Breaking News

ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ

ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ*

*ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ

ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ

*ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ರವರು ಉಪಸ್ಥಿತರಿದ್ದರು.

ಕಹಾಮದ ಹಿರಿಯ ಅಧಿಕಾರಿಗಳು ಮದರ್ ಡೇರಿಯಲ್ಲಿರುವ ಹಾಲಿನ ಪುಡಿ ಘಟಕ ಮತ್ತು ಇತರೆ ಡೇರಿ ಚಟುವಟಿಕೆಗಳ ಬಗ್ಗೆ ಗಣ್ಯರಿಗೆ ವಿವರಿಸಲಾಯಿತು. ಕೇಂದ್ರ ಸಚಿವ ಅಮೀತ್ ಶಾ ಅವರು ಕಹಾಮ ಮತ್ತು ಡೇರಿ ಚಟುವಟಿಕೆಗಳನ್ನು ಶ್ಲಾಘಿಸಿ ಕೆಎಂಎಫ್ ಮತ್ತು ನಂದಿನಿ ಬ್ರ್ಯಾಂಡ್‍ನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವಂತೆ ಆಡಳಿತ ಮಂಡಳಿಯವರಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಆರ್. ಉಮಾಶಂಕರ್ ಮತ್ತು ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ
ಸಲ್ಮಾ ಕೆ ಫಹೀಮ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ರಾಜೇಂದ್ರ.ಕೆ ಮತ್ತು ಕಹಾಮದ ವ್ಯವಸ್ಥಾಪಕ ನಿರ್ದೇಶಕ ಬಿ ಸಿ ಸತೀಶ್ ಅವರು ಹಾಜರಿದ್ದರು.

 

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *