ್ದಿ ಯ ಪ್ರಾಧಾನ್ಯತೆ ನೀಡಿ ಇಲ್ಲವೇ ನಮಗೆ ಪ್ರತ್ಯೇಕ ಸ್ಟೇಟ್ ಹುಡ್ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ. ದಕ್ಷಿಣದ ಕಾವೇರಿ ಬಗ್ಗೆ ವಿಶೇಷ ಅಧಿವೇಶನ ನಡೆಸುವ ಸರಕಾರ ಮಹಾದಾಯಿ …

Read More »

ಕಾವೇರಿ, ಕೃಷ್ಣಾ.ನ್ಯಾಯಾಂಗ ಹೋರಾಟಕ್ಕೆ ಕೋಟಿ..ಕೋಟಿ..ಖರ್ಚು

ಬೆಳಗಾವಿ-ಕೃಷ್ಣ, ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧೀಕರಣ ಮುಂದೆ ವಾದ ಮಂಡಿಸಲು ವಕೀಲರ ಕೋಟಿ ಕೋಟಿ ಹಣ ಖರ್ಚಾಗಿದೆ ಎಂದು ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ಕಾವೇರಿ ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ವಕೀಲರಿಗೆ 36.52 ಕೋಟಿ ಹಣವನ್ನು ಸಕರ್ಕಾರ ಖರ್ಚು ಮಾಡಿದೆ 2014ರಿಂದ 2016ರ ವರೆಗೆ …

Read More »

ಗಡಿನಾಡ ಗುಡಿಯಲ್ಲಿ ಕಮಲದ ಕಲರವ… !

ಬೆಳಗಾವಿ: ಬೆಳಗಾವಿ ನಗರದಲ್ಲಿ ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಯಲಿದ್ದು, ಕುಂದಾನಗರಿ ಬೆಳಗಾವಿಯಲ್ಲಿ ಕಮಲದ ಕಂಪು ಹರಡಿದೆ. ಎರಡುದಿನಗಳ ಕಾಲ ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿಗೆ ಬರುತ್ತಿರುವ ಬಿಜೆಪಿ ನಾಯಕರನ್ನು ಸ್ವಾಗತಿಸಲು ಜಿಲ್ಲೆಯ ಕಾರ್ಯಕರ್ತರು ನಗರದೆಲ್ಲೆಡೆ ಸ್ವಾಗತ ಕಮಾನುಗಳನ್ನು, ಕಟೌಟ್, ಬ್ಯಾನರ್‍ಗಳನ್ನು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ …

Read More »

ಬೆಳಗಾವಿಯಲ್ಲಿ ದೊಡ್ಮನೆ ಹುಡುಗನ ಅಭಿಮಾನಿಗಳ ಸಂಬ್ರಮ

ಬೆಳಗಾವಿ:ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪವರ್ ಸ್ಟಾರ್ ಅಭಿಮಾನಿಗಳ ಸಂಘ ತುಮ್ಮರಗುದ್ದಿಯ ಸದಸ್ಯರು ಇಂದು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಚನ್ನಮ್ಮ ಮೂರ್ತಿಗೆ ಮಾಲೆ ಹಾಕಿ ಸಂಬ್ರಮಿಸಿದರು ತಮ್ಮರ ಗುದ್ದಿ ಗ್ರಾಮದಿಂದ ಬೈಕ್ ಮೇಲೆ ಬೇಳಗಾವಿಗೆ ಆಗಮಿಸಿದ ನೂರಾರು ಜನ ಪುಣೀತ ರಾಜಕುಮಾರ ಆಭಿಮಾನಿಗಳು ಚನ್ನಮ್ಮ ವೃತ್ತದಲ್ಲಿ ಘೋಷನೆಗಳನ್ನು ಕೂಗುತ್ತ ಪಟಾಕಿ ಸಿಡಿಸುತ್ತ ಚನ್ನಮ್ಮಾಜಿಗೆ ಮಾಲಾರ್ಪನೆ ಮಾಡಿ ಪವರ ಸ್ಟಾರ್ ಪುಣಿತರಾಜಕುಮಾರ …

Read More »

ನಾಪತ್ತೆಯಾದ ಹುಡಗಿಯ ಶವ ಮಾರ್ಕಂಡೇಯ ನದಿಯಲ್ಲಿ ಪತ್ತೆ

ಬೆಳಗಾವಿ-ಬೆಳಗಾವಿ ನಗರದ ಸದಾಶಿವ ನಗರದಿಂದ ಮಂಗಳವಾರ ನಾಪತ್ತಯಾಗಿದ್ದ ಯುವತಿಯ ಶವ ಶುಕ್ರವಾರ ಕಡೋಲಿ ರಸ್ತೆಯ ಅಲತಗಾ ಕ್ರಾಸ್ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ ಗುರುವಾರ ಸದಾಶಿವ ನಗರದ 18 ವರ್ಷ ವಯಸ್ಸಿನ ಸಾನಿಕಾ ಚಂದ್ರಶೇಖರ ಪಾಟ್ನೇಕರ ಎಂಬ ಯುವತಿ ಮಂಗಳವಾರ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ ಈಗ ಶವವಾಗಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದ್ದಾಳೆ ಮಂಗಳವಾರ ಮನೆಯಿಂದ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ …

Read More »

ಅಧಿಕಾರಿಗಳ ದಾಳಿ; 26 ಮರಳು ಲಾರಿ ವಶ

  ಬೆಳಗಾವಿ: ಕಂದಾಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ ನಗರದ ಹಣ್ಣಿನ ಮಾರುಕಟ್ಟೆ ಬಳಿ ನಗರ ಪ್ರವೇಶಿಸುತ್ತಿದ್ದ ೨೬ ಮರಳು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಎಸಿ ರಾಜೇಶ್ವರಿ ಜೈನಾಪುರ ಹಾಗೂ ತಹಶೀಲ್ದಾರ ಗಿರೀಶ ಸಾದ್ವಿ ನೇತ್ರತ್ವದ ತಂಡ ಅಕ್ರಮ ಮರಳು ಸಾಗಾಟಗಾರರನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶ್ವಿಯಾಗಿದೆ. ಏರಪೋರ್ಟ ರಸ್ತೆ ಮೂಲಕ ಬೆಳಗಾವಿ ನಗರ ಪ್ರವೇಶಿಸುತ್ತಿದ್ದಾಗ ದಾಳಿ ಮಾಡಿದ ಅಧಿಕಾರಿಗಳಿಗೆ ಸೂಕ್ತ ಪಾಸ್ ತೋರಿಸಲು ಚಾಲಕರು …

Read More »

ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದೇ ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ

ಬೆಳಗಾವಿ-ಪಾಕಿಸ್ತಾನದ ಸೊಕ್ಕು ಮುರಿಯಲು ಯೋಜನೆ ರೂಪಿಸಿದ್ದು ಐತಿಹಾಸಿಕ ಬೆಳಗಾವಿಯ ನೆಲದಲ್ಲಿ ಎನ್ನುವ ಮಾಹಿತಿ ಲಭ್ಯವಾಗಿದೆ ಈ ಕುರಿತು ವೆಬ್ ದುನಿಯಾ ಕನ್ನಡ ವೆಬ್ ಮಿಡಿಯಾ ಸುದ್ದಿ ಮಾಡಿದೆ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದು ಕನ್ನಡ ನೆಲದಲ್ಲಿ. ಗಡಿಜಿಲ್ಲೆ ಬೆಳಗಾವಿಯ ಕಮಾಂಡೋ ಕ್ಯಾಂಪ್‌ನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು. 18 ವರ್ಷದಿಂದ 20 ವರ್ಷದೊಳಗಿನ ಕಮಾಂಡೋಗಳಿಗೆ ಕಠಿಣ ತರಬೇತಿ ನೀಡಿ ದಾಳಿ ನಡೆಸಲು ಸಿದ್ಧಗೊಳಿಸಲಾಗಿತ್ತು. ಶಬ್ಧ ಮಾಡದ 17 ಹೆಲಿಕಾಪ್ಟರ್ ಬಳಸಿ ಟ್ರೈನಿಂಗ್ ನೀಡಲಾಗಿತ್ತು. …

Read More »

ಪಾಲಿಕೆ ಆಯುಕ್ತರ ನೈಟ್ ರೌಂಡ್ಸ.ಬೀದಿ ದೀಪಗಳ ಗುತ್ತಗೆದಾರ ತರಾಟೆಗೆ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಪಾಲಿಕೆಯ ಆಡಳಿತ ವ್ಯೆವಸ್ಥೆ ಸುಧಾರಿಸಲು ಸಮರ ಸಾರಿದ್ದಾರೆ ಗುರುವಾರ ಸಂಜೆ ನಗರ ಪ್ರದಕ್ಷಣೆ ಮಾಡಿದ ಅವರು ಬೀದಿ ದೀಪಗಳ ನಿರ್ವಹಣೆ ಮಾಡುವ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಕಾಲೇಜು ರಸ್ತೆಯಲ್ಲಿ ಕೆಲವು ಬೀದಿ ದೀಪಗಳು ಉರಿಯುತ್ತಿರಲಿಲ್ಲ ಇದನ್ನು ಗಮನಿಸಿದ ಆಯುಕ್ತರು ಗುತ್ತಿಗೆದಾರನನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರು ಬೆಳಗಾವಿ ನಗರದ ಎಲ್ಲ ಬೀದಿ ದೀಪಗಳು ಪ್ರತಿ ದಿನ ಉರಿಯುವಬೇಕು ದುರಸ್ಥಿಗೆ ಬಂದ …

Read More »