ಬೆಳಗಾವಿ- ದಿಲ್ಲಿ ಬಾಳ ದೂರ ಐತಿ ಅದಕ್ಕೆ ನಾವು ಬೆಳಗಾವಿಯಲ್ಲೇ ಪರೇಡ್ ಮಾಡ್ತೀವಿ,ಬೆಳಗಾವಿಗೆ ಪರೇಡ್ ಮಾಡಲು 300 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬರ್ತಾವ್ ಎಂದು ರೈತ ಮುಖಂಡ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ದಾರೆ.
ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಖಂಡಿಸಿ ನಾಳೆ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡುತ್ತೇವೆ,ಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲ,ಬೆಳಗಾವಿಯಲ್ಲೂ ಪರೇಡ್ ನಡೆಯಲಿದೆ ಎಂದರು ಬಾಬಾಗೌಡ
ದೆಹಲಿ ಬಹಳ ದೂರ ನಮಗೆ ಅದಕ್ಕಾಗಿ ಇಲ್ಲೇ ಪ್ರತಿಭಟನೆ ಮಾಡ್ತೀವಿ,ಪ್ರಧಾನಿ ಮೋದಿ ರೈತರನ್ನ ಕರೆದು ಮಾತನಾಡಿಸಲಿಲ್ಲ,ದೆಹಲಿಯಲ್ಲಿ ಮಾತ್ರ ರೈತರು ಪ್ರತಿಭಟನೆ ಮಾಡ್ತಿದ್ದಾರೆ ಅಂತೆನಿಲ್ಲಾ,ಇದು ಕೇವಲ ಪಂಜಾಬ್ ರೈತರ ಸಮಸ್ಯೆ ಅಲ್ಲ, ಇಡೀ ದೇಶದ ರೈತರ ಸಮಸ್ಯೆ ಆಗಿದ್ದು,ಅಲ್ಲಿಗೆ ಹೋಗಲು ಆಗದ ನಾವೆಲ್ಲ ನಮ್ಮ ಜಿಲ್ಲೆಗಳಲ್ಲಿ ಹೋರಾಟ ಮಾಡ್ತೇವಿ, ಮುನ್ನೂರು ಟ್ರ್ಯಾಕ್ಟರ್ ಗಳು ನಾಳೆ ಪರೇಡ್ ನಲ್ಲಿ ಭಾಗಿಯಾಗುತ್ತವೆ,ಐದು ಸಾವಿರಕ್ಕೂ ಅಧಿಕ ರೈತರು ಚಳವಳಿಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದರು.
ಬೆಳಗಾವಿಯ ಗಾಂಧಿನಗರದಿಂದ ಡಿಸಿ ಕಚೇರಿ ವರೆಗೆ ಟ್ರ್ಯಾಕ್ಟರ್ ಪರೇಡ್ ನಡೆಯುತ್ತದೆ.ಪರೇಡ್ ನಂತರ ಸರ್ದಾರ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಮಾಡಲಾಗುತ್ತೆ,ಇದು ಪಕ್ಷಕ್ಕೆ ಸೀಮಿತವಾದ ಪ್ರತಿಭಟನೆ ಅಲ್ಲಾ,ಟ್ರ್ಯಾಕ್ಟರ್ ಪರೇಡ್ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ನೀಡಿದ್ದಾರೆ,ನಾಳೆ ಒಂದೇ ದಿನ ಪ್ರತಿಭಟನೆ ಇರಲ್ಲ, ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಬಾಬಾಗೌಡ ಪಾಟೀಲ ತಿಳಿಸಿದ್ದಾರೆ.