ಸೋನಿಯಾ ,ಮಮತಾ ,ಇಮ್ರಾನ್ ಖಾನ್ ಭಾಷೆ ಆಡುತ್ತಿದ್ದಾರೆ- ಅನುರಾಗ ಠಾಖೂರ

ಬೆಳಗಾವಿ-ದೇಶದ ಕೆಲವು ರಾಜ್ಯಗಳಲ್ಲಿ ,ಕೆಲವು ಪ್ರದೇಶಗಳಲ್ಲಿ ,ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಪ್ರದಾನಿ ನರೇಂದ್ರ ಮೋದಿ ಮಾಡುತ್ತಿರುವದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸಹಿಸಲು ಸಾದ್ಯವಾಗುತ್ತಿಲ್ಲ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಅನುರಾಗ ಠಾಖೂರ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು

ಬೆಳಗಾವಿಯ ಸರ್ದಾರ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ತಿಳುವಳಿಕೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ತ್ರಿಪಲ್ ತಲ್ಲಾಕ್,ಕಾಶ್ಮೀರದಲ್ಲಿ ಕಲಂ 370 ಯಿಂದ ಮುಕ್ತಿ, ರಾಮನ ಜನ್ಮ ಭೂಮಿಯಲ್ಲಿ ಭವ್ಯ ರಾಮ ಜನ್ಮ ಭೂಮಿ ನಿರ್ಮಿಸುವ ಮಹತ್ವದ ನಿರ್ಣಯ ಕೈಗೊಂಡ ಪ್ರದಾನಿ ಮೋದಿ ಕಾಂಗ್ರೆಸ್ 72 ವರ್ಷಗಳಲ್ಲಿ ಮಾಡದ ಕೆಲಸವನ್ನು ಕೇವಲ ಆರು ತಿಂಗಳಲ್ಲಿ ಮಾಡಿರುವದರಿಂದ ಕಾಂಗ್ರೆಸ್ ದೇಶದ ಮುಸ್ಲೀಂರನ್ನು ಪ್ರದಾನಿ ಮೋದಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ,ಕೋಟ್ಯಾಂತರ ದೇಶಭಕ್ತರ ಆಶಿರ್ವಾದ ನರೇಂದ್ರ ಮೋದಿ ಅವರಿಗಿದೆ ಎಂದು ಅನುರಾಗ ಠಾಖೂರ ಹೇಳಿದ್ರು

ಬಾಂಗ್ಲಾದೇಶ,ಅಪಘಾನಿಸ್ತಾನ ,ಪಾಕಿಸ್ತಾನದಲ್ಲಿ ವಾಸವಾಗಿರುವ ಹಿಂದೂಗಳಿಗೆ ಆಗುತ್ತಿರುವ ದಬ್ಬಾಳಿಕೆ,ಅನ್ಯಾಯ ,ಆಗುತ್ತಿರುವದನ್ನು ಗಮನಿಸಿ ಹಿಂದೂಗಳಿಗೆ,ಸಿಕ್ಕರಿಗೆ,ಬುದ್ಧರಿಗೆ ಭಾರತದಲ್ಲಿ ಆಶ್ರಯ ನೀಡಲು ಪ್ರದಾನಿ ನರೇಂದ್ರ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಇಟಲಿಯಿಂದ ಭಾರತಕ್ಕೆ ಬಂದಿರುವ ಸೋನಿಯಾ ಗಾಂಧಿ ಅವರಿಗೆ ಪೌರತ್ವ ನೀಡಿದ್ದು ಭಾರತ ,ಸೋನಿಯಾ,ಮತ್ತು ಮಮತಾ ಬ್ಯಾನರ್ಜಿ ಪಾಕಿಸ್ತಾನದ ಇಮ್ರಾನ್ ಖಾನ್ ಭಾಷೆಯನ್ನಾಡುತ್ತಿದ್ದಾರೆ ಅವರು ಹೇಳಿದಂತೆ ಇವರು ಬಾಯಿ ಬಿಡುತ್ತಿದ್ದಾರೆ ಎಂದು ಅನುರಾಗ ಠಾಖೂರ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸುಳ್ಳು ಹೇಳುವ ಪಾರ್ಟಿ ,NRC _ಕಾಯ್ದೆ ಜಾರಿಗೆ ತಂದಿದ್ದು ದಿ ರಾಜೀವ ಗಾಂಧಿ ಈ ಕಾಯ್ದೆಗೂ ಬಿಜೆಪಿಗೂ ಯಾವುದೇ ಸಮಂಧವಿಲ್ಲ,ಅವರೇ ಜಾರಿಗೆ ತಂದಿರುವ NRC ಕಾಯ್ದೆಯ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಅನುರಾಗ ಠಾಖೂರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ,ಸ್ವಾತಂತ್ರ್ಯ ಸಿಕ್ಕ ಬಳಿಕವೂ ಕೋಟ್ಯಾಂತರ ಪರದೇಶಿಗಳನ್ನು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ,ಬಾಂಗ್ಲಾದೇಶ,ಅಪಘಾನಿಸ್ತಾನ,ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿ ಬಂದಿರುವ ಮುಸ್ಲೀಂರನ್ನು ಅವರ ದೇಶಕ್ಕೆ ವಾಪಸ್ ಕಳಿಸಲು ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ,ಪರದೇಶದ ನಾಗರೀಕರಿಗೆ ಮರಳಿ ಅವರ ದೇಶಕ್ಕೆ ಕಳಿಸಲು ಪೌರತ್ವ ತಿದ್ದುಪಡಿ ಕಾಯ್ದೆ ತರಲು ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕಾಯ್ತು ಎಂದು ಪ್ರಭಾಕರ ಕೋರೆ ಹೇಳಿದ್ರು

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆ ಇಲ್ಲ ಅವರು ನಮ್ಮ ಸಹೋದರರು,ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಅಪಪ್ರಚಾರ ಮಾಡಿ ಮುಸ್ಲೀಂ ಬಾಂಧವರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಪ್ರಭಾಕರ ಕೋರೆ ಆರೋಪಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ,ಶಾಸಕರಾದ ಅನೀಲ ಬೆನಕೆ,ಮಹಾದೇಚಪ್ಪಾ ಯಾದವಾಡ,ಮಹಾಂತೇಶ ಕವಟಗಿಮಠ, ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ,ಮುಕ್ತಾರ ಪಠಾಣ, ಸೇರಿದಂತೆ ಹಲವಾರು ಜನ ಬಿಜೆಪಿ ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.