Breaking News

ಜನೇವರಿ ಹದಿನೆಂಟು ಶಿವಸೇನೆಯ ಸಂಜಯ ರಾವತ ಬೆಳಗಾವಿಗೆ ಬರಲು ಅನುಮತಿ ಕೊಟ್ಟವರು ಯಾರು ?

ಕನ್ನಡದ ನೆಲದಲ್ಲಿ ಕೊಲ್ಹಾಪೂರ ಮೇಯರ್ ಗೆ ಪೌರ ಸನ್ಮಾನ ಮಾಡ್ತಾರಂತೆ ,ನಮ್ಮ ಹೋಮ್ ಮಿನಿಸ್ಟರ್ ಏನ್ ಮಾಡ್ತಾರಂತೆ …..!!

ಬೆಳಗಾವಿ – ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕಂಗಾಲ್ ಕಂಪನಿ ಎಂಈಎಸ್ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಕುತಂತ್ರ ನಡೆಸಿದೆ ಮಹಾರಾಷ್ಟ್ರದ ಶಾಸಕನನ್ನು ಬೆಳಗಾವಿಗೆ ಆಮಂತ್ರಿಸಿ ಸತ್ಕಾರ ಮಾಡಿದ ನಾಡದ್ರೋಹಿಗಳು ಈಗ ಕೊಲ್ಹಾಪೂರದ ಮೇಯರ್ ಲಾಟಕರ್ ಗೆ ಕನ್ನಡದ ನೆಲದಲ್ಲೇ ಪೌರ ಸನ್ಮಾನ ಮಾಡಲು ಕಾರ್ಯಕ್ರಮ ಆಯೋಜಿಸಿದ್ದಾರೆ

ಎಂ ಈ ಎಸ್ ನವರು ಜನೇವರಿ 18 ಹಾಗೂ 19 ರಂದು ನಿಪ್ಪಾಣಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಿ ಈ ಸಮ್ಮೇಳನದಲ್ಲಿ ಕೊಲ್ಹಾಪೂರದ ಮೇಯರ್ ಗೆ ಪೌರ ಸನ್ಮಾನ ಮಾಡಿಸಿ ಅವರ ಬಾಯಿಂದಲೇ ಬಾಷಾ ವೈಷಮ್ಯದ ಬೆಂಕಿ ಉಗುಳುವ ಕೆಲಸಕ್ಕೆ ನಮ್ಮ ಹೋಮ್ ಮಿನಿಸ್ಟರ್ ಅನುಮತಿ ಕೊಡ್ತಾರಂದ್ರೆ ಕರ್ನಾಟಕದಲ್ಲಿ ಇರೋದು ಯಾವ ಸರ್ಕಾರ ,ಎಂಈಎಸ್ ಓಟಿಗಾಗಿ ಕನ್ನಡ ,ನೆಲ ಜಲ ಬಾಷೆ ಮಾರಿಕೊಂಡ ಸರ್ಕಾರವೇ ಎನ್ನುವ ಅನುಮಾನ ಕನ್ನಡಿಗರಿಗೆ ಕಾಡುತ್ತಿದೆ

ಜನೇವರಿ ಹದಿನೇಳರಂದು ಹುತಾತ್ಮ ದಿನಾಚರಣೆ ಹೆಸರಿನಲ್ಲಿ ಎನ್ ಡಿ ಪಾಟೀಲ್ ,18 ರಂದು ಬೆಳಗಾವಿಗೆ ಶಿವಸೇನೆ ಫೈರ್ ಬ್ರ್ಯಾಂಡ್ ಸಂಜಯ ರಾವತ ಬೆಳಗಾವಿಗೆ ಬರುವ ಕಾರ್ಯಕ್ರಮವೂ ಫಿಕ್ಸ ಆಗಿದೆ ಈ ಎಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸರ್ಕಾರವನ್ನು ಕನ್ನಡದ ಸರ್ಕಾರ ಎನ್ನಬಹುದೇ ….?

ಹೋಮ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ಅವರಿಗೆ ಕನ್ನಡದ ಬಗ್ಗೆ ಕಳ ಕಳಿ ಇದೆ ಅಂತಾ ನಮಗೆ ಅನಿಸುತ್ತಿದೆ ಯಾಕಂದ್ರೆ ಪೋಲೀಸರು ಇವತ್ತು ಕುದ್ರೆಮನಿ ಸಾಹಿತ್ಯ ಸಮ್ಮೇಳನವನ್ನು ತಡೆದಿದ್ದಾರೆ ,ಖಾನಾಪೂರದಲ್ಲಿ ಚಂದಗಡ ಶಾಸಕನ ಸತ್ಕಾರಕ್ಕೆ ಬ್ರೇಕ್ ಹಾಕಿದಂತೆ ನಿಪ್ಪಾಣಿ ,ಕಾರ್ಯಕ್ರಮ ,ಮತ್ತು ಸಂಜಯ ರಾವತ ಕಾರ್ಯಕ್ರಮಕ್ಕೂ ಬ್ರೆಕ್ ಹಾಕಬೇಕು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *