ಬೆಳಗಾವಿ- ರೈತ ಚಳುವಳಿ ಯಲ್ಲಿ ಕ್ರಾಂತಿ ಮಾಡುವ ಮೂಲಕ ಕೇಂದ್ರದ ಸಚಿವರಾಗಿದ್ದ ಬಾಬಾಗೌಡ ಪಾಟೀಲ ರೈತ ಚಳುವಳಿಯಿಂದ ಸ್ವಲ್ಪ ದೂರ ಉಳಿದುಕೊಂಡಿದ್ದರು,ಆದ್ರೆ ಇತ್ತೀಚಿನ ದಿನಗಳಲ್ಲಿ ಬಾಬಾಗೌಡ ಪಾಟೀಲ, ಮತ್ತೇ ರೈತ ಚಳುವಳಿಯಲ್ಲಿ ಕ್ರಿಯಾಶೀಲರಾಗಿದ್ದಾರೆ.
ಇಂದು ಬಾಬಾಗೌಡ ಪಾಟೀಲರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಇಂದು ರೈತಪರ ಹೋರಾಟ ನಡೆಯಿತು ನೂರಾರು ರೈತರು ಟ್ರ್ಯಾಕ್ಟರ್ ಹತ್ತಿ ಬೆಳಗಾವಿಗೆ ಬಂದು ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಯಾತ್ರೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಇಂದು ಬೆಳಗಾವಿಯಲ್ಲಿ
ನೂತನ ಕೃಷಿ ಮತ್ತು ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ನಗರದಲ್ಲಿ ಟ್ಯಾಕ್ಟರ್ ಗಳ ಮೂಲಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಮಾನವ ಬಂಧುತ್ವ ವೇದಿಕೆ, ಭಾರತೀಯ ಕೃಷಿಕ ಸಮಾಜ, ರೈತ ಸಂಘಟನೆ, ಎಐಟಿಯುಸಿ, ಸಮಸ್ತ ಲಿಂಗಾಯತ ಹೋರಾಟ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘಟನೆ, ಮಹಿಳಾ ಜಾಗೃತ ವೇದಿಕೆ, ಕೂಲಿ ನೇಕಾರ ಕಾರ್ಮಿಕ ಬಳಗ, ಎಐಯುಟಿಯುಸಿ ಟ್ರೇಡ್ ಯೂನಿಯನ್, ರೈತ ಕೃಷಿ ಸಂಘಟನೆ, ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರವಾದಿ ಕಾಂಗ್ರೆಸ್, ಬಸವ ಭೀಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ರೈತರು 40 ಕ್ಕೂ ಹೆಚ್ವು ಟ್ಯಾಕ್ಟರ್ ಗಳ ಮೂಲಕ ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚನ್ನಮ್ಮ ವೃತ್ತದವರೆಗೆ ರ್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ, ಕಾರ್ಮಿಕ, ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಈ ರೀತಿಯ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಹಾಗಾಗಿ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದಗೌಡ ಮೋದಗಿ, ಅಪ್ಪಾಸಾಬ ದೇಸಾಯಿ, ಅಖಿಲಾ ಪಠಾಣ, ಸುಭಾಷ ದಾಯಗೊಂಡೆ, ರಾಮಚಂದ್ರ ಫಡಕೆ, ಶಿವಾಜಿ ಬುರಲಿ, ಮಹಾದೇವಿ ಮನೋಹರ ಪಾಟೀಲ್, ಬಸವ್ವ ಗುರುಪಾದ ಬೈರಿ, ಲಕ್ಷ್ಮೀ ಎಸ್.ಎ., ಲಕ್ಷ್ಮಣ ಮಜಗಾಂವಿ, ಸನೀತಾ ನಿರ್ವಾಣಿ ಮೊದಲಾದವರು ಇದ್ದರು.