Breaking News

ಬೆಳಗಾವಿ ಜಿಲ್ಲೆಯಲ್ಲಿ ಗಮನ ಸೆಳೆದ ವಿನೂತನ ಶೈಲಿಯ ನವರಾತ್ರಿ ಸಂಬ್ರಮ..

 

ಬೆಳಗಾವಿ-

ಭಾರತದಲ್ಲಿ ವಿವಿಧ ಜಾತಿ ಧರ್ಮ ಗಳನ್ನು ಹಾಗೂ ವಿವಿಧ ರೀತಿ ಹಬ್ಬಗಳ ಆಚರಣೆ ಯನ್ನು ನಾವು ಕಾಣಬಹುದು.ಅದರಂತೆ ನವರಾತ್ರಿ ಉತ್ಸವದ ನಿಮಿತ್ತ ಒಬ್ಬರಿಗೊಬ್ಬರು ಭಂಡಾರ ಎರಚುವ ಮೂಲಕ ಅತೀ ವಿಜೃಂಭಣೆಯಿಂದ ಜಾತ್ರೆ ಆಚರಿಸಿ ಖುಷಿಪಡುತ್ತಾರೆ ಅದು ಯಾವ ಗ್ರಾಮ ಅಂತಿರಾ ಹಾಗಾದ್ರೆ ಈ ಸ್ಟೋರಿ ಓದಿ

ನೀವು ಈ ದೃಶ್ಯಗಳಲ್ಲಿ ನೋಡ್ತಾಇರೋದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ವಿಠ್ಠಲ ದೇವರ ಜಾತ್ರೆಯ ಸಂಭ್ರಮದ ಪರಿ.

ಇಲ್ಲಿ ಪ್ರತಿ ವರ್ಷ ನವ ರಾತ್ರಿ ಉತ್ಸವ ದ ನಿಮಿತ್ತ ಅತೀ ವೈಭವ ದಿಂದ ಭಯ,ಭಕ್ತಿಯಿಂದ ಜಾತ್ರೆಯಲ್ಲಿ ಭಕ್ತ ಸಮೂಹವು ಪಾಲ್ಗೊಳ್ಳುತ್ತದೆ.

ಕಳೆದ ಒಂಬತ್ತು ದಿನಗಳಿಂದ ದೇವಸ್ಥಾನದಲ್ಲಿ ಭಜನೆ, ಡೊಳ್ಳಿನ ಪದ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ,ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ.

ಈ ಜಾತ್ರೆಯ ವಿಶೇಷ ಅಂದ್ರೆ ಇಲ್ಲಿ ನ ಗ್ರಾಮಸ್ಥರು ಹಬ್ಬದ ಕೊನೆಯ ದಿನ ರಾತ್ರಿ ಇಡೀ ಭಂಡಾರವನ್ನು ದೇವರಿಗೆ ಎರಚುವುದಲ್ಲದೇ ಒಬ್ಬರಿಗೊಬ್ಬರು ಪರಸ್ಪರ ಭಂಡಾರದಲ್ಲಿ ಮಿಂದೆದ್ದು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತಾರೆ.

ಹಬ್ಬದ ಕೊನೆಯ ರಾತ್ರಿಯಲ್ಲಾ ಭಜನೆಗಳ,ಕೀರ್ತನೆಗಳ ಮೂಲಕ ಜಾಗರಣೆ ಮಾಡಿ ಬೆಳಗಿನ ಜಾವ ಮಹಾಪ್ರಸಾದವನ್ನು ಜಾತ್ರೆಯಲ್ಲಿನ ಭಕ್ತರಿಗೆ ಹಾಗೂ ಗ್ರಾಮಸ್ತರಿಗೆ ಉಣಬಡಿಸುತ್ತಾರೆ. ಅಷ್ಟೇ ಅಲ್ದೆ ಮಾಡಿದ ಅಡುಗೆಯಲ್ಲಿಯೂ ಸಹ ಭಂಡಾರವನ್ನು ಬೆರೆಸುವುದು ಇಲ್ಲಿಯ ಮತ್ತೊಂದು ವಿಶೇಷವಾಗಿದೆ.

ಈ ಗ್ರಾಮದ ಇತಿಹಾಸದ ಪುಟವನ್ನು ತೆರೆದು ನೋಡಿದಾಗ ನರಸಿಂಗಪುರದ ಜನರು ಮೂಲತಃ ಹಿಡಕಲ್ಲ ಡ್ಯಾಮ್ ಹೂನ್ನೂರ ಗ್ರಾಮದವರು. ಕಳೆದ 1974 ರಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಅಲ್ಲಿನ ಹಲವು ಗ್ರಾಮಗಳನ್ನು ಸ್ಥಳಾಂತರಿಸಿದ್ದರು. ಅದರಲ್ಲಿ ನರಸಿಂಗಪುರ ಗ್ರಾಮವು ಸಹ ಒಂದಾಗಿದೆ. ಅಲ್ಲದೆ ಈ ವಿಠಲ ದೇವಸ್ಥಾನ ಆ ಗ್ರಾಮದಲ್ಲಿ ಇತ್ತು ಈಗಲೂ ಸಹ ಅಲ್ಲಿಯೂ ಒಂದು ದೇವಾಲವಿದೆ ಎನ್ನುತ್ತಾರೆ ಇಲ್ಲಿಯ ಗ್ರಾಮಸ್ಥರು.ನರಸಿಂಗ ಪುರದಲ್ಲಿ ಬಂದ ಮೇಲೆ ವಿಠ್ಠಲ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಲ್ಲಿಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೆವೆ ಎಂದು ತಿಳಿಸುತ್ತಾರೆ ಇಲ್ಲಿಯ ಸ್ಥಳೀಯರು.

ಒಟ್ಟಾರೆಯಾಗಿ ನವರಾತ್ರಿ ಹಬ್ಬದ ನಿಮಿತ್ತ ವಿಭಿನ್ನ ರೀತಿಯಲ್ಲಿ ಒಬ್ಬಂತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಣೆ ಮಾಡುತ್ತಾ ಬಂದಿರುವ ಈ ಗ್ರಾಮದ ಜಾತ್ರೆಗೆ 2000ಕ್ಕೂ ಹೆಚ್ಚು ಭಕ್ತ ವೃಂದ ಸೇರಿ ವಿಠಲ ರುಕ್ಮೀಣಿ ಕೃಪೆಗೆ ಪಾತ್ರರಾಗುತ್ತಾರೆ. ನವರಾತ್ರೀಯ ಒಬ್ಬಂತ್ತನೆ ದಿನದ ರಾತ್ರಿ ಭಂಡಾರದ ಎರಚಾಡುತ್ತಾರೆ. ಇದರಿಂದ ನರಸಿಂಗಪುರ ಗ್ರಾಮಸ್ಥರಿಗೆ ತೊಂದರೆ ಆಗದಿದ್ದರೆ ಅಷ್ಟೇ ಸಾಕು ಎನ್ನುವುದೇ ನಮ್ಮ ಆಶಯವಾಗಿದೆ….

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *