ಬೆಳಗಾವಿ- ಬೆಳಗಾವಿಯ ಪ್ರೆಸ್ ಪೋಟೋಗ್ರಾಫರ್ ಬಂಡು ಉರ್ಪ ಆನಂದ ಮೋಹಿತೆ ಗೋವಾ ಬಳಿ ಕಾರ್ ಪಲ್ಟಿಯಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ
ನಿನ್ನೆ ಮದ್ಯರಾತ್ರಿ ಗೋವಾದಿಂದ ಬೆಳಗಾವಿಗೆ ಮರಳುತ್ತಿರುವಾಗ ಗೋವಾ ಬಳಿ ಕಾರು ಪಲ್ಟಿಯಾಗಿ ಬಂಡು ಮೋಹಿತೆ ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಗೋವಾ ಸಾಕಳಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಬಂಡು ಮೋಹಿತೆ ಸಾವನ್ನೊಪ್ಪಿದ್ದಾರೆ
ಬಂಡು ಮೋಹಿತೆ ಇನ್ ಬೆಲಗಾಮ್ ಸುದ್ಧಿ ವಾಹಿನಿಯಲ್ಲಿ ಕ್ಯಾಮರಾಮನ್ ಆಗಿ ಪತ್ರಿಕಾರಂಗ ದಲ್ಲಿ ಸೇವೆ ಆರಂಭಿಸಿದ್ದರು ನಂತರ ವಿವಿಧ ಮರಾಠಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು
ಬಂಡು ಮೋಹಿತೆ ಕೆಲಸದ ನಿಮಿತ್ಯ ತಮ್ಮ ಗೆಳೆಯರ ಜೊತೆ ಗೋವಾಕ್ಕೆ ತೆರಳಿದ್ದರು ಗೋವಾದಿಂದ ಬೆಳಗಾವಿಗೆ ಮರಳುತ್ತಿರುವ ಸಂಧರ್ಭದಲ್ಲಿ ಕಾರು ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ
ಅತ್ಯಂತ ಸರಳ ವ್ಯೆಕ್ತಿಯಾಗಿದ್ದ ಮೋಹಿತೆ ಪತ್ರಿಕಾ ರಂಗದಲ್ಲಿ ಎಲ್ಲರ ಪ್ರೀತಿಯ ಬಂಡು ಎಂದೇ ಚಿರಪರಿಚಿತ ರಾಗಿದ್ದರು
ಇತ್ತೀಚಿಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪ್ರೆಸ್ ಪೋಟೋಗ್ರಾಫರ್ಸ ಅಸೋಸೇಶಿಯನ್ ಆಯೋಜಿಸಿದ ಪ್ರದರ್ಶನದಲ್ಲಿ ಬಂಡು ತಾವು ಕ್ಲಿಕ್ಕಿಸಿದ ಅಪರೂಪದ ಪೋಟೋಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು ಬಂಡು ಮೋಹಿತೆ ಬೆಳಗಾವಿ ಪುಲ್ ಬಾಗ್ ಗಲ್ಲಿಯ ನಿವಾಸಿ ಯಾಗಿದ್ದರು
ಇವರ ನಿಧನದಿಂದ ಬೆಳಗಾವಿ ಪತ್ರಿಕಾ ಪೋಟೋಗ್ರಾಫರ್ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದ್ದು ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಎಂದು ಬೆಳಗಾವಿ ಸುದ್ಧಿ ಶೃದ್ಧಾಂಜಲಿ ಅರ್ಪಿಸಿ ಪ್ರಾರ್ಥಿಸುತ್ತದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ