ಬೆಳಗಾವಿ-ಮಹಾ ಮಾರಿ ಕೊರೋನಾ ಜನರ ಬದುಕನ್ನೇ ನುಂಗುತ್ತಿದೆ.ಲಾಕ್ ಡೌನ್ ನಿಂದಾಗಿ ಕಂಪನಿಗಳು ಶೆಟರ್ ಡೌನ್ ಮಾಡುತ್ತಿದ್ದರೆ ಅಲ್ಲಿ ದುಡಿದು ಬದುಕುವ ಕಾರ್ಮಿಕರು ಕಂಗಾಲಾಗುತ್ತಿದ್ದಾರೆ.
ಆರ್ಥಿಕ ಮುಗ್ಗಟ್ಟಿದೆ ಎಂದು ಬೆಳಗಾವಿಯ ಆಟೋಮೊಬೈಲ್ ಕಂಪನಿಯಿಂದು ಬಂದ್ ಮಾಡಿದ ಹಿನ್ನಲೆಯಲ್ಲಿ ಅಲ್ಲಿಯ ಕಾರ್ಮಿಕರು ಕೆಲಸ ಕಳೆದುಕೊಂಡು,ಎರಡು ತಿಂಗಳ ವೇತನವೂ ಸಿಗದೇ ಕಂಪನಿಯ ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದೆ.
*ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುವ 140ಕ್ಕೂ ಹೆಚ್ಚು ಕಾರ್ಮಿಕರು ಅತಂತ್ರವಾಗಿದ್ದಾರೆ. ಬೆಳಗಾವಿಯ ಬಾಲು ಇಂಡಿಯಾ ಕಂಪನಿ ಕಾರ್ಮಿಕರು ಈಗ ಅತಂತ್ರ ಪರಿಸ್ಥಿತಿಯಲ್ಲಿದ್ದು ಎರಡು ತಿಂಗಳ ವೇತನವೂ ಸಿಗದೇ ಪರದಾಡುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಕಾಕತಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಕಂಪನಿ ಈಗ ಬಂದ್ ಆಗಿದೆ ವೇತನ ಕೇಳಲು ಹೋದ ಕಾರ್ಮಿಕರನ್ನು ಗೇಟಿನ ಒಳಗಡೆ ಬಿಡದೇ ಈ ಕಂಪನಿ ಶೀಲ್ ಡೌನ್ ಮಾಡಿಕೊಂಡಿದೆ.
ಲಾಕ್‌ಡೌನ್ ಹಿನ್ನೆಲೆ ಮಾರ್ಚ್ 24 ರಿಂದ ಕಂಪನಿ ಬಂದ್ ಮಾಡಲಾಗಿತ್ತು.ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ 4ರಂದು ತೆರೆಯಲಾಗಿತ್ತು. ಮೇ 11ರವರೆಗೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕಂಪನಿ ಈಗ ಬಾಗಿಲು ಹಾಕಿಕೊಂಡಿದೆ.
ಮೇ 11ರಿಂದ ಕೆಲಸಕ್ಕೆ ಬರಬೇಡಿ ಅಂತಾ ಕಂಪನಿ ಗೇಟ್‌ಗೆ ನೋಟಿಸ್ ಹಚ್ಚಿದ ಕಂಪನಿಯ ಮಾಲೀಕ
ಮುಂಬೈ ಮೂಲದ ಜಸ್ಪಾಲ್ ಸಿಂಗ್ ಚಂದೊಕ್ ಈಗ ಕಾರ್ಮಿಕರಿಗೆ ಎರಡು ತಿಂಗಳ ವೇತನ ಕೊಡದೇ ಇರುವದರಿಂದ ಅಲ್ಲಿಯ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿ.ಸಂಕಷ್ಟದಲ್ಲಿರುವ ಕಾರ್ಮಿಕರು ದಿನನಿತ್ಯ ಕಂಪನಿಯ ಕಚೇರಿ ಎದುರು ಕುಳಿತು ಸಂಜೆ ಮನೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ.
ನ್ಯಾಯ ದೊರಕಿಸಿಕೊಡುವಂತೆ ಈ ಕಂಪನಿಯ ಕಾರ್ಮಿಕರು ಬೆಳಗಾವಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.